ವಿಟ್ಲ:  ಉದ್ಯಮಿ ಮನೆಗೆ ನಕಲಿ ED ಅಧಿಕಾರಿಗಳ ರೇಡ್! ಬರೋಬ್ಬರಿ 30 ಲಕ್ಷ ದೋಚಿ ಪರಾರಿ!

ವಿಟ್ಲ: ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ಲೂಟಿ ಮಾಡಿದ ಘಟನೆ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲ್ಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡ ಬಂದು ದಿಡೀರ್ ದಾಳಿ ನಡೆಸಿದೆ.ನಾವು ಇಡಿ ಅಧಿಕಾರಿಗಳು ‘ ಎಂದು…

Read More

ಉಡುಪಿ: ಜೀವನದಲ್ಲಿ ಜಿಗುಪ್ಸೆ- ಆಟೋ ಚಾಲಕ ನೇಣಿಗೆ ಶರಣು

ಉಡುಪಿ: ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಿಕ್ಷಾ ಚಾಲಕ ಕಟಪಾಡಿ ಪಳ್ಳಿಗುಡ್ಡೆಯ ದೀಪಕ್ ಆ‌ರ್. (34) ಎಂಬವರು ಜೀವನದಲ್ಲಿ ಜಿಗುಪ್ಪೆಗೊಂಡು ರೂಂನ ಟಾರಸಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಉಡುಪಿಯ ಕಲ್ಸಂಕ ಆಟೋ ನಿಲ್ದಾಣದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಅವಿವಾಹಿತರಾಗಿದ್ದ ದೀಪಕ್ ಸರಳ ಸ್ವಭಾವ ಹಾಗೂ ಸ್ನೇಹ ಜೀವಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ವಿದೇಶಿ ಉದ್ಯೋಗಕ್ಕೆ ಅನಧಿಕೃತ ನೇಮಕಾತಿ – ಎಸ್ಸೆಲ್ ವಿಲ್ಕನ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೆ, ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡಿ ನೇಮಕಾತಿಯಲ್ಲಿ ತೊಡಗಿಸಿಕೊಂಡ ಮಂಗಳೂರಿನ ಎಸ್ಸೆಲ್ ವಿಲ್ಕನ್ ಎಂಬ ಸಂಸ್ಥೆಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ Protector of Emigrants, Ministry of External Affairs ಬೆಂಗಳೂರಿನಿಂದ ದೂರು‌ ಬಂದಿತ್ತು. ಮಂಗಳೂರಿನ ಬೆಂದೂರುವೆಲ್‌ನ Essel Willcon ಎಂಬ ಸಂಸ್ಥೆಯ M/S Hireglow Elegant Overseas International (OPC) Pvt, Mangaluru ಎಂಬ ಏಜನ್ಸಿಯಿಂದ…

Read More

ಮಂಗಳಾದೇವಿ ಲಿಯೋ ಕ್ಲಬ್ ವತಿಯಿಂದ ಕಡಲತೀರ ಸ್ವಚ್ಛತೆ

ಮಂಗಳೂರು : ಮಂಗಳಾದೇವಿ ಲಿಯೋ ಕ್ಲಬ್ ಆಶ್ರಯದಲ್ಲಿ 29/12/2024 ರಂದು ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಭಾರಿ ಉತ್ಸಾಹದಿಂದ ಕಡಲತೀರ ಸ್ವಚ್ಛತೆ ಅಭಿಯಾನ ನಡೆಸಲಾಯಿತು. ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು, ಸಮುದ್ರದ ತೀರವನ್ನು ಕಸಮುಕ್ತವಾಗಿಸಲು ಸದಸ್ಯರು ಮತ್ತು ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಭಾರತಿ ವಿ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಥಮಿಕ ಹಂತದಲ್ಲಿ ಕಡಲತೀರದಲ್ಲಿ ಶೇಖರವಾದ ಪ್ಲಾಸ್ಟಿಕ್, ಕಾಗದ, ಮಣ್ಣು ಸೇರಿದಂತೆ ವಿವಿಧ ರೀತಿಯ ಕಸಗಳನ್ನು ಸಂಗ್ರಹಿಸುವ…

Read More

ಮಂಗಳೂರು: ಪ್ರಾಣಿಗಳ ಮೇಲೆ ಕಾಳಜಿಯಿರುವ ಸ್ಪೀಕರ್ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ- ಹರೀಶ್ ಪೂಂಜಾ ಟಾಂಗ್!

ಮಂಗಳೂರು: ಕಾಂಗ್ರೆಸ್ ಸರಕಾರ ಗೋಹತ್ಯೆ ವಿಚಾರದಲ್ಲಿ ದ್ವಂದ್ವ ನಿಲುವು ತಳೆದಿದೆ. ಆನೆಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಆನೆಗಳಿಗೆ ಕೊಲ್ಲಲು ಅವಕಾಶ ಕೊಡಬೇಕೆಂದು ಸದನದಲ್ಲಿ ಮಾತನಾಡಿದ್ದೆ. ಆದರೆ ಸ್ಪೀಕರ್ ಯು.ಟಿ.ಖಾದರ್ ಮನುಷ್ಯರಿಗೆ ಮಾತ್ರವಲ್ಲ ಆನೆಗಳಿಗೂ ಬದುಕುವ ಹಕ್ಕಿದೆ ಎಂದಿದ್ದರು. ಹಾಗಾದ್ರೆ ಗೋವುಗಳಿಗೆ ಬದುಕುವ ಹಕ್ಕು ಇದೆಯಲ್ವಾ..? ದಯವಿಟ್ಟು, ಅವರು ಗೋಹತ್ಯೆ ನಿಲ್ಲಿ‌ಸಬೇಕೆಂದು ಹೇಳಿಕೆ‌ ಕೊಡಲಿ, ಬಿಜೆಪಿಯಿದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದೆವು. ಕಾಂಗ್ರೆಸ್ ಸರಕಾರ ಅದನ್ನು ವಾಪಾಸು ಪಡೆದಿದೆ. ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿಯಿದ್ದಲ್ಲಿ…

Read More

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ, ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್- ಯುವಕ ಅರೆಸ್ಟ್

ಪುತ್ತೂರು: ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಜತೆ ಪ್ರೀತಿಸುವ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಲ್ಲಿ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್‌ ನಿವಾಸಿ ಪ್ರವೀಣ್‌ ಪೂಜಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಆತ ಬಾಲಕಿ ಜತೆಗೆ ಸುತ್ತಾಟ ನಡೆಸಿ ವಿಶ್ವಾಸ ಗಳಿಸಿ ಬಳಿಕ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಅದರ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ. ಆಕೆ…

Read More

ಶ್ರೀ ವೀರನಾರಾಯಣ ಸೇವಾಸಮಿತಿ ಪುನಃರಚನೆ- ನೂತನ ಅಧ್ಯಕ್ಷರಾಗಿ ಶ್ರೀ ಕಿರಣ್ ಅಟ್ಲೂರು ಆಯ್ಕೆ

ಶ್ರೀ ವೀರನಾರಾಯಣ ಸೇವಾಸಮಿತಿ ಪುನಃರಚನೆ ಸಭೆಯು ಕ್ಷೇತ್ರದ ಸಭಾಂಗಣದಲ್ಲಿ ಜನವರಿ 2 ರಂದು ಸಂಜೆ 6 ಕ್ಕೆ ಸರಿಯಾಗಿ ಜರಗಿತು. ನೂತನ ಅಧ್ಯಕ್ಷರಾಗಿ ಶ್ರೀ ಕಿರಣ್ ಅಟ್ಲೂರು,ಕಾರ್ಯದರ್ಶಿಯಾಗಿ ಧೀರಜ್ ಕುಲಾಲ್, ಉಪಾಧ್ಯಕ್ಷರಾಗಿ ಮೋನಪ್ಪ ಕುಲಾಲ್ ,ಮತ್ತು ದಿನೇಶ್ ಕುಲಾಲ್ ಆಕಾಶಭವನ ,ಜೊತೆ ಕಾರ್ಯದರ್ಶಿಯಾಗಿ ಧನುಶ್ ರಾಜ್ ಮತ್ತು ಯಶರಾಜ್ ಸಂಘಟನಾ ಕಾರ್ಯದರ್ಶಿಯಾಗಿ ಸದಾನಂದ ಬೀಕರ್ಣಕಟ್ಟೆ ರತ್ನಾಕರ್, ಪದ್ಮನಾಭ ಮುಲ್ಲಕಾಡ್ ನಾಗೇಶ್ ಅದ್ಯಾಪಾಡಿ ಮತ್ತು ಹಲವಾರು ಹಿರಿಯ ಸದಸ್ಯರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಕೆ ಸುಂದರ್ ಕುಲಾಲ್ ಮತ್ತು…

Read More

ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

ರಾಯಚೂರು : ಧರ್ಮಾತೀತವಾಗಿ ಅಯ್ಯಪ್ಪಸ್ವಾಮಿಯನ್ನು ಆರಾಧಿಸುತ್ತಿದ್ದು, ಮುಸ್ಲಿಂ ವ್ಯಕ್ತಿಯೊಬ್ಬ ಮಾಲೆ ಧರಿಸುವ ಮೂಲಕ ಭಕ್ತಿ ಮೆರೆದಿದ್ದಾನೆ. ಜಿಲ್ಲೆಯ ದೇವದುರ್ಗ ಪಟ್ಟಣದ ಬಾಬು ಗೌರಂಪೇಟ್ ಮಾಲೆ ಧರಿಸಿದ್ದಾರೆ. ಮಕರ ಸಂಕ್ರಾಂತಿ ಪ್ರಯುಕ್ತ ಶಬರಿಮಲೆ ಅಯ್ಯಪ್ಪಸ್ವಾಮಿಗೆ ಹರಕೆ ಹೊತ್ತು ಮಾಲೆ ಧರಿಸುವವರ ಸಂಖ್ಯೆಗೇನು ಕಡಿಮೆ ಇಲ್ಲ. ಅನೇಕ ಹಿಂದು ಭಕ್ತರ ಜತೆಗೆ ಬಾಬು ಕೂಡ ಜತೆಯಾಗಿದ್ದಾರೆ.ಪ್ರತಿ ವರ್ಷ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಸರದಿ ಸಾಲಲ್ಲಿ ನಿಂತು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಬಾಬು ಅವರು ಎಲ್ಲರಂತೆ ಅಯ್ಯಪ್ಪ…

Read More

ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್‌’ಗೆ ದಿನಾಂಕ ಫಿಕ್ಸ್

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತ ಈ ಬಾರಿಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್ ನಡೆಸಲು ಸಜ್ಜಾಗಿದೆ. ಇದೀಗ ‘ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ್‌ಗೆ’ ದಿನಾಂಕ ನಿಗದಿಯಾಗಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಮೂರನೇ ಆವೃತ್ತಿ ಯ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಇದೇ 2025ರ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರೀಧರ್ ಶೆಟ್ಟಿ ತಿಳಿಸಿದ್ದಾರೆ. ಮಂಗಳೂರು…

Read More

ಇಂದಿನಿಂದ ಜನವರಿ 5ರವರೆಗೆ ಕುಕ್ಕೆ ಕ್ಷೇತ್ರದಲ್ಲಿ ಕಿರುಷಷ್ಠಿ ಮಹೋತ್ಸವ

ಸುಬ್ರಮಣ್ಯ: ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಜನವರಿ 5ರಂದು ಕಿರುಷಷ್ಠಿ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಇದರ ಅಂಗವಾಗಿ ಜನವರಿ 2ರಿಂದ 5ರವರೆಗೆ ಧಾರ್ಮಿಕ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ.2 ರಿಂದ ಸಂಜೆ 5:30ರಿಂದ ಧರ್ಮ ಸಮ್ಮೇಳನ ಸಭಾ ಕಾರ್ಯಕ್ರಮ ಜರುಗಲಿದ್ದು ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಜೆ 6:30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.ಅದೇ ರೀತಿ ಜನವರಿ 5ರವರೆಗೆ ಕ್ಷೇತ್ರದಲ್ಲಿ…

Read More