Headlines

ನಟ ಅಲ್ಲು ಅರ್ಜುನ್ ಅರೆಸ್ಟ್: 14 ದಿನಗಳ ಕಾಲ ನ್ಯಾಯಾಂಗ ಬಂಧನ

ಹೈದರಾಬಾದ್: ಥಿಯೇಟರ್ ನಲ್ಲಿ ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಚಿಕ್ಕಡಪಲ್ಲಿ ಠಾಣೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ನಾಂಪಲ್ಲಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಜೈಲುಪಾಲಾಗಿದ್ದಾರೆ.    

Read More

ಕಾರ್ಕಳ: ಬಾಲಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ..!! ಮುಸ್ಲಿಂ ಶಿಕ್ಷಣ ಸಂಸ್ಥೆ ಮುಖ್ಯಸ್ಥನ ವಿರುದ್ಧ ಆಕ್ರೋಶ

ಕಾರ್ಕಳ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನೊಬ್ಬ ಬಾಲಕನ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ.ಇಲ್ಲಿನ ತ್ವೈಬಾ ಗಾರ್ಡನ್ ಮುಖ್ಯಸ್ಥ ಸಅದಿ ಕಿಲ್ಲೂರು ಎಂಬವರು ಬಾಲಕನ ಮೈಮೇಲೆ ಬರೆ ಬರುವ ರೀತಿಯಲ್ಲಿ ಏಟು ನೀಡಿದ್ದಾರೆ.ಬಾಲಕನ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಜನಾಕ್ರೋಶ ವ್ಯಕ್ತವಾದ ಬಳಿಕ ಹಲ್ಲೆ ನಡೆಸಿದ ಸಂಸ್ಥೆಯ ಮುಖ್ಯಸ್ಥನನ್ನು ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಾಮಾಜಿಕ…

Read More

ಗರ್ಭಕೋಶದ ಕ್ಯಾನ್ಸರ್ ನ ಚಿಕಿತ್ಸೆಗೆ ಕೆರ್ವಾಶೆಯ ಲಲಿತಾ ಮೂಲ್ಯರಿಗೆ ಕುಲಾಲ ಚಾವಡಿಯಿಂದ ಆರ್ಥಿಕ ನೆರವು

ಕಾರ್ಕಳ: ಕೆರ್ವಾಶೆಯ ಪಾಲ್ದಾಕ್ಯಾರ್ ಎಂಬಲ್ಲಿ ವಾಸವಾಗಿರುವ ನಾರಾಯಣ ಮೂಲ್ಯರ ಪತ್ನಿ ಶ್ರೀಮತಿ ಲಲಿತಾರವರು ಗರ್ಭದ ಕ್ಯಾನ್ಸರ್ ಸಮಸ್ಯೆಗೆ ತುತ್ತಾಗಿದ್ದು ಹಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂಟು ಕಿಮೋಥೆರಪಿ ನಂತರ ಒಂದು ಶಸ್ತ್ರ ಚಿಕಿತ್ಸೆ ಕೂಡ ನಡೆದಿದ್ದು ಬಳಿಕ ಮೂರು ಕಿಮೋಥೆರಪಿ ಮಾಡಲಾಗಿದೆ. ಇನ್ನು ಮೂರು ಕಿಮೋಥೆರಪಿ ಆಗಬೇಕು ಎಂದು ವೈದ್ಯರು ಸಲಹೆ ನೀಡಿರುತ್ತಾರೆ. ಸದ್ಯಕ್ಕೆ ಲಲಿತಾರವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು ಸಂತಸದ ಸಂಗತಿ. ಆದರೆ ಆ ದಂಪತಿಗಳ ಬದುಕಿನಲ್ಲಿ ಧೀರ್ಘ ನೆಮ್ಮದಿಯ ನಿಟ್ಟುಸಿರಿಗೆ ಕಾಲವೇ ಉತ್ತರ…

Read More

Cyber ​​Fraud: ಉಪ್ಪಿನಂಗಡಿಯ ವ್ಯಕ್ತಿ ಕರೆ ಸ್ವೀಕರಿಸಿದ ಕೂಡಲೇ ಹಣ ವರ್ಗಾವಣೆ..!

ಉಪ್ಪಿನಂಗಡಿ: ಸೈಬರ್‌ ವಂಚಕರು ಹಣ ದೋಚಲು ಹೊಸ ಹೊಸ ತಂತ್ರ ಹುಡುಕುತ್ತಿದ್ದು, ನಗರದಲ್ಲಿ ಪೋನ್‌ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ವ್ಯಕ್ತಿಯೋರ್ವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೋರ್ವರಿಗೆ ಗುರುವಾರ ಮುಂಜಾನೆ ಪೋನ್‌ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ ಕೂಡಲೇ ಕರೆ ಕಡಿತಗೊಂಡಿತ್ತು. ಸ್ವಲ್ಪ ಹೊತ್ತಿನಲ್ಲೇ ಈ ದೂರವಾಣಿ ಸಂಖ್ಯೆ ಜೋಡಣೆ ಆಗಿದ್ದ ಬ್ಯಾಂಕಿನ ಖಾತೆಯಿಂದ ಹಣವರ್ಗಾವಣೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು. ಕೂಡಲೇ ಬ್ಯಾಂಕ್‌ಗೆ ದೂರು ಸಲ್ಲಿಸಿದಾಗ, 161 ರೂ. ವರ್ಗಾವಣೆಗೊಂಡಿದ್ದು, ಸಮರ್ಪಕ ಬ್ಯಾಲೆನ್ಸ್‌ ಇಲ್ಲದ ಕಾರಣ…

Read More

ಡ್ರೋನ್ ಪ್ರತಾಪ್ ಅರೆಸ್ಟ್…!! ಕಾರಣ ಏನು ಗೋತ್ತಾ..?

ತುಮಕೂರು : ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ (Chemical Blast) ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸೋಡಿಯಂ ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಟೀಕೆಗೆ ಒಳಗಾಗಿದ್ದರು. ಈ ಸಂಬಂಧ ಇಂದು (ಡಿಸೆಂಬರ್ 12) ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು, ಡ್ರೋನ್ ಪ್ರತಾಪ್​ನನ್ನು ಬಂಂಧಿಸಿದ್ದಾರೆ. ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದರು. ಕೆಮಿಕಲ್ ಎಸೆದಿದ್ದೇ…

Read More

ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಮೋದಿ ಸಂಪುಟ ಅನುಮೋದನೆ

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಮಹತ್ವದ ಮಸೂದೆಯನ್ನು ಇಂದು ಮೋದಿ ನೇತೃತ್ವದ ಸಂಪುಟ ಅನುಮೋದಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆಡಳಿತಾರೂಢ ಬಿಜೆಪಿ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯು ಐತಿಹಾಸಿಕ ಎಂದು ಬಣ್ಣಿಸಿದೆ. ಈ ಕ್ರಮವು ಚುನಾವಣಾ ವೆಚ್ಚ ಮತ್ತು ಆಡಳಿತ ಸ್ನೇಹಿಯಾಗಿದೆ ಎಂದು ತಿಳಿಸಿದೆ. ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್…

Read More

ಸುಮೊಟೋ ಕೇಸ್ – ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ,ರಮೇಶ್ ತೆಳ್ಳಾರುಗೆ ಜಾಮೀನು ಮಂಜೂರು

ಉಡುಪಿ : ಧರ್ಮ ದಂಗಲ್ ಕಾರಣಕ್ಕೆ ನಗರದಲ್ಲಿ ಸದ್ದು ಮಾಡಿದ್ದ ಪ್ರಕರಣ ಸಂಬಂಧ ಹಿಂದೂ ಮುಖಂಡರಿಗೆ ಜಾಮೀನು ಮಂಜೂರಾಗಿದೆ. ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಲಕ್ಷ ದೀಪೋತ್ಸವ ಸಂದರ್ಭ ಹಿಂದೂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಮೊದಲು ಪ್ರಾಶಸ್ಯ ನೀಡಬೇಕು ಎಂದು ಹೇಳಿದ ಕಾರಣಕ್ಕೆ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿತ್ತು. ಹಿಂದೂ ಜಾಗರಣ ವೇದಿಕೆಯ ರಮೇಶ್ ತೆಳ್ಳಾರು ಹಾಗೂ ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಮೇಲೆ ಕೇಸು ದಾಖಲಾಗಿತ್ತು. ಸುಮೋಟೋ ಕೇಸ್ ಖಂಡಿಸಿ ಪ್ರತಿಭಟನೆಗೆ ಕರೆ ನೀಡಿದ್ದರು ಎಂಬ…

Read More

ಉಳ್ಳಾಲ: ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಪರ್ಸ್, ಪಾದರಕ್ಷೆ, ಕೂಲಿಂಗ್ ಗ್ಲಾಸ್ ಇಟ್ಟು ವ್ಯಕ್ತಿ ಆತ್ಮಹತ್ಯೆ..!

ಉಳ್ಳಾಲ: ಇಲ್ಲಿನ ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಪರ್ಸ್, ಪಾದರಕ್ಷೆ, ಕೂಲಿಂಗ್ ಗ್ಲಾಸ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿದೆ. ಮಂಗಳೂರಿನ ಪಡೀಲು ವೀರನಗರ ನಿವಾಸಿ ಉದಯ್ ಕುಮಾರ್ (46) ಮೃತಪಟ್ಟ ವ್ಯಕ್ತಿ. ಉದಯ್ ಕುಮಾರ್ ಬುಧವಾರ ಮಧ್ಯಾಹ್ನ ಸೋಮೇಶ್ವರ ಸೋಮನಾಥ ಕ್ಷೇತ್ರದ ಮುಂಭಾಗ ತನ್ನ ಸ್ಕೂಟರ್ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದಾರೆ. ಬಳಿಕ ರುದ್ರಪಾದೆಯಲ್ಲಿ ಪರ್ಸ್, ಪಾದರಕ್ಷೆ, ಕೂಲಿಂಗ್ ಗ್ಲಾಸ್ ಇಟ್ಟು ನಾಪತ್ತೆಯಾಗಿದ್ದರು. ಬೀಚ್‌ನಲ್ಲಿ ಸುತ್ತಾಡುತ್ತಿದ್ದ ಹುಡಗನೊಬ್ಬ ರುದ್ರಪಾದೆಯಲ್ಲಿದ್ದ ಪರ್ಸ್‌ಅನ್ನು ಸ್ಥಳೀಯ ಗೂಡಂಗಡಿಯವರಿಗೆ…

Read More

ಮಂಗಳೂರು-ಸಿಂಗಾಪುರ ನೇರ ವಿಮಾನ ಯಾನ

ಮಂಗಳೂರು : ಹೊಸ ವರ್ಷದ ಕೊಡುಗೆ ಎಂಬಂತೆ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಯಾನ 2025ರ ಜನವರಿ 21 ರಿಂದ ಶುರುವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪೆನಿ ಈ ವಿಮಾನ ಹಾರಾಟ ಆರಂಭಿಸಲು ಮುಂದೆ ಬಂದಿದೆ. ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಶುಕ್ರವಾರದಂದು ಈ ವಿಮಾನ ಹಾರಾಟ ಸೇವೆ ಇರುತ್ತದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಕ್ಸ್ 862 ವಿಮಾನ 5.55 ಕ್ಕೆ ಹೊರಟು 13.25 ಕ್ಕೆ ಸಿಂಗಾಪುರ ತಲಪುತ್ತದೆ. ಮರು ಪ್ರಯಾಣದಲ್ಲಿ ಐಎಕ್ಸ್ 861…

Read More

ಬೆಳ್ಮಣ್‌: ಕ್ರೈಸ್ತ ಯುವಕನ ಅಯ್ಯಪ್ಪ ಭಕ್ತಿ;18ನೇ ಬಾರಿ ಶಬರಿಮಲೆ ತೀರ್ಥಾಟನೆಗೆ ಮುಂದಾದ ಆಜಿತ್‌ ಸೆರಾವೋ

ಬೆಳ್ಮಣ್‌: ಲಕ್ಷಾಂತರ ಹಿಂದೂ ಭಕ್ತರು ಅಯ್ಯಪ್ಪ ದರ್ಶನಕ್ಕಾಗಿ ತೆರಳುತ್ತಿದ್ದು, ಇವರ ಜತೆಗೆ ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ಆಜಿತ್‌ ಸೆರಾವೋ ಎಂಬ ಕ್ರೈಸ್ತ ಯುವಕನೂ ಯಾತ್ರೆಗೆ ಮುಂದಾಗಿದ್ದಾನೆ. ದಿ| ವಿಲಿಯಂ ಸೆರಾವೋ, ದುಲ್ಸಿನ್‌ ಸೆರಾವೋ ದಂಪತಿಯ ಅವಳಿ ಗಂಡು ಮಕ್ಕಳಲ್ಲಿ ಓರ್ವನಾದ ಅಜಿತ್‌ ನದ್ದು ಎಲೆಕ್ಟ್ರಿಕಲ್‌ ವೃತ್ತಿ. 18 ವರ್ಷಗಳ ಹಿಂದೆ ಪೊಳಲಿಯ ಗುರುಸ್ವಾಮಿಯೋರ್ವ ರಿಂದ ಪ್ರಭಾವಿತರಾಗಿ ಮಾಲೆ ಧರಿಸಿ ದರು. ಕೊರೊನಾ ಸಂದರ್ಭ ದಲ್ಲೂ ಅಯ್ಯಪ್ಪನ ದರ್ಶನ ತಪ್ಪಿಸಲಿಲ್ಲ. ಅಜಿತ್‌ ಹಿಂದಿನ 17 ವರ್ಷಗಳಲ್ಲಿ 5…

Read More