ತುಳುನಾಡಿನ ದೈವಗಳ ಮೊರೆ ಹೋದ ತಮಿಳು ನಟ ವಿಶಾಲ್-ಹರಿಪಾದೆ ಜಾರಂದಾಯ ನೇಮ ವೀಕ್ಷಣೆ
ಮುಲ್ಕಿ: ಇತ್ತೀಚೆಗೆ ತೆರೆಕಂಡ ತಮಿಳು ಚಿತ್ರ ಮದಗಜರಾಜ ಚಿತ್ರದ ಪ್ರಚಾರದ ವೇಳೆ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳಿನಿ ಖ್ಯಾತ ನಟ ವಿಶಾಲ್ ದೈವನ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದರು. ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದರು ಅನಾರೋಗ್ಯದಿಂದ ವಿಶಾಲ್ ಸುದ್ದಿಯಾಗಿದ್ದರು, ಮದಗಜರಾಜ ಸಿನೆಮಾ ಪ್ರಚಾರದ ವೇಳೆ ನಟನ ಸ್ಥಿತಿ ನೋಡಿ ಅಭಿಮಾನಿಗಳು…

