ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ವಿದೇಶದಲ್ಲಿ ಅಡಗಿಕೊಂಡಿದ್ದ 6ನೇ ಆರೋಪಿ ಅರೆಸ್ಟ್​

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಮತ್ತೊಬ್ಬ ಆರೋಪಿಯನ್ನುಅರೆಸ್ಟ್ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಾಜೆ ನಿವಾಸಿ ಮಹಮ್ಮದ್ ಶರೀಫ್(55) ಬಂಧಿತ ಆರೋಪಿ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನದಲ್ಲಿ ಬಂಧಿಸಲಾಗಿದೆ. ಈತನ ಪತ್ತೆಗಾಗಿ ಎನ್​ಐಎ‌ ಅಧಿಕಾರಿಗಳು 5 ಲಕ್ಷ ರೂ. ರಿವಾರ್ಡ್ ಘೋಷಿಸಿದ್ದರು. ಈತ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್​ಐಎ ಅಧಿಕಾರಿಗಳು ಶರೀಫ್…

Read More

ಮಂಗಳೂರು: ಡಿಎಲ್ ಇಲ್ಲದೆ ವಾಹನ ಚಾಲನೆ – ಕೇಸ್‌ಗೆ ಹೆದರಿ ಆತ್ಮಹತ್ಯೆ..!!

ಮಂಗಳೂರು: ಡಿಎಲ್ ಇಲ್ಲದೆ ವಾಹನ ಚಲಾಯಿಸಿ ಅಪಘಾತ ನಡೆಸಿದ ತಡಂಬೈಲ್ ವೆಂಕಟ್ರಮಣ ಕಾಲೊನಿ ನಿವಾಸಿ ಮೋಹನ್ ಆಚಾರ್ಯ ಅವರ ಪುತ್ರ ಧನುಷ್ (20) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿಐ ವಿದ್ಯಾರ್ಥಿಯಾದ ಆತ ಡಿಸೆಂಬರ್‌ 11 ರಂದು ದ್ವಿಚಕ್ರ ವಾಹನ ಚಲಾಯಿಸಿ ಅಪ ಘಾತ ನಡೆಸಿದ್ದು ಈತನಲ್ಲಿ ಡಿಎಲ್ ಇರಲಿಲ್ಲ. ಆ್ಯಕ್ಟಿವಾ ಸವಾರನೊಂದಿಗೆ ಮಾತುಕತೆ ನಡೆಸಿದ ಪ್ರಕಾರ ಹಣ ನೀಡಲು ವ್ಯವಸ್ಥೆಯಾಗದ ಕಾರಣ ಹಾಗೂ ಇದರಿಂದ ಕೇಸ್ ಆದರೆ ತೊಂದರೆಯಾಗುತ್ತದೆ ಎಂದು ಹೆದರಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಾಗ…

Read More

ಸಿ. ಟಿ. ರವಿಗೆ ಬಿಗ್ ರಿಲೀಫ್ : ಕೂಡಲೇ ಬಿಡುಗಡೆ ಮಾಡಿ ಎಲ್ಲಿದ್ದಾರೋ ಅಲ್ಲಿಯೇ ರಿಲೀಸ್ ಮಾಡಿ- ಹೈಕೋರ್ಟ್ ಆದೇಶ

ಬೆಂಗಳೂರು: ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ ನೀಡಿದೆ. ತಮ್ಮ ಮೇಲಿರುವ ಪ್ರಕರಣ ರದ್ದು ಕೋರಿ ಸಿ.ಟಿ.ರವಿ ಅವರು ಸಲ್ಲಿಸಿದ್ದ ಅರ್ಜಿ ವಿವಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ ಉಮಾ ಅವರಿದ್ದ ಪೀಠವು, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಬಿಡುಗಡೆಗೆ ಮಧ್ಯಂತರ ಆದೇಶ ನೀಡಿದೆ. ಸಿಟಿ ರವಿ ಪರ ಹಿರಿಯ ವಕೀಲ ಸಂದೇಶ್ ಚೌಟ ಅವರು, ಪೊಲೀಸರು…

Read More

 ಕರ್ನಾಟಕವನ್ನು ‘ಗೂಂಡಾ ರಿಪಬ್ಲಿಕ್’ ಮಾಡಲು ಅವಕಾಶ ಕೊಡುವುದಿಲ್ಲ: MLC ಸಿ.ಟಿ ರವಿ 

ಬೆಂಗಳೂರು: ರಾಜ್ಯಾದ್ಯಂತ ತುಘಲಕ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ ನನ್ನ ಕಾರ್ಯಕರ್ತ ಬಂಧುಗಳೆ, ನಿಮ್ಮೆಲ್ಲರ ಬೆಂಬಲ ನನ್ನ ಶಕ್ತಿಯನ್ನು ಮತ್ತಷ್ಟು ಇಮ್ಮುಡಿಗೊಳಿಸಿದೆ, ದುಷ್ಟ ಶಕ್ತಿಗಳ ವಿರುದ್ಧ ಇನ್ನೂ ಹೆಚ್ಚಾಗಿ ಹೋರಾಡಲು ಶಕ್ತಿ ತುಂಬಿದೆ. ಭಾರತೀಯ ಜನತಾ ಪಾರ್ಟಿಯ ನಾವೆಲ್ಲರೂ ಒಂದಾಗಿ ಕರ್ನಾಟಕವನ್ನು “ಗೂಂಡಾ ರಿಪಬ್ಲಿಕ್” ಮಾಡಲು ಅವಕಾಶ ಕೊಡುವುದಿಲ್ಲ ಎಂಬುದಾಗಿ ಬಂಧನದ ಬಳಿಕ ಪರಿಷತ್ ಸದಸ್ಯ ಸಿ.ಟಿ ರವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು,ಇಂದು ನನ್ನ ಮೇಲೆ ದಾಖಲಾದ…

Read More

ಮಂಗಳೂರು: ಹಣ ಡಬಲ್ ಮಾಡುವುದಾಗಿ ನಂಬಿಸಿ 3.7 ಲಕ್ಷ ರೂ‌. ವಂಚನೆ

ಮಂಗಳೂರು : ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ ವಂಚಕನೋರ್ವನು ವ್ಯಕ್ತಿಯೊಬ್ಬರಿಗೆ 3.7 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.13ರಂದು ಅಪರಿಚಿತನೋರ್ವನು ಸಂತ್ರಸ್ತ ವ್ಯಕ್ತಿಯ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ GLOBAL INVESTMENTನಲ್ಲಿ 5000ರೂ. ಹಣ ಹೂಡಿಕೆ ಮಾಡಿದರೆ 10,000ರೂ. ವಾಪಾಸು ಕೊಡುವುದಾಗಿ ನಂಬಿಸಿದ್ದಾರೆ. ಆರೋಪಿಯ ಮಾತನ್ನು ನಂಬಿದ ವ್ಯಕ್ತಿ UPI ಮೂಲಕ 5,000ರೂ. ವರ್ಗಾವಣೆ ಮಾಡಿದ್ದಾರೆ. ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಅದೇ ದಿನ 10,000ರೂ. ವರ್ಗಾವಣೆ ಮಾಡಿರುತ್ತಾರೆ. ಡಿ.14ರಂದು…

Read More

ಅಕ್ರಮ ಬಾಂಗ್ಲಾದೇಶಿ ವಲಸಿಗರ ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚನೆ: ಪರಮೇಶ್ವರ್

ಬೆಳಗಾವಿ:  ಅಕ್ರಮ ಬಾಂಗ್ಲಾದೇಶಿಗಳನ್ನು ಗುರುತಿಸಿ ಗಡಿಪಾರು ಮಾಡಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ಬಿಜೆಪಿ ಸದಸ್ಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾವಿರಾರು ಅಕ್ರಮ ವಲಸಿಗರು ಭಾರತಕ್ಕೆ ಆಗಮಿಸುತ್ತಾರೆ ಮತ್ತು ದೇಶದ ವಿವಿಧ ಭಾಗಗಳಿಗೆ ತೆರಳುತ್ತಾರೆ. ಅವರನ್ನು ತಡೆಯಲು ನಮ್ಮ ರಕ್ಷಣಾ ಸಿಬ್ಬಂದಿಯ ಪ್ರಯತ್ನಗಳ ಹೊರತಾಗಿಯೂ, ಅವರು ಭಾರತವನ್ನು ಪ್ರವೇಶಿಸುತ್ತಾರೆ. ಅವರನ್ನು ಗುರುತಿಸಲು ವಿಶೇಷ ಕಾರ್ಯಪಡೆ ರಚಿಸಿದ್ದೇವೆ. ಪ್ರತಿ ವರ್ಷ ಸಾವಿರಾರು ಜನರನ್ನು ಗಡೀಪಾರು ಮಾಡಲಾಗುತ್ತದೆ. ಇಲ್ಲಿಯವರೆಗೆ, ಅಕ್ರಮವಾಗಿ ನೆಲೆಸಿದ್ದ…

Read More

ಹಿಂದೂ ಸಂಘಟನೆಗಳ ನಾಯಕರೇ ಇವರ ಟಾರ್ಗೆಟ್‌- 8 ಮಂದಿ ಉಗ್ರರು ಅರೆಸ್ಟ್!‌

ನವದೆಹಲಿ: ಆರ್‌ಎಸ್‌ಎಸ್‌ ಹಾಗೂ ಹಿಂದೂ ಸಂಘಟನೆಗಳ ನಾಯಕರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಎಂಟು ಭಯೋತ್ಪಾದಕರನ್ನು ಅಸ್ಸಾಂ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಕೇರಳದಿಂದ ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (STF) ಎಂಟು ಭಯೋತ್ಪಾದಕರನ್ನು ಬಂಧಿಸಿದೆ. ಬಂಧಿತರ ಪೈಕಿ ಅಲ್-ಖೈದಾ ಅಂಗಸಂಸ್ಥೆಯ ಸದಸ್ಯನೂ‌ ಆದ ಬಾಂಗ್ಲಾದೇಶದ ಭಯೋತ್ಪಾದಕ ಕೂಡಾ ಸೇರಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದ ಉಗ್ರ ಸದ್‌ ರಾಡಿ ಅಕಾ ಶಾಬ್‌ ಸೇಖ್‌ (32) ನವೆಂಬರ್‌ನಲ್ಲಿ ಭಾರತಕ್ಕೆ ಬಂದು, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಸ್ಲೀಪರ್‌ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದ….

Read More

ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸವರ್ಷ ಆಚರಣೆಗೆ ಹೀಗಿದೆ ಮಾರ್ಗಸೂಚಿ

ಮಂಗಳೂರು: ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೊಸವರ್ಷದ ಆಚರಣೆಯ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಯಿಂದ ಪೊಲೀಸ್ ಇಲಾಖೆ ಮಾರ್ಗಸೂಚಿಯನ್ನು ಸೂಚಿಸಿದೆ. ಎಲ್ಲರೂ ಈ ಮಾರ್ಗಸೂಚಿಗಳನ್ನು ಅನುಸರಿಸಿ ಹೊಸವರ್ಷ ಆಚರಣೆ ಮಾಡಬಹುದು ಎಂದು ತಿಳಿಸಿದೆ 1️ಎಲ್ಲಾ ಹೋಟೆಲ್‌, ರೆಸ್ಟೋರೆಂಟ್, ಕ್ಲಬ್‌, ರೆಸಾರ್ಟ್‌ ಮತ್ತು ಇತರ ಸಂಸ್ಥೆಗಳು ಹೊಸ ವರ್ಷಾಚರಣೆ ಆಯೋಜಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪೂರ್ವ ಅನುಮತಿ ಪಡೆಯಬೇಕು. ಅರ್ಜಿಗಳನ್ನು ಡಿಸೆಂಬರ್ 23ರ ಸಂಜೆ 5ಗಂಟೆಯೊಳಗೆ ಸಲ್ಲಿಸಬೇಕು. 2️ಹೊಸ ವರ್ಷಾಚರಣೆ ಕಾರ್ಯಕ್ರಮ ರಾತ್ರಿ 12ರೊಳಗೆ ಪೂರ್ಣಗೊಳ್ಳಬೇಕು. ಅರದ…

Read More

ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬಕ್ಕೆ ಲೈಟಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು..!

ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿ ಲೈಟಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕ ಕಾರಂದೂರು ಪೇರೋಡಿತ್ತಾಯ ಕಟ್ಟೆ ಶಾಲಾ ಬಳಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ತೆಂಕ ಕಾರಂದೂರು ಪೇರೋಡಿತ್ತಾಯನ ಕಟ್ಟೆ ಶಾಲಾ ಬಳಿಯ ಸ್ಟೀಪನ್ (14) ಎಂದು ಗುರುತಿಸಲಾಗಿದೆ. ಈತ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9 ನೇ ತರಗತಿ ವಿದ್ಯಾರ್ಥಿ. ಕ್ರಿಸ್ ಮಸ್ ಪ್ರಯುಕ್ತ ಇಂದು ಸಂಜೆ ಮನೆಗೆ ಸಾಂತಾಕ್ಲಾಸ್ ಬರುವ ಹಿನ್ನೆಲೆಯಲ್ಲಿ ಮನೆಗೆ ಆಲಂಕಾರ ಮಾಡುವ ವೇಳೆ ವಿದ್ಯುತ್…

Read More

ಮಂಗಳೂರು: ಲಂಚ ಸ್ವೀಕರಿಸುತ್ತಿದ್ದಾಗಲೇ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ..!!

ಮಂಗಳೂರು: ಆಸ್ತಿ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4ಲಕ್ಷ ರೂ‌. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪಿರ್ಯಾದಿದಾರರು ತಮ್ಮ ಮೃತಪಟ್ಟ ಅಜ್ಜಿಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರನ್ನು ಸೇರ್ಪಡೆ ಮಾಡಲು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಈ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್ ದಿನೇಶ್ ಒಂದು ವರ್ಷಕ್ಕಿಂತ ಅಧಿಕ…

Read More