Headlines

ಕಾರು-ಬೈಕ್‍ ಭೀಕರ ಅಪಘಾತ : ಬೈಕ್‍ ಸವಾರ ಗಂಭೀರ

ಸುಳ್ಯ: ಕಾರು ಮತ್ತು ಬೈಕ್‍ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್‍ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಸಮೀಪದ ಕಲ್ವೆರ್ಪೆಯಲ್ಲಿ ನಡೆದಿದೆ. ಬೈಕ್ ಮಡಿಕೇರಿ ಕಡೆಯಿಂದ ಮಂಗಳೂರು ಕಡೆ ತೆರಳುತ್ತಿತ್ತು. ಕಾರು ಸುಳ್ಯದಿಂದ ಸಂಪಾಜೆ ಕಡೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ‌. ಗಾಯಾಳು ಬೈಕ್ ಸವಾರನನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.    

Read More

ಹಾಡ ಹಗಲೇ ಕಾರನ್ನು ಅಡ್ಡಗಟ್ಟಿ ದರೋಡೆ ಪ್ರಕರಣ- ಇಬ್ಬರು ಪೊಲೀಸ್ ವಶಕ್ಕೆ

ಮೈಸೂರು : ಇತ್ತೀಚಿಗೆ ಮೈಸೂರಲ್ಲಿ ಹಾಡ ಹಗಲೇ ಕೇರಳದ ಉದ್ಯಮಿಯ ಹಣ ಹಾಗೂ ಆತನ ಕಾರನ್ನು ದರೋಡೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕೇರಳದ ತ್ರಿಶೂರಿನ ರಜಿನ್ ಮತ್ತು ಪ್ರಮೋದ್ ಎಂದು ತಿಳಿದುಬಂದಿದೆ. ರಜಿನ್ ಮೂಲಕವೇ ದರೋಡೆಕೋರರು ವಾಹನ ಬಾಡಿಗೆ ಪಡೆದಿದ್ದರು. ರಜಿನನ್ನು ಸದ್ಯ ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಇನ್ನೋರ್ವ ಆರೋಪಿ ಪ್ರಮೋದ್ ನನ್ನು ತ್ರಿಶೂರಿನಲ್ಲಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಜಿನ್ ಮತ್ತು…

Read More

ಅತೀ ಶೀಘ್ರದಲ್ಲೇ ಮಂಗಳೂರು- ಉಡುಪಿ 10 ಕೆಎಸ್ಸಾರ್ಟಿಸಿ ಎಲೆಕ್ಟ್ರಿಕ್ ಬಸ್‌

ಮಂಗಳೂರು: ಕಾರ್ಕಳ- ಮೂಡುಬಿದಿರೆ- ಮಂಗಳೂರು ಮಾರ್ಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಮಂಗಳೂರು- ಉಡುಪಿ ನಡುವೆ 10 ಎಲೆಕ್ಟ್ರಿಕ್ ಬಸ್‌ ಗಳನ್ನು ಪರಿಚಯಿಸಲು ಮುಂದಾಗಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, “ಪ್ರಸ್ತುತ ಈ ಮಾರ್ಗದಲ್ಲಿ ಕೇವಲ ಎರಡು ಕೆಎಸ್‌ಆರ್‌ಟಿಸಿ ಬಸ್‌ ಗಳು ಮಾತ್ರ ಸಂಚರಿಸುತ್ತಿದ್ದು, ಎರಡರಲ್ಲೂ ಪ್ರಯಾಣಿಕರು ತುಂಬಿದ್ದಾರೆ. ಸಾರ್ವಜನಿಕರು ಹೆಚ್ಚಿನ ಬಸ್‌ಗಳಿಗೆ ಮನವಿ ಮಾಡಿದ್ದಾರೆ. ನಮ್ಮ ವಿಭಾಗಕ್ಕೆ ಒಟ್ಟು 45 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ನಾವು ಈಗ ಚಾರ್ಜಿಂಗ್ ಸ್ಟೇಷನ್‌…

Read More

ಮಂಗಳೂರು: ಸ್ಟ್ರೀಟ್‌ಫುಡ್ ಫೆಸ್ಟ್‌ಗೆ ವೈರಲ್ ಚಾಯ್‌ವಾಲಾ ಡಾಲಿಗೆ ಆಹ್ವಾನ – ನಟ ರಾಜ್‌ ಬಿ. ಶೆಟ್ಟಿ ಟೀಕೆ

ಮಂಗಳೂರು: ಕುಡ್ಲ ಪ್ರತಿಷ್ಠಾನದ ವತಿಯಿಂದ ಲಾಲ್‌ಬಾಗ್-ಲೇಡಿಹಿಲ್‌ನಲ್ಲಿ ನಡೆಯುತ್ತಿರುವ ಸ್ಟ್ರೀಟ್‌ಫುಡ್ ಫೆಸ್ಟ್ ಗೆ ವೈರಲ್ ಚಾಯ್‌ವಾಲಾ ಡಾಲಿಗೆ ಆಹ್ವಾನ ನೀಡಿದ್ದಕ್ಕಾಗಿ ಖ್ಯಾತ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಟೀಕಿಸಿದ್ದಾರೆ. “ಡಾಲಿ ಚಾಯ್‌ವಾಲಾ ಮಂಗಳೂರಿನವರು ಅಲ್ಲದೇ ಇರುವುದು ಖುಷಿಯ ವಿಚಾರ. ಒಂದು ವೇಳೆ ಅವರು ಮಂಗಳೂರಿನವರಾಗಿದ್ದರೆ ಅವರ ಅಂಗಡಿಗಳನ್ನು ಬುಲ್ಡೋಝರ್ ಮೂಲಕ ಧ್ವಂಸ ಮಾಡಲಾಗುತ್ತಿತ್ತು” ಎಂದು ಇತ್ತೀಚೆಗಿನ ಟೈಗರ್ ಕಾರ್ಯಾಚರಣೆ ಹೆಸರಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಬುಲ್ಡೋಝರ್ ಬಳಸಿ ತೆರವುಗೊಳಿಸಿರುವ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ. ಬಿಜೆಪಿ ಆಡಳಿತದ ಮಂಗಳೂರು…

Read More

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ NIA

ಸುಳ್ಯ : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಬಂಧಿತ ವ್ಯಕ್ತಿ ಅತೀಕ್ ಅಹ್ಮದ್ ನನ್ನು ಜನವರಿ 20 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯ ಎಂದು ಗುರುತಿಸಲಾದ ಅಹ್ಮದ್, ಜುಲೈ 2022 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ…

Read More

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಹೇಳಿಕೆ ನೀಡದಂತೆ ತಿಮರೋಡಿಗೆ ಹೈಕೋರ್ಟ್ ಸೂಚನೆ

ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಮಾನಹಾನಿ ಹಾಗೂ ಅವಹೇಳನಕರ ಹೇಳಿಕೆಗಳನ್ನು ನೀಡದದಂತೆ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ತಿಮರೋಡಿ ಮತ್ತು ಸಂಗಡಿಗರು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಲ್ಲದೆ ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ನ್ಯಾಯಾಂಗ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿಂದನೆ ಮಾಡಿರುವುದಾಗಿ ಅರ್ಜಿದಾರರು ಮನವರಿಕೆ ಮಾಡಿದ್ದನ್ನು ಹೈಕೋರ್ಟ್ ತೀವ್ರವಾಗಿ ಪರಿಗಣಿಸಿ ಖಡಕ್ ಆದೇಶ ನೀಡಿದೆ. ಕ್ಷೇತ್ರ ಧರ್ಮಧಿಕಾರಿ ಡಿ….

Read More

ಚಾರ್ಮಾಡಿಯ ಗುಡ್ಡ ಪ್ರದೇಶದಲ್ಲಿ ಬೆಂಕಿ..!!

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದು ಬಂದಿಲ್ಲ. ಕಾಡ್ಗಿಚ್ಚಿನಿಂದ ಪ್ರಾಣಿಸಂಕುಲ ಸೇರಿದಂತೆ ಅಪರೂಪದ ಸಸ್ಯ ಸಂಪತ್ತು ನಾಶವಾಗಿರುವ ಅಪಾಯ ಎದುರಾಗಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ವಿಭಾಗದ ಘಾಟಿ ಪ್ರದೇಶ ಈ ಸ್ಥಳಕ್ಕೆ ಸಮೀಪದಲ್ಲಿದ್ದು, ಅಲ್ಲಿಗೂ ಬೆಂಕಿ ವ್ಯಾಪಿಸುವ…

Read More

ಶ್ರೀ ವೀರನಾರಾಯಣ ಮಾತೃ ಮಂಡಳಿಯ ಅಧ್ಯಕ್ಷೆಯಾಗಿ ಪಾರ್ವತಿ ಶೇಖರ್.ಬಿ.ಕೆ ಆಯ್ಕೆ

ಇತಿಹಾಸ ಪ್ರಸಿದ್ಧ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಮುಂದಿನ ಅವಧಿಗೆ ದೇವಳದ ಮಾತೃ ಮಂಡಳಿಯ ನೂತನ ಅಧ್ಯಕ್ಷೆಯಾಗಿ ಪಾರ್ವತಿ ಶೇಖರ್.ಬಿ.ಕೆ ಶಕ್ತಿನಗರ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷೆಯಾಗಿ ನಾಗವೇಣಿ ಮಾಧವ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಕಿಶೋರ್, ಜತೆ ಕಾರ್ಯದರ್ಶಿಯಾಗಿ ಮಮತಾ ದೇವದಾಸ್, ಕೋಶಾಧಿಕಾರಿಗಳಾಗಿ ಪುಷ್ಪ ಸುಂದರ್ ಹಾಗೂ ಭಾರತಿ.ವಿ, ಜತೆ ಕೋಶಾಧಿಕಾರಿಗಳಾಗಿ ಮೋಹಿನಿ ಮೋನಪ್ಪ ಹಾಗು ಸುಕನ್ಯ ಪ್ರಜ್ವಲ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಚಲಾ ನಾಗೇಶ್ ಹಾಗೂ ಜಯಶ್ರೀ ನಂತೂರು, ಜತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೌಮ್ಯ ಕಿಶೋರ್, ಕ್ರೀಡಾ ಕಾರ್ಯದರ್ಶಿಗಳಾಗಿ ಭಾರತಿ…

Read More

ಮಂಗಳೂರು: ನಾಲ್ಯಪದವು ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

ಮಂಗಳೂರು: ಶಕ್ತಿನಗರದ ನಾಲ್ಯಪದವು ಪಿ.ಎಂ. ಶ್ರೀ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವು ಶಾಲೆಯ ನೂತನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ವಿದ್ಯಾದೀವಿಗೆ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ದೇವಾನಂದ ದೀಪ ಪ್ರಜ್ವಲಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ “ಶಾಲೆಯಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿದೆ. ಪ್ರತಿಯೊಂದು ಯೋಜನೆಗಳನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಶಾಲಾ ಅಭಿವೃದ್ಧಿ ಸಮಿತಿ, ವಿದ್ಯಾದೀವಿಗೆ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ ಮತ್ತು ಹಳೆ ವಿದ್ಯಾರ್ಥಿ…

Read More

ಸಿಂಹ ಘರ್ಜನೆ 2025 : ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಮಂಗಳಾದೇವಿ ಕ್ಲಬ್

ಮಂಗಳೂರು: ಲಯನ್ಸ್ ಕ್ಲಬ್ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317D ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆ ಸಿಂಹ ಘರ್ಜನೆ 2025 ದಿನಾಂಕ 19/1/2025 ನೇ ಭಾನುವಾರ ಮಂಗಳೂರಿನ ಉರ್ವಾ ಚರ್ಚ್ ಸಭಾಂಗಣದಲ್ಲಿ ನಡೆಯಿತು . ಈ ಸ್ಪರ್ಧೆಯಲ್ಲಿ ನೃತ್ಯ, ನಾಟಕ, ಮತ್ತು ಇತರ ಕಲೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಸ್ಪರ್ಧಾರ್ಥಿಗಳಿಗೆ ಉತ್ತಮ ವೇದಿಕೆ ದೊರೆಯಿತು. ಪ್ರತಿ ವಿಭಾಗದಲ್ಲಿಯೂ ಸ್ಪರ್ಧಾರ್ಥಿಗಳ ಸೃಜನಶೀಲತೆ ಮತ್ತು ಪ್ರತಿಭೆಯನ್ನು ತೀರ್ಪುಗಾರರು ಹಾಗೂ ಪ್ರೇಕ್ಷಕರು ಹೃತ್ಪೂರ್ವಕವಾಗಿ ಮೆಚ್ಚಿದರು. ಸ್ಪರ್ಧೆಯ ಕೊನೆಯ ವೇಳೆಗೆ ಒಟ್ಟು ವಿಜೇತರನ್ನು ಘೋಷಿಸಲಾಯಿತು. ಮಂಗಳಾದೇವಿ ಲಯನ್ಸ್ &…

Read More