Headlines

ಬಂಟ್ವಾಳ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿ

ಬಂಟ್ವಾಳ: ರಸ್ತೆ ಬದಿಯಲ್ಲಿ ಖಾಲಿ ಜಾಗದಲ್ಲಿ ನಿಲ್ಲಿಸಿ ಟಯರ್ ಚೆಕ್ ಮಾಡುತ್ತಿದ್ದ ವೇಳೆ 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಗಾಯವಿಲ್ಲದೆ ಪಾರಾಗಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ. ವಿಟ್ಲದಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ವಾಪಸು ವಿಟ್ಲಕ್ಕೆ ಬರುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿದೆ. ಕಡೆಗೋಳಿ ಎಂಬಲ್ಲಿ ಆಂಬ್ಯುಲೆನ್ಸ್ ವಾಹನದ ಚಕ್ರದಲ್ಲಿ…

Read More

ಬೆಳ್ತಂಗಡಿ: 8 ತಿಂಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ದೈವದ ಪಾತ್ರಿ ಆತ್ಮಹತ್ಯೆ

ಬೆಳ್ತಂಗಡಿ: ಇನ್‌ಸ್ಟಾಗ್ರಾಂ ಹುಡುಗಿಯೊಬ್ಬಳಿಗೆ ಲೈಕ್ ವಿವಾದದಲ್ಲಿ ವಿವಾಹ ನಿಶ್ಚಿತಾರ್ಥಗೊಂಡ ಹುಡುಗಿ ಪ್ರಶ್ನೆ ಮಾಡಿದ್ದಕ್ಕೆ ದೈವದ ಪಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಲೇಲು ನಿವಾಸಿ ಚೇತನ್ (25) ಆತ್ಮಹತ್ಯೆ ಮಾಡಿಕೊಂಡವರು. ದೈವದ ಪಾತ್ರಿಯಾಗಿದ್ದ ಇವರು ,ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಕಂದಾವರ ಗ್ರಾಮದ ಓಣಿಬಾಗಿಲು ಮನೆ ನಿವಾಸಿ  ಚೈತನ್ಯಾಳೊಂದಿಗೆ 8 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜನವರಿ. 21ರಂದು ಬೆಳಗ್ಗೆ ಚೇತನ್ ಮಾತ್ರ ಮನೆಯಲ್ಲಿದ್ದು, ತಾಯಿ ಪುಷ್ಪಾ ಅವರು ತನ್ನ ತವರು ಮನೆಯಲ್ಲಿದ್ದ…

Read More

ಉಡುಪಿ: ಯಕ್ಷಗಾನ ಕಲಾವಿದನಿಗೆ ಮನೆಯಲ್ಲಿ ಬಲಾತ್ಕಾರವಾಗಿ ಕೂಡಿ ಹಾಕಿ ಹಲ್ಲೆ

ಉಡುಪಿ:  ಹಣದ ವ್ಯವಹಾರಕ್ಕೆ ಸಂಬಧಿಸಿದಂತೆ ಯಕ್ಷಗಾನ ಕಲಾವಿದರೊಬ್ಬರನ್ನು ಮನೆಯಲ್ಲಿ ಬಲಾತ್ಕಾರವಾಗಿ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ ಪಡುಬಿದ್ರಿ ನಡ್ಸಾಲು ಗ್ರಾಮದ ನಿತಿನ್ ಆಚಾರ್ಯ(31) ಹಲ್ಲೆಗೆ ಒಳಗಾಗಿರುವ ಕಲಾವಿದ. ಸಸಿಹಿತ್ಲು ಶ್ರೀಭಗವತಿ ಯಕ್ಣಗಾನ ಮೇಳದ ಕಲಾವಿದರಾಗಿರುವ ಇವರು, ಅವರ ಸ್ನೇಹಿತ ಪಾವಂಜೆ ಮೇಳದ ಕಲಾವಿದ ಸಚಿನ್‌ನಿಂದ  ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿ ಕಟ್ಟುತ್ತಿದ್ದರು. ಆದರೆ ನಿಗದಿತ ಸಮಯದೊಳಗೆ ಸಾಲವನ್ನು ಕಟ್ಟುತ್ತಿಲ್ಲ ಎಂಬ ಕಾರಣದಿಂದ ಸಚಿನ್, ಆತನ ಉದ್ಯಾವರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿ,…

Read More

ಮಂಗಳೂರು: ಮಸಾಜ್ ಪಾರ್ಲರ್‌ಗೆ ರಾಮಸೇನೆ ಕಾರ್ಯಕರ್ತರ ದಾಳಿ ಪ್ರಕರಣ – ಟಿವಿ ಕ್ಯಾಮರಮ್ಯಾನ್ ಸಹಿತ 14ಮಂದಿ ಅರೆಸ್ಟ್

ಮಂಗಳೂರು: ನಗರದ ಬಿಜೈನಲ್ಲಿರುವ ಮಸಾಜ್ ಪಾರ್ಲರ್‌ಗೆ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ಚಾನೆಲ್ ಕ್ಯಾಮರಾಮ್ಯಾನ್ ಸಹಿತ 14ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಮರಮ್ಯಾನ್ ಶರಣ್ ರಾಜ್, ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ್, ರಾಮಸೇನೆಯ ಕಾರ್ಯಕರ್ತರಾದ ಫರಂಗಿಪೇಟೆಯ ಹರ್ಷರಾಜ್, ವಾಮಂಜೂರಿನ ಮೋಹನ್‌ದಾಸ್, ಕಾಸರಗೋಡಿನ ಪುರಂದರ, ವಾಮಂಜೂರಿನ ಸಚಿನ್, ರವೀಶ್, ಅಂಕಿತ್, ಬೆಂಜನಪದವಿನ ಸುಕೇತ್, ಮೂಡುಶೆಡ್ಡೆಯ ಕಾಳಿಮುತ್ತು, ಬೊಂಡಂತಿಲದ ಅಭಿಲಾಷ್, ವಾಮಂಜೂರಿನ ದೀಪಕ್, ನೀರುಮಾರ್ಗದ ವಿಘ್ನೇಶ್, ವಾಮಂಜೂರಿನ ಪ್ರದೀಪ್ ಪೂಜಾರಿ ಬಂಧಿತ ಆರೋಪಿಗಳು ಇಂದು ಬೆಳಗ್ಗೆ ಸುಮಾರು 11:50ಕ್ಕೆ, 11ಮಂದಿಯ ತಂಡ ಮಂಗಳೂರು…

Read More

ಕಾರ್ಕಳ: ಟೆಂಪೋಗೆ ಸರಕಾರಿ ಬಸ್ ಡಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

ಕಾರ್ಕಳ: ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಇಂದು ಬೆಳಗ್ಗೆ ಸರಕಾರಿ ಬಸ್ ವೊಂದು ಟೆಂಪೊಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದ್ದು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಚಿಕ್ಕೋಡಿ ಡಿಪೊಗೆ ಸೇರಿದ ಬಸ್ ಬೆಳಗಾವಿ ಕಡೆಯಿಂದ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದಾಗ ಸಾಣೂರು ರಾಮ ಮಂದಿರದ ಬಳಿ ನಿಂತಿದ್ದ ಟೆಂಪೊಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಹಲವು ಪ್ರಯಾಣಿಕರು ಮತ್ತು ಚಾಲಕ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು. ಹೆಚ್ಚಿನ…

Read More

ಮಂಗಳೂರು: ಅನೈತಿಕ ಚಟುವಟಿಕೆ ಆರೋಪ- ಮಸಾಜ್ ಸೆಂಟರ್ ಮೇಲೆ ತಂಡದಿಂದ ದಾಳಿ..!

ಮಂಗಳೂರು: ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಮಸಾಜ್ ಪಾರ್ಲರ್ ಒಂದರ ಮೇಲೆ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಿಜೈ ಕೆಎಸ್ಆರ್ ಟಿಸಿ ಬಳಿಯ ಪ್ರಸಾದ್ ಅತ್ತಾವರ ನೇತೃತ್ವದ ಕಲರ್ಸ್ ಎಂಬ ಮಸಾಜ್ ಸೆಂಟರ್‌ಗೆ ರಾಮ ಸೇನಾ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ವೇಳೆ ಮಸಾಜ್ ಸೆಂಟರ್ ನಲ್ಲಿದ್ದ ಪಿಠೋಪಕರಣಗಳನ್ನು ಹಾನಿ ಮಾಡಿದ್ದಾರೆ. ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ವೇಳೆ, ನಾಲ್ಕು…

Read More

ವಿಟ್ಲ : ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ಅರ್ಚಕರಿಗೆ ಡಿಕ್ಕಿ ಹೊಡೆದ ಡ್ರೋನ್ – ಭಕ್ತರ ಆಕ್ರೋಶ

ವಿಟ್ಲ: ಅಪರೇಟರ್ ನಿಯಂತ್ರಣ ತಪ್ಪಿ ಡ್ರೋನ್ ರಥದ ಮೇಲಿದ್ದ ಅರ್ಚಕರ ತಲೆಗೆ ಬಡಿದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವ ವೇಳೆ ನಡೆದಿದೆ. ನಿನ್ನೆ ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ಒಂದು ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ. ಈ ವೇಳೆ ದೇವರ ಮೂರ್ತಿ ಹೊತ್ತ ಮುಖ್ಯ ಅರ್ಚಕರು ರಥದ ಮೇಲೆ ತೆರಳಿದ್ದರು. ಡ್ರೋನ್ ಬಡಿದ ವೇಳೆ ದೇವರ ಮೂರ್ತಿ ಹೊತ್ತಿದ್ದ ಅರ್ಚಕರು…

Read More

ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಸ್ ಕಂಡಕ್ಟರ್ ಅರೆಸ್ಟ್

ಮೂಡುಬಿದಿರೆ: ಬಸ್ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಕ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಬಸ್ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಎಂದು ಗುರುತಿಸಲಾಗಿದೆ. ಮಹಿಳೆಯರು ಪ್ರತಿನಿತ್ಯ ಶಾಲೊಮ್ ಬಸ್ ನಲ್ಲಿ ಕೆಲಸಕ್ಕೆ ಬರುತ್ತಿದ್ದರು, ಕೆಲವೊಮ್ಮೆ ಬೇರೆ ಬಸ್ ಗಳಲ್ಲಿ ಸಂಚರಿಸುತ್ತಿದ್ದರು. ಈ ನಡುವೆ ಬಸ್ ಕಂಡಕ್ಟರ್ ಪ್ರಶಾಂತ್ ಪೂಜಾರಿ ಪ್ರತಿ ದಿನ ಇದೇ ಬಸ್ಸಿನಲ್ಲಿ ಬರದಿದ್ದರೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಆಗದು ಎಂದು ನಿರಾಕರಿಸಿದ್ದಾನೆ…

Read More

ಉಡುಪಿ: ಮನೆಗಳ್ಳತನ ಪ್ರಕರಣ ದಂಪತಿ ಬಂಧನ..!

ಉಡುಪಿ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಗ್ರಾಮದಲ್ಲಿ ಜ.21ರಂದು ನಡೆದಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವರಿ 21 ರಂದು ರಾತ್ರಿ 8.00 ಗಂಟೆಗೆ ಆರೋಪಿಗಳಾದ ಕುಂದಾಪುರದ ಗುಜ್ಜಾಡಿ ನಿವಾಸಿಗಳಾದ ನರಸಿಂಹ ಅವರ ಪುತ್ರ ವಿನಾಯಕ್ (41) ಮತ್ತು ವಿನಾಯಕ್ ಅವರ ಪತ್ನಿ ಪ್ರಮೀಳಾ (30) ಎಂದು ಗುರುತಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ ಬೆಳಿಗ್ಗೆ 10.15 ರಿಂದ 11.30 ರ ನಡುವೆ ಕಳ್ಳತನ ನಡೆದಿದೆ. ಕುಂದಾಪುರ…

Read More

ಗೋವಂಶ ಸುರಕ್ಷೆಗಾಗಿ ಜ.25ಕ್ಕೆ ಉಪವಾಸ ವ್ರತ, ಒಂದು ವಾರ ಪಾರಾಯಣ, ಜಪ ಅಭಿಯಾನ: ಪೇಜಾವರ ಶ್ರೀ

ಉಡುಪಿ: ರಾಜ್ಯದ ರಾಜಧಾನಿ ಬೆಂಗಳೂರು, ನಂಜನಗೂಡು ಸೇರಿದಂತೆ ಇತರೆಡೆ ನಡೆಯುತ್ತಿರುವ ಗೋವುಗಳ ಮೇಲಿನ ಕ್ರೌರ್ಯ, ದೌರ್ಜನ್ಯ ಖಂಡಿಸಿ ಎಲ್ಲರೂ ಜ.25ರಂದು ಒಂದು ದಿನದ ಉಪವಾಸ ವ್ರತ ಹಾಗೂ ಜ.23ರಿಂದ 29ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರ ಜಪ ಅಭಿಯಾನ ಕೈಗೊಳ್ಳುವಂತೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ. ಪ್ರಕಟಣೆ ನೀಡಿರುವ ಶ್ರೀಮಠವು ” ಹಿಂದೂಗಳ ಶ್ರದ್ಧೆಯಂತೆ ಗೋವುಗಳ ಮೇಲಿನ ಹಿಂಸೆ, ಗೋವಧೆ, ದುರಾಕ್ರಮಣಗಳು, ಗೋವಿನ ಆರ್ತನಾದಗಳು ಯಾವ…

Read More