ಬೆಳ್ತಂಗಡಿ: ಕಾರಿಗೆ ಟಿಪ್ಪರ್ ಡಿಕ್ಕಿ- ಚಾಲಕನಿಗೆ ಗಂಭೀರ ಗಾಯ

ಬೆಳ್ತಂಗಡಿ: ಉಜಿರೆ ಹಳೆಪೇಟೆಯಲ್ಲಿ ಕಾರಿಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ  ಹೊಡೆದ ಘಟನೆ ಇಂದು(ಡಿ.31) ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಬೆಳ್ತಂಗಡಿ ಕಕ್ಕೇನ ನಿವಾಸಿ ಮುನೀರ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ. ಅಪಘಾತದ ಸಂದರ್ಭದಲ್ಲಿ  ಕಾರಿನಲ್ಲಿದ್ದ  ಏರ್ ಬ್ಯಾಗ್ ಓಪನ್ ಆಗಿದೆ ಎಂದು ತಿಳಿದು ಬಂದಿದೆ.    

Read More

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯ ಎಂದು ವಂಚನೆ- ದಂಪತಿ ಅರೆಸ್ಟ್

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ. ಕಂಧಮಾಲ್ ಜಿಲ್ಲೆಯ ನಿವಾಸಿ ಪತ್ನಿ ಹನ್ಸಿತಾ ಅಭಿಲಿಪ್ಸಾ (38) ಹಾಗೂ ಪತಿ ಅನಿಲ್ ಕುಮಾರ್ ಮೊಹಂತಿ ಬಂಧಿತ ಆರೋಪಿಗಳು. ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರ ಮಗಳು ಮತ್ತು ಅಳಿಯ ಎಂದು ಹೇಳಿಕೊಂಡು ಈ ದಂಪತಿ ಜನರನ್ನು ವಂಚಿಸುತ್ತಿದ್ದರು. ಹಾಗೂ ನಾವು ಪ್ರಭಾವಿಗಳ ಸಂಪರ್ಕವನ್ನು ಹೊಂದಿದ್ದೇವೆ…

Read More

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ತಿಗಣೆ ಕಾಟ: ಕಿರುತೆರೆ ನಟನ ಪತ್ನಿಗೆ ಒಂದು ಲಕ್ಷ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಿಗಣೆ ಕಾಟದಿಂದಾಗಿ ಅನಾರೋಗ್ಯಕ್ಕೀಡಾದ ತುಳು ಸಿನಿಮಾ, ಕನ್ನಡ ಸೀರಿಯಲ್ ಕಲಾವಿದ ಶೋಭರಾಜ್ ಪತ್ನಿ ದೀಪಿಕಾ ಸುವರ್ಣರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಆಯೋಗ 1ಲಕ್ಷ ಪರಿಹಾರ ನೀಡಲು ಖಾಸಗಿ ಬಸ್ ಕಂಪೆನಿಗೆ ಆದೇಶಿಸಿದೆ. 2022ರ ಸಂದರ್ಭ ಶೋಭರಾಜ್ ಮತ್ತು ದೀಪಿಕಾ ಸುವರ್ಣ ಜೊತೆಯಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಜರಾಣಿ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿದ್ದರು. ಅದಕ್ಕಾಗಿ 2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ದೀಪಿಕಾ…

Read More

ನಿಷೇದಿತ ಮಾದಕ ವಸ್ತು MDMA ಸಾಗಾಟ ಮಾಡಲು ಯತ್ನ – ಇಬ್ಬರು ಆರೋಪಿಗಳ ಬಂಧನ

ಉಡುಪಿ: ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಟಪಾಡಿ ಕೋಟೆ ಗ್ರಾಮದ ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು ಬಡಾ ಉಚ್ಚಿಲ ನಿವಾಸಿ ಎನ್ ಎಂ ಮಹಮ್ಮದ್ ಮುಕ್ದುಮ್ ಅಲಿ(28) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಡುಪಿ ನಗರ ಠಾಣೆ ಪೊಲೀಸರು, ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್‌ ಬಳಿ ಕಾರಿನಲ್ಲಿ ನಿಷೇಧಿತ ಎಂಡಿಎಂಎ ಪೌಡರನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ…

Read More

ಬಿಜೆಪಿ ನಾಯಕರ ಹತ್ಯೆ ಸಂಚು ಪ್ರಕರಣ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಪಟ್ಟು, ಸಿಬಿಐ ತನಿಖೆಗೆ ಒತ್ತಾಯ

ಕಲಬುರಗಿ: ಬಿಜೆಪಿ ಶಾಸಕ, ನಾಯಕರ ಹತ್ಯೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಆಪ್ತನಿಂದ ಸಂಚು ಹಿನ್ನೆಲೆಯಲ್ಲಿ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು, ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಕಲಬುರಗಿ ಮನೆಯೆದುರು ಭಾರೀ ಪ್ರತಿಭಟನೆಯನ್ನೂ ಬಿಜೆಪಿ ಹಮ್ಮಿಕೊಂಡಿದೆ. ಆದರೆ, ಪ್ರಿಯಾಂಕ್ ಖರ್ಗೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ‌ ಹೇಳಿದ್ದು, ಸಾಕ್ಷಿಗಳಿದ್ದರೆ ತೋರಿಸಿ…

Read More

ಕಾರ್ಕಳ: ಆಭರಣದ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಕಳ್ಳತನ- ಆರೋಪಿ ಅರೆಸ್ಟ್

ಕಾರ್ಕಳ : ಕಳೆದ ಕೆಲವು ದಿನಗಳ ಹಿಂದೆ ಚಿನ್ನ ಖರೀದಿ ನೆಪದಲ್ಲಿ ಕಾರ್ಕಳದ ಆಭರಣದ ಅಂಗಡಿಗೆ ಬಂದ ಕಳ್ಳನೋರ್ವ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆರೋಪಿಯ ಪತ್ತೆಗಾಗಿ ಕಾರ್ಕಳ ಪೊಲೀಸರು ಧಾರವಾಡಕ್ಕೆ ತೆರಳಿ ಹುಬ್ಬಳ್ಳಿ ಧಾರವಾಡ ಪೊಲೀಸರ ನೆರವಿನಿಂದ ಜನ್ನತ್‌ ನಗರದ ನಿವಾಸಿಯಾದ…

Read More

ಮಂಗಳೂರು : ಯೂಟ್ಯೂಬ್ ವೀಡಿಯೋ ನೋಡಿ ನಕಲಿ ಷೇರಿನಲ್ಲಿ ಹೂಡಿಕೆ- ಮಹಿಳೆ ಕಳೆದುಕೊಂಡದ್ದು 8.75 ಲಕ್ಷ

ಮಂಗಳೂರು : ನಕಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವ ಮಹಿಳೆಯೊಬ್ಬರು 8.75 ಲಕ್ಷ ರೂ‌. ಹಣ ಕಳಕೊಂಡಿರುವ ಘಟನೆ ಮಂಗಳೂರಿನ ಕದ್ರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಷೇರ್‌‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ಯೂಟ್ಯೂಬ್‌ನಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ SMCTK App ಅನ್ನು ಇನ್‌ಸ್ಟಾಲ್ ಮಾಡಿದ್ದರು. ಬಳಿಕ ತನ್ನ ಮೊಬೈಲ್ ವಿವರ ಮತ್ತು ಬ್ಯಾಂಕ್ ಖಾತೆ ನಮೂದಿಸಿದ್ದರು. ಬಳಿಕ ಮಹಿಳೆಯ ಮೊಬೈಲ್ ನಂಬರನ್ನು ಎಸ್ಎಂಸಿ ಗ್ಲೋಬಲ್ ಸೆಕ್ಯುರಿಟೀಸ್, ಎಸ್ಎಂಸಿ ಮಾರ್ಕೆಟ್ ವಾಚ್…

Read More

ಅಮವಾಸ್ಯೆ ತೀರ್ಥ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ಸಮುದ್ರಪಾಲು..!

ಪಡುಬಿದ್ರಿ : ಆರು ಮಂದಿ ಗೆಳೆಯರು ಸೇರಿ ಹೆಜಮಾಡಿ ಸಮುದ್ರದಲ್ಲಿ ತೀರ್ಥ ಸ್ಥಾನಕ್ಕೆ ತೆರಳಿದ್ದು ಇಬ್ಬರು ನೀರುಪಾಲಾದ ಘಟನೆ ಸಂಭವಿಸಿದೆ. ಅಮಾನ್(19), ಅಕ್ಷಯ್ (19) ನೀರುಪಾಲಾದ ಬಾಲಕರು.ಹೆಜಮಾಡಿ ನಿವಾಸಿ ಪವನ್(19) ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಇವರು ಮದ್ಯಾಹ್ನದವರೆಗೂ ನೀರಾಟವಾಡುತ್ತಿದ್ದು, ಸುಮಾರು ಒಂದು ಕಿಮೀ ದೂರದವರೆಗೆ ಈಜಾಡಿಕೊಂಡು ಹೋಗಿದ್ದರು. ಮೂವರು ಕಡಲಿಂದ ಮೇಲೆ ಬಂದರೆ ಉಳಿದ ಮೂವರು ಸ್ವಲ್ಪ ಈಜಾಡಿ ಬರುವುದಾಗಿ ಮತ್ತೆ ನೀರಾಟವಾಡುತ್ತಿದಂತೆ ಓರ್ವನನ್ನು ಕಡಲು ತನ್ನೊಡಲಿಗೆ ಸೇರಿಸಿಕೊಳ್ಳುತ್ತಿದಂತೆ ಮತ್ತಿಬ್ಬರು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ.ಈ ಸಂದರ್ಭ ಅವಘಡ…

Read More

ಎಂಡಿಎಂಎ,ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಅರೆಸ್ಟ್

ಉಡುಪಿ: ಕಾರು ಮತ್ತು ದ್ವಿಚಕ್ರವಾಹನದಲ್ಲಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ. 28ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದು, 7,86,330 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಪ್ರೇಮನಾಥ್ ಯಾನೆ ಪ್ರೇಮ್ ಯಾನೆ ರೇವುನಾಥ್ (23), ಉಡುಪಿ ಪೆರ್ಡೂರಿನ ಶೈಲೇಶ್ ಶೆಟ್ಟಿ (24), ಕಾಪು ಬೊಮ್ಮರಬೆಟ್ಟು ನಿವಾಸಿ ಪ್ರಜ್ವಲ್ (28), ಮತ್ತು ಉಡುಪಿಯ ಬೊಮ್ಮರಬೆಟ್ಟುವಿನ ರತನ್ (27) ಬಂಧಿತರು. ಬಂಧಿತರಿಂದ 87,500 ಮೌಲ್ಯದ 1.112 ಕೆಜಿ ಗಾಂಜಾ, 2,00,000…

Read More

ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗು ಮೃತ್ಯು..! ರಕ್ಷಿಸಲು ಹೋದ ಅಜ್ಜನೊ ಗಂಭೀರ

ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗು ಮೃತಪಟ್ಟ ಘಟನೆ ನೆ.ಮುಡೂರು ಗ್ರಾಮದ ಗಾಳಿಮುಖ ಗೋಳಿತ್ತಡಿ ಎಂಬಲ್ಲಿ ಡಿ.29ರಂದು ಸಂಜೆ ನಡೆದಿದೆ. ಮೃತಪಟ್ಟ ಮಗುವನ್ನು ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಮೂರೂವರೆ ವರ್ಷದ ಪುತ್ರ ಝನು ಎಂದು ಗುರುತಿಸಲಾಗಿದೆ. ಮಗು ಆಟವಾಡುತ್ತಾ ಮನೆಯ ಅರ್ಥ್ ಗೆ ಸಂಬಂಧಿಸಿದ ತಂತಿಯನ್ನು ಮುಟ್ಟಿದ್ದು ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮಗುವನ್ನು ರಕ್ಷಿಸಲು ಹೋದ ಮಗುವಿನ ಅಜ್ಜ ಶಾಫಿ ಅವರಿಗೆ ವಿದ್ಯುತ್ ಶಾಕ್ ಹೊಡೆದು ಗಂಭೀರ…

Read More