ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳಿಗೆ ಪೊಲೀಸರ ಅಪಚಾರ..! ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ
ಇಡೀ ದೇಶದಲ್ಲಿ ಬಹಳ ಭಕ್ತಿಭಾವದಿಂದ ಲಕ್ಷಾಂತರ ಭಕ್ತರು ದೇವರ ಸನ್ನಿಧಿಗೆ ತೆರಳುವ ಪವಿತ್ರ ಕ್ಷೇತ್ರಗಳಲ್ಲಿ ಶಬರಿಮಲೆಯೂ ಒಂದು. ಅಯ್ಯಪ್ಪನ ದಿವ್ಯ ಸಾನಿಧ್ಯಕ್ಕೆ ಹೋಗಲು ಭಕ್ತರು ಕಟ್ಟುನಿಟ್ಟಿನ ವ್ರತಗಳನ್ನ ಆಚರಣೆ ಮಾಡುತ್ತಾರೆ. ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆಯಲು ಭಕ್ತರು ಹಾತೊರೆಯುತ್ತಾರೆ. ಅದಕ್ಕೆ ಬಹುಮುಖ್ಯ ಕಾರಣ ಪವಿತ್ರ ಕ್ಷೇತ್ರದ ಮೇಲಿರುವ ಭಕ್ತಿಭಾವ. ಆದರೆ ಶಬರಿಮಲೆಯ ಪವಿತ್ರವಾದ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಪೋಸ್ ಕೊಟ್ಟಿದ್ದು ಹೊಸ ವಿವಾದಕ್ಕೆ ಗುರಿಯಾಗಿದೆ. ಶಬರಿಮಲೆ ದೇವಾಲಯದ 18 ಮೆಟ್ಟಿಲುಗಳು ಅಯ್ಯಪ್ಪನ ಭಕ್ತರಿಗೆ…

