ಮಂಗಳೂರು: ಹೊಸವರ್ಷದ ಆಚರಣೆಗೆ ತರಿಸಿದ್ದ 9ಲಕ್ಷ ರೂ. ಮೌಲ್ಯದ ಮಾದಕದ್ರವ್ಯ ಸೀಝ್ – ಮೂವರು ಅರೆಸ್ಟ್

ಮಂಗಳೂರು: ನಗರದ ಕೂಳೂರು ನದಿ ದಂಡೆಯಲ್ಲಿ ಮಾರಾಟಕ್ಕೆಂದು ತಂದಿದ್ದ ಸುಮಾರು 9ಲಕ್ಷ ರೂ. ಮೌಲ್ಯದ ವಿವಿಧ ಮಾದಕದ್ರವ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಡುಪಿ, ಪೊನ್ನ, ಉದ್ಯಾವರ, ಸಂಪಿಗೆ ನಗರ ನಿವಾಸಿ ದೇವರಾಜ್ (37), ಉಡುಪಿ, ರಾಮಚಂದ್ರ ಲೈನ್ ಕಿನ್ನಿ ಮುಲ್ಕಿ ಹತ್ತಿರ ನಿವಾಸಿ ಮೊಹಮ್ಮದ್ ಫರ್ವೆಜ್ ಉಮರ್ (25), ಉಡುಪಿ, ಬ್ರಹ್ಮಗಿರಿ ನಿವಾಸಿ ಶೇಖ್ ತಹೀಮ್ (20) ಬಂಧಿತ ಆರೋಪಿಗಳು. ಬಂಧಿತರಿಂದ 5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7ಗ್ರಾಂ ಕೋಕೆನ್, 17ಗ್ರಾಂ…

Read More

ಮಂಗಳೂರು : ಬ್ಯಾಂಕ್ ಸಾಲದ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ – MCC Bank ಅಧ್ಯಕ್ಷ ಅನಿಲ್ ಲೋಬೊ ಅರೆಸ್ಟ್

ಮಂಗಳೂರು : ಬ್ಯಾಂಕ್ ಸಾಲದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನನ್ನು ಪೊಲೀಸರು ಬಂಧಿಸಿದ್ದಾರೆ. ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿದವರು. ಆತ್ಮಹತ್ಯೆಗೂ ಮುನ್ನ ಅವರು ತಾನು ಆತ್ಮಹತ್ಯೆ ಮಾಡಲು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋನೇ ಕಾರಣ ಎಂದು ಮೊಬೈಲ್ ವೀಡಿಯೋ ಮಾಡಿದ್ದರು. ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ…

Read More

ಸಚಿತಾ ರೈ ವಿರುದ್ದ ಮತ್ತೊಂದು ವಂಚನಾ ಕೇಸ್ ದಾಖಲು..!!

ಮಂಗಳೂರು: ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ಲಪಟಾಯಿಸಿದ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಡಿವೈಎಫ್‌ಐ ಮಾಜಿ ನೇತಾರೆ ಸಚಿತಾ ರೈ (27) ವಿರುದ್ಧ ಕಾಸರಗೋಡು ಪೊಲೀಸರು ಮತ್ತೊಂದು ದಾಖಲಿಸಿಕೊಂಡಿದ್ದಾರೆ. ಕೇಸ್ ಕಾಸರಗೋಡು ಸಮೀಪದ ರಾಮದಾಸನಗರದ ಯುವತಿಯೋರ್ವೆ ನೀಡಿದ ದೂರಿನಂತೆ ಕೇಸು ದಾಖಲಾಗಿದೆ. ನಗರದ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಸಂಶೋಧನಾ ಕೇಂದ್ರೀಯವಿದ್ಯಾಲಯದಲ್ಲಿ ಅಧ್ಯಾಪಿಕೆ ಉದ್ಯೋಗದ ಭರವಸೆಯೊಡ್ಡಿ 13.26 ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 2022ನೇ…

Read More

ಮಂಗಳೂರು: ಕ್ರೇನ್ ಪಲ್ಟಿ – ಗಂಭೀರ ಗಾಯಗೊಂಡಿದ್ದ ಚಾಲಕ ಸಾವು

ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಸರಹದ್ದಿನಲ್ಲಿ ಕಾಮಗಾರಿ ನಡೆಸಿ ತೆರಳುತ್ತಿದ್ದ ಬೃಹತ್ ಕ್ರೇನೊಂದು ಪಲ್ಟಿಯಾಗಿ ಉರುಳಿದ ಘಟನೆ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಬಳಿ ಸಂಭವಿಸಿದೆ.  ಕ್ರೇನ್ ಪಲ್ಟಿಯಾಗಿ ಕ್ರೇನ್ ಆಪರೇಟರ್ ಪ್ರಾಣ ಕಳೆದುಕೊಂಡಿದ್ದಾನೆ. ಮೃತರನ್ನು ಉತ್ತರ ಪ್ರದೇಶದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಜಾಧವ್ ಎಂದು ಗುರುತಿಸಲಾಗಿದೆ. ಕ್ರೇನ್ ಅದ್ಯಪಾಡಿಯಿಂದ ಕೆಂಜಾರ್ ಜಂಕ್ಷನ್ ಕಡೆಗೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆಯ ಇಳಿಜಾರಿನ ಭಾಗದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು 20…

Read More

ಡಿ. 22 ರಂದು ಕುಲಾಲ ವಾರ್ಷಿಕ ಕ್ರೀಡಾ ಕೂಟ-2024

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ.) ಕುಂದಾಪುರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ ರಿ. ಇದರ ಬೈಂದೂರು ಹಾಗು ಕುಂದಾಪುರ ವಿಧಾನ ಸಭಾಘಟಕಗಳ ವಾರ್ಷಿಕ ಕ್ರೀಡಾ ಕೂಟ-2024 ವು ನಡೆಯಲಿದೆ. ಕ್ರೀಡಾಕೂಟವು ದಿನಾಂಕ ಡಿಸೆಂಬರ್ 22 ರಂದು ಬಿದ್ಕಲ್ ಕಟ್ಟೆ, ಕಾಲೇಜು ಮೈದಾನದಲ್ಲಿ ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕೇತ್ರದ ಕುಲಾಲ ಸಮಾಜ ಭಾಂಧವರಿಗಾಗಿ ಕುಂಭಕ್ರೀಡೋತ್ಸವ- ಸಮುದಾಯದ ಸಂಭ್ರಮೋತ್ಸವ ನಡೆಯಲಿದೆ.

Read More

ಮಂಗಳೂರು: ಡಿಸೆಂಬರ್ 21 ರಿಂದ ಜನವರಿ 19 ರವರೆಗೆ “ಕರಾವಳಿ ಉತ್ಸವ”

ಮಂಗಳೂರು: ಡಿಸೆಂಬರ್ 21ರಿಂದ ಜನವರಿ 19ರವರೆಗೆ ಮತ್ತೊಮ್ಮೆ ‘ಕರಾವಳಿ ಉತ್ಸವ’ವನ್ನು ಕರ್ನಾಟಕ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿದೆ. “ಕರಾವಳಿಯ ನೈಜ ಸಂಸ್ಕೃತಿಯ ಅನಾವರಣ, ಸಂಪ್ರದಾಯಗಳ ಪ್ರದರ್ಶನ, ಆಹಾರ ಖಾದ್ಯಗಳ ಪರಿಚಯ, ವಿವಿಧ ವಿನೋದಾವಳಿಗಳೊಂದಿಗೆ ನಮ್ಮ ಧೀಮಂತ ಸಾಂಸ್ಕೃತಿಕ ಪರಂಪರೆಯ ಆಸ್ವಾದನೆ ಇರಲಿದೆ. ಇವೆಲ್ಲವೂ ಒಂದೇ ಜಾಗದಲ್ಲಿ ತುಳುನಾಡಿನ ಜನತೆಗೆ ಲಭ್ಯವಾಗಲಿವೆ. ಕೆಲವು ವರ್ಷಗಳ ಬಳಿಕ ಇದೇ ಡಿಸೆಂಬರ್ 21 ರಿಂದ ಜನವರಿ 19 ರವರೆಗೆ ಮತ್ತೊಮ್ಮೆ ‘ಕರಾವಳಿ ಉತ್ಸವ’ ಮೈದಳೆಯಲಿದೆ. ಕರ್ನಾಟಕ,…

Read More

ಮಂಗಳೂರು: ಕ್ರೇನ್ ಪಲ್ಟಿ – ಚಾಲಕನಿಗೆ ಗಂಭೀರ ಗಾಯ..!

ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ಸರಹದ್ದಿನಲ್ಲಿ ಕಾಮಗಾರಿ ನಡೆಸಿ ತೆರಳುತ್ತಿದ್ದ ಬೃಹತ್ ಕ್ರೇನೊಂದು ಪಲ್ಟಿಯಾಗಿ ಉರುಳಿದ ಘಟನೆ ಮಂಗಳವಾರ ರಾತ್ರಿ 7 ಗಂಟೆಯ ಸುಮಾರೀಗೆ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಬಳಿ ಸಂಭವಿಸಿದೆ. ಪಲ್ಟಿಯಾದ ಕ್ರೇನ್ ಚಾಲಕ (ಆಪರೇಟರ್) ಬೆಂಗಳೂರು ಮೂಲದವನಾಗಿದ್ದು ಪಲ್ಟಿಯಾದ ರಭಸಕ್ಕೆ ಎಸೆಯಲ್ಪಟ್ಟು ಕ್ರೇನ್ ನ ಅಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Read More

ಮದುವೆ ಕಾಗದದಲ್ಲಿ ಮೋದಿಗೆ ಮತಯಾಚನೆ- ಕೇಸ್ ರದ್ದು..!!

ಸುಳ್ಯ : ಮೋದಿಗೆ ಮತ ನೀಡಿ ಎಂದು ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಳ್ಯ ಮೂಲದ ವ್ಯಕ್ತಿಯೊಬ್ಬ ತಮ್ಮ ವಿವಾಹ ಪತ್ರಿಕೆಯಲ್ಲಿ ಮುದ್ರಣ ಮಾಡಿದ್ದರು. ಈ ಪ್ರಕರಣ ರದ್ದುಕೋರಿ ಶಿವಪ್ರಸಾದ್‌ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠ, ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಚುನಾವಣೆ ನೀತಿ ಸಂಹಿತೆಗಿಮತ ಮೊದಲೇ ಲಗ್ನ ಪತ್ರಿಕೆ ಮುದ್ರಣವಾಗಿರುವ ಕಾರಣ ಈ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿ ಆದೇಶ ಹೊರಡಿಸಿದೆ. ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್‌…

Read More

ವಿಷದ ಹಾವು ಕಡಿತ: ಚಿಕಿತ್ಸೆ ಫಲಕಾರಿಯಾಗದೆ ಕೃಷಿಕ ಸಾವು..!

ಉಡುಪಿ: ವಿಷದ ಹಾವು ಕಡಿತಕ್ಕೆ ಒಳಗಾಗಿದ್ದ ಕೃಷಿಕರೊಬ್ಬರು ಮೃತಪಟ್ಟ ಘಟನೆ ಉಡುಪಿ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಗುಜ್ಜರಬೆಟ್ಟು ನಿವಾಸಿ ದಿ.ಬೂಧ ಪೂಜಾರಿ ಎಂಬವರ ಪುತ್ರ, ಕೃಷಿಕ ಸುಂದರ ಪೂಜಾರಿ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಇವರಿಗೆ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೃಷಿ…

Read More

ಬಂಟ್ವಾಳ :  ರೈಲಿನಿಂದ ಬಿದ್ದು ವ್ಯಕ್ತಿ ಸಾವು

ಬಂಟ್ವಾಳ : ರೈಲಿನಿಂದ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆಯು ಡಿ.17ರ ಮಂಗಳವಾರದ ಬೆಳಿಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ತುಂಬೆ ಬಳಿಯ ನೆತ್ತರಕೆರೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟಿರುವ ವ್ಯಕ್ತಿಯು ಕಡಬ ತಾಲೂಕಿನ ಗೂನಡ್ಕದ ನಿವಾಸಿಯಾಗಿರುವ ಶಶಿಕುಮಾರ್ ಎಸ್. ಎಂದು ಗುರುತಿಸಲಾಗಿದೆ. 11 ಗಂಟೆಯ ಸುಮಾರಿಗೆ ಸುಬ್ರಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನಿಂದ ಕೆಳಗೆ ಬಿದ್ದು ಶಶಿಕುಮಾರ್ ಎಸ್. ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರು ರೈಲಿನ ಮೆಟ್ಟಿಲ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು, ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು…

Read More