ಮಂಗಳೂರು: ಹೆಲ್ಮೆಟ್‌ನಲ್ಲಿ ಬಡಿದು ಕೆಎಸ್ಆರ್‌ಟಿಸಿ ಬಸ್ ಗಾಜು ಒಡೆದು ಸ್ಕೂಟರ್ ಸವಾರ ಪರಾರಿ..!

ಮಂಗಳೂರು: ರಸ್ತೆ ಸಂಚಾರದ ವೇಳೆ ಅಡ್ಡ ಬಂದಿದೆ ಎಂದು ಸ್ಕೂಟರ್ ಸವಾರನೋರ್ವನು ಹೆಲ್ಮೆಟ್‌ನಲ್ಲಿ ಬಡಿದು ಕೆಎಸ್ಆರ್‌ಟಿಸಿ ಬಸ್‌ನ ಮುಂಭಾಗದ ಗಾಜು ಒಡೆದು ಬೈಕ್ ಸವಾರನೋರ್ವನು ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ರವಿವಾರ ಸಂಜೆ 7.30ರ ಸುಮಾರಿಗೆ ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಎಂಬಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ KSRTC ಬಸ್ಸು ಸಂಚಾರ ಮಾಡುತ್ತಿತ್ತು. ಈ ವೇಳೆ ಸ್ಕೂಟರೊಂದು ಅಡ್ಡ ಬಂದಿದೆ. ಆಗ ಬಸ್ ಚಾಲಕ ಅರುಣ್ ಅಡ್ಡ ಬಂದ ಸ್ಕೂಟರ್ ಸವಾರನನ್ನು ಪ್ರಶ್ನಿಸಿದ್ದಾರೆ‌. ಇದರಿಂದ ಕೋಪಗೊಂಡ ಸ್ಕೂಟರ್ ಸವಾರ…

Read More

ಮಂಗಳೂರು: ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡಿಸಿ ಲಕ್ಷಾಂತರ ರೂ. ವಂಚನೆ..!

ಮಂಗಳೂರು: ವೆಬ್‌ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ 7.30 ಲ.ರೂ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇರಾ ಪಾಂಡೆ ಎಂಬಾಕೆ ಡೇಟಿಂಗ್ ಆ್ಯಪ್ ಮೂಲಕ ತನ್ನೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿ ಅದೇ ವೆಬ್‌ಸೈಟ್‌ನ್ನು ಹೋಲುವಂತಹ ಬೇರೊಂದು ವೆಬ್‌ಸೈಟ್ ಲಿಂಕ್ ಕಳುಹಿಸಿದ್ದಳು. ಬಳಿಕ ತಾನು ಹಂತ ಹಂತವಾಗಿ 8.50 ಲ.ರೂ. ಹೂಡಿಕೆ ಮಾಡಿದೆ. ಈ ಪೈಕಿ 1.20 ಲ.ರೂ. ವಿತ್‌ಡ್ರಾ ಮಾಡಿದೆ. ಉಳಿದ 7.30 ಲ.ರೂ….

Read More

ಇಂದು DYSP ಆಗಿ ಚಾರ್ಜ್‌ ತೆಗೆದುಕೊಳ್ಳಬೇಕಿದ್ದ ಅಧಿಕಾರಿ ದುರಂತ ಅಂತ್ಯ..!

ಹಾಸನ: ಇಂದು ಡಿವೈಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಇಂತಹ ಹೊತ್ತಿನಲ್ಲೇ ಅಧಿಕಾರಿ ಬಾಳಲ್ಲಿ ವಿಧಿಯಾಟವಾಡಿದೆ. ಡ್ಯೂಟಿ ರಿಪೋರ್ಟ್‌ಗೆ ಬಂದ ದಿನವೇ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಹರ್ಷವರ್ಧನ್, ಹಾಸನ ಬಳಿ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.‌ ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡಮೆಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷಬರ್ಧನ್ ದುರಂತ ಅಂತ್ಯ…

Read More

ಕೋಟ್ಯಂತರ ಹಣ ವಂಚನೆ: ತುಳು ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ದೂರು ದಾಖಲು

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ತುಳು ಸಿನಿಮಾ ಜೀಟಿಗೆ ನಿರ್ಮಾಪಕ ಅರುಣ್‌ ರೈ(Arun Rai) ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಅರುಣ್ ರೈ ವಿರುದ್ಧ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ ಅರುಣ್ ನಿರ್ಮಾಣ ಮಾಡುತ್ತಿದ್ದರು. ದೂರು ದಾಖಲಾದ ಬೆನ್ನಲ್ಲೆ ಬಂಧನ ಭೀತಿಯಿಂದಾಗಿ ಅರುಣ್‌ ರೈ ನಾಪತ್ತೆ ಆಗಿದ್ದಾರೆ. ಸಿನಿಮಾದ ಲಾಭಾಂಶದಲ್ಲಿ 60 ಲಕ್ಷ ಕೊಡುವುದಾಗಿ ನಿರ್ಮಾಪಕ ಅರುಣ್ ರೈ ಉದ್ಯಮಿಗೆ ನಂಬಿಸಿದ್ದರು. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ…

Read More

ವಕ್ಫ್ ಬೋರ್ಡ್ ವಜಾಗೊಳಿಸಿ ಸರ್ಕಾರ ಮಹತ್ವದ ಆದೇಶ..!!

ವಕ್ಫ್ ಮಂಡಳಿಯನ್ನು ವಿಸರ್ಜಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ದೇಶಾದ್ಯಂತ ವಕ್ಫ್ ಮಂಡಳಿಯ ವಿರುದ್ಧ ಜನರ ಪ್ರತಿಭಟನೆಯ ನಡುವೆಯೇ ಆಂಧ್ರಪ್ರದೇಶ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರನ್ವಯ ಸರ್ಕಾರ ಶನಿವಾರ ವಕ್ಫ್ ಬೋರ್ಡ್ ರಚನೆಯ ಹಿಂದಿನ ಆದೇಶವನ್ನು ಹಿಂಪಡೆದು ಜಿಒ 75ನ್ನು ಹೊರಡಿಸಿದೆ. ರಾಜ್ಯ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎನ್.ಡಿ.ಫಾರೂಕ್ ಮಾತನಾಡಿ, ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಹೊರಡಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಮಂಡಳಿಯ ಜಿವಿಒ-47 ಅನ್ನು ರದ್ದುಗೊಳಿಸಿ ಪ್ರಸ್ತುತ ಸಮ್ಮಿಶ್ರ ಸರ್ಕಾರ ಆದೇಶ…

Read More

ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಯತ್ನ; ಆರೋಪಿಯ ಬಂಧನ..!

ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನುಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ ಘಟನೆ ಪೆರ್ನೆಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ದೋಂತಿಲ್ಲ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತೌಫೀಕ್ (22) ಎಂದು ಗುರುತಿಸಲಾಗಿದೆ. ಗಸ್ತು ನಿರತ ಪೊಲೀಸರು ಶನಿವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ನಿಲ್ಲಿಸಲು ಸೂಚಿಸಿದರು. ರಿಕ್ಷಾ ಚಾಲಕ ಸೂಚನೆಯನ್ನು ಪರಗಣಿಸದೆ ಮುಂದಕ್ಕೆ ಚಲಿಸಿದಾಗ…

Read More

ಶಬರಿಮಲೆಯ ಮಾಳಿಗಪುರದಲ್ಲಿ ತೆಂಗಿನಕಾಯಿ ಒಡೆಯುವಂತಿಲ್ಲ: ಹೈಕೋರ್ಟ್‌

ಶಬರಿಮಲೆ: ಮಾಳಿಗಪುರಂ ಕ್ಷೇತ್ರದ ಸುತ್ತುಮುತ್ತ ತೆಂಗಿನ ಕಾಯಿ ಒಡೆಯುವಿಕೆ ಮತ್ತು ಅರಶಿನ ಪುಡಿ ಸಿಂಪಡಿಸುವಿಕೆ ಶಬರಿಮಲೆ ದೇವಸ್ಥಾನದ ಸಂಪ್ರದಾಯದಲ್ಲಿ ಒಳಗೊಂಡಿಲ್ಲ ಎಂದು ಅಭಿಪ್ರಾಯಪಟ್ಟ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ, ತೆಂಗಿನ ಕಾಯಿ ಒಡೆಯುವುದಕ್ಕೆ ನಿರ್ಬಂಧಿಸಿದೆ. ತೆಂಗಿನಕಾಯಿ ಒಡೆಯುವಿಕೆ ಹಾಗೂ ಅರಶಿನ ಪುಡಿ ಸಿಂಪಡಿಸುವಿಕೆ ಬಗ್ಗೆ ಇದೇ ನಿಲುವನ್ನು ಕ್ಷೇತ್ರದ ತಂತ್ರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಮಾಳಿಗಪುರ ಪರಿಸರದಲ್ಲಿ ಕೆಲವು ಭಕ್ತರು ತಾವು ಧರಿಸಿದ ಉಡುಪುಗಳನ್ನು ಅಲ್ಲೇ ಕಳಚಿ ಉಪೇಕ್ಷಿಸಿ ಹೋಗುವುದೂ ಆಚಾರ ಕ್ರಮವಲ್ಲ. ಆದ್ದರಿಂದ ಈ ವಿಷಯವನ್ನು…

Read More

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಹಳೆ ಕಟ್ಟಡದಲ್ಲಿ ಎರಡು ದಿನಗಳ ಮಂಗಳೂರು ಪಾರಂಪರಿಕ ಉತ್ಸವಕ್ಕೆ ಜಿಲ್ಲಾಧಿಕಾರಿ ಚಾಲನೆ

ಮಂಗಳೂರು: ಟಿಪ್ಪು ಸುಲ್ತಾನ್ ಮರಣದ ನಂತರ 1799ರ ಜುಲೈ 8ರಂದು ಮೇಜರ್ ಸರ್ ಥೋಮಸ್ ಮುನ್ರೊ ಪ್ರಥಮ ಜಿಲ್ಲಾ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ ಮಂಗಳೂರಿನ ಸ್ಟೇಟ್ ಬ್ಯಾಂಕಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಹಳೆ ಕಟ್ಟಡದಲ್ಲಿ ಎರಡು ದಿನಗಳ ಮಂಗಳೂರು ಪಾರಂಪರಿಕ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದೀಪ ಬೆಳಗಿಸಿ ಚಾಲನೆ ನೀಡಿ, ಒಂದು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಹಳೆ ಕಟ್ಟಡವನ್ನು ಸಂರಕ್ಷಿಸುವ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವ…

Read More

ಬಂಟ್ವಾಳ:  ಅರಣ್ಯ ಇಲಾಖಾ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಜಯರಾಮ‌ ಮೂಲ್ಯ ಸಾವು

ಬಂಟ್ವಾಳ : ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿರುವಾಗಲೇ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ವೀರಕಂಬಗ್ರಾಮದ ಮಜ್ಜೋನಿ ದಿವಂಗತ ಕೃಷ್ಣಪ್ಪ ಮೂಲ್ಯರ ಪುತ್ರ ಜಯರಾಮ‌ ಮೂಲ್ಯ(45) ಮೃತಪಟ್ಟವರಾಗಿದ್ದಾರೆ.ಅವರು ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಅ ಬಳಿಕ ಇವರು…

Read More

ಫೆಂಗಲ್‌ ಚಂಡಮಾರುತ: ಹಲವೆಡೆ ಭಾರಿ ಮಳೆ ಮುನ್ಸೂಚನೆ..!!

ಚೆನ್ನೈ :ಬಂಗಾಳಕೊಲ್ಲಿಯಲ್ಲಿ ಫೆಂಗಲ್‌ ಚಂಡಮಾರುತ ತೀವ್ರತೆ ಪಡೆದಿದೆ. , ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಗೆ ಫೆಂಗಲ್‌ ಚಂಡಮಾರುತ ಅಪ್ಪಳಿಸಲಿದೆ ಎಂದು ವರದಿಯಾಗಿದೆ. ತಮಿಳುನಾಡು ಹಾಗೂ ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಕೂಡ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ತಮಿಳುನಾಡು, ಪುದುಚೇರಿಯ ಜೊತೆಗೆ ಆಂಧ್ರದ ನೆಲ್ಲೂರು, ತಿರುಪತಿ, ಚಿತ್ತೂರು ಜಿಲ್ಲೆಗಳಿಗೂ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.ಇನ್ನು…

Read More