ಪುತ್ತೂರು: 21ಲಕ್ಷ ಮೌಲ್ಯದ ಕಾಫಿ ಕಳ್ಳತನ- ಐವರು ಬಂಧನ, 80 ಚೀಲ ವಶಕ್ಕೆ

ಪುತ್ತೂರು: ಲಕ್ಷಾಂತರ ಮೌಲ್ಯದ ಕಾಫಿ ಚೀಲಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಕಾಫಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಆಶ್ಲೇಷ ಭಟ್, ಈತನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಹಾಗೂ ಮಹಮ್ಮದ್ ಅಶ್ರಫ್ ಬಂಧಿತ ಆರೋಪಿಗಳು. ಕಬಕ ನಿವಾಸಿ ತೃತೇಶ್ (29) ಅವರ ದೂರಿನಂತೆ, ಲಾರಿ ಮಾಲಕ-ಚಾಲಕರಾದ ಅವರು, ಡಿ.3ರಂದು ಪಿರಿಯಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆಜಿ…

Read More

ನಾಪತ್ತೆಯಾಗಿದ್ದ ಮಂಗಳೂರಿನ ಯುವಕ ಚೆನ್ನೈಯಲ್ಲಿ ಪತ್ತೆ..!!

ಡಿ.6ರಂದು ಮಂಗಳೂರಿನಿಂದ ನಾಪತ್ತೆಯಾಗಿದ್ದ ಯುವಕ ಚೆನ್ನೈಯಲ್ಲಿ ಪತ್ತೆಯಾಗಿದ್ದಾರೆ.  ರಕ್ಷಣ್ ಜೆ.ಕೆ ಪತ್ತೆಯಾದ ಯುವಕ. ಈತನಿಗೆ ಮದುವೆ ನಿಶ್ಚಯವಾಗಿದ್ದು, ಮದುವೆ ಆಮಂತ್ರಣ ಪತ್ರಿಕೆ ನೀಡಲು ತೆರಳುವುದಾಗಿ ಹೇಳಿ ಡಿ.6ರಂದು ಮನೆಯಿಂದ ಹೊರ ಹೋದವರು ಬಳಿಕ ನಾಪತ್ತೆಯಾಗಿದ್ದರು. ಇವರ ಕಾರಿ ಮಂಗಳೂರು ಟೌನ್ ಹಾಲ್ ಬಳಿ ಪತ್ತೆಯಾಗಿತ್ತು. ಯುವಕ ನಾಪತ್ತೆಯಾಗಿರುವ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಲೊಕೇಶನ್ ಸರ್ಚ್ ಮಾಡಿದ್ದು, ಚೆನ್ನೈಯಲ್ಲಿ ಇರುವ ಬಗ್ಗೆ ತಿಳಿದಿದೆ.   ಯುವಕ ಮಂಗಳೂರಿನಿಂದ ಚೆನ್ನೈ ರೈಲಿನಲ್ಲಿ ಪ್ರಯಾಣಿಸಿದ್ದು,…

Read More

ಮಂಗಳೂರು: ವಿದೇಶದಲ್ಲಿ ಕುಳಿತು ಭಗವದ್ಗೀತೆ ಮತ್ತು ಮಹಿಳೆ ಬಗ್ಗೆ ಅವಹೇಳನ ಪೋಸ್ಟ್- ಮುಂಬೈ ನಲ್ಲಿ ಆರೋಪಿ ಅರೆಸ್ಟ್

ಮಂಗಳೂರು : 2024ರ ಫೆಬ್ರವರಿ ತಿಂಗಳಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿಯಬಿಟ್ಟು ಸಾಮರಸ್ಯ ಕೆಡಿಸುವ ಯತ್ನ ಮಾಡಿದ್ದು ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದೇಶದಲ್ಲಿ ಅಡಗಿದ್ದ ಆರೋಪಿಯನ್ನು ಇದೀಗ ಅಲ್ಲಿಂದ ಬರುವಾಗಲೇ ಮುಂಬೈ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಮುಂಬೈನ ಚಾರ್ಕೋಪ್ ಎಂಬಲ್ಲಿನ ನಿವಾಸಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ (56) ಎಂದು ಗುರುತಿಸಲಾಗಿದೆ. ಅವಹೇಳನ ಪೋಸ್ಟ್ ವೈರಲ್ ಮಾಡಿದ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು….

Read More

ಕುಲಾಲ ಸಂಘ ಕೊಲ್ಯ ಇದರ 61 ವಾರ್ಷಿಕ ಮಹಾಸಭೆ: ಸುನಿಲ್ ಸಾಲಿಯನ್ ದಂಪತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ದಂಪತಿಗಳಿಗೆ ಸನ್ಮಾನ

ಕುಲಾಲ ಸಂಘ ಕೊಲ್ಯ ಇದರ 61 ವಾರ್ಷಿಕ ಮಹಾಸಭೆಯ ನಿಮಿತ್ತ ಸತ್ಯನಾರಾಯಣ ಪೂಜೆ ನೆರವೇರಿತು. ನಂತರ. ಶ್ರೀ ಸುನಿಲ್ ಸಾಲಿಯಾನ್ ಮುಂಬೈ ಇವರು ಕೊಡುಗೆ ನೀಡಿದ ಸಭಾ ಭವನದ ಮುಖ್ಯ ಬಾಗಿಲಿನ ದ್ವಾರ ದ ಉದ್ಘಾಟನೆ ಮಾಡಿದರು. ಬಳಿಕ ವಾರ್ಷಿಕ ಮಹಾಸಭೆ ಶ್ರೀ ಭಾಸ್ಕರ್ ಕುತ್ತಾರ್ ಇವರ ಅಧ್ಯಕ್ಷತೆ ಯಲ್ಲಿ ಶ್ರೀಮತಿ ಸುಮಿತ್ರ ರಾಜು ಸಾಲಿಯಾನ್ ವೇದಿಕೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ರಂಜಿತ್ ಉಚ್ಚಿಲ್ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಕಾಶ್ ಪಿಲಿಕೂರು ಲೆಕ್ಕ ಪತ್ರ ನೀಡಿದರು. ಸಮಾರಂಭದಲ್ಲಿ…

Read More

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಶ್ರೀ ಗಿರೀಶ್ ಕೆ.ಹೆಚ್ ವೇಣೂರು ಅವರು “ಶಿಕ್ಷಣ ಸಿಂಧೂರ” ಪ್ರಶಸ್ತಿಗೆ ಆಯ್ಕೆ

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ. ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು…

Read More

ಕುಲಾಲ ಸಂಘ ಕೊಲ್ಯ ಇದರ ನೂತನ ಅಧ್ಯಕ್ಷರಾಗಿ ಲಯನ್ ಅನಿಲ್ ದಾಸ್ ಆಯ್ಕೆ

ಉಳ್ಳಾಲ: ಕುಲಾಲ ಸಂಘ ಕೊಲ್ಯ ಇದರ ನೂತನ ಅಧ್ಯಕ್ಷ ರಾಗಿ ಲಯನ್ ಅನಿಲ್ ದಾಸ್ ರವರು ಆಯ್ಕೆಯಾಗಿದ್ದಾರೆ. ಕುಲಾಲ ಸಮಾಜದ ಅಭಿವೃದ್ಧಿ , ಸಂಘಟನೆ ಮೂಲ ಉದ್ದೇಶದೊಂದಿಗೆ ಅವಿರತವಾಗಿ ಶ್ರಮಿಸುತ್ತಿರುವ ಯುವ ಸಂಘಟಕ. ಕೊಡುಗೈ ದಾನಿ. ಸಮಾಜಮುಖಿ ಮನೋಭಾವ ಉಳ್ಳವರು. ದಾಸ್ ಪ್ರಮೋಷನ್ಸ್ ಹೋಂ ನರ್ಸಿಂಗ್ ಎಂಬ ನರ್ಸಿಂಗ್ ಸೇವಾ ಸಂಸ್ಥೆಯ ಮೂಲಕ ಹಲವಾರು ನಿರುದ್ಯೋಗಿ ಯುವಕ – ಯುವತಿಯರಿಗೆ ಕರ್ನಾಟಕದಾದ್ಯಂತ ಉದ್ಯೋಗ ವನ್ನು ಕಲ್ಪಿಸಿದ್ದಾರೆ .ದಾಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಸಮಾಜ ಮುಖಿ ಸೇವೆಗಳನ್ನು…

Read More

ದ.ಕ ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ಪ್ರಕರಣ ಹೆಚ್ಚಳ..!! ಮುನ್ನೆಚ್ಚರಿಕೆ ವಹಿಸಲು ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳು ದಾಖಲಾಗುತ್ತಿದ್ದು, ಸ್ಥಳೀಯವಾಗಿ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಶಾಲಾ ಮಕ್ಕಳಲ್ಲಿ ಅಥವಾ ಸಾರ್ವಜನಿಕರಲ್ಲಿ ಖಾಯಿಲೆಯ ಲಕ್ಷಣಗಳು ಕಂಡುಬ0ದಲ್ಲಿ ತಕ್ಷಣಕ್ಕೆ ಚಿಕಿತ್ಸೆಯನ್ನು ಪಡೆಯುವುದರೊಂದಿಗೆ ಸೋಂಕು ಹರಡದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಲಾಗಿದೆ.  ಚಿಕನ್ ಪಾಕ್ಸ್ ಮಕ್ಕಳಲ್ಲಿ, ಯಾವುದೇ ತೊಂದರೆ ಇಲ್ಲದೆ ಸಂಪೂರ್ಣವಾಗಿ ಗುಣವಾಗುತ್ತದೆ. ಒಮ್ಮೆ ಚಿಕನ್ ಪಾಕ್ಸ್ನಿಂದ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೊಂದುತ್ತಾನೆ. ಪೌಷ್ಠಿಕ ಆಹಾರ ಸೇವನೆಯಿಂದ ದೇಹದ…

Read More

ಇನ್ಮುಂದೆ ಮೊಬೈಲ್‌ನಿಂದ ಸಿಮ್ ತೆಗೆದರೆ ವಾಟ್ಸಪ್ ಸ್ಥಗಿತ!

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಯಾವುದೇ ಒಂದು ಸಂದೇಶ ಅಥವಾ ಮೇಲ್ ಬಂದಾಗ ಆದಷ್ಟು ಜಾಗರೂಕರಾಗಿರಬೇಕು. ಅಪ್ಪಿತಪ್ಪಿಯೂ ಎಡವಟ್ಟಾದರೆ ನಿಜಕ್ಕೂ ಬೆಲೆ ತೆರಬೇಕಾಗುತ್ತದೆ. ನಾವೆಲ್ಲರೂ ತುಂಬಾ ಕಡೆ ನೋಡಿರುತ್ತೇವೆ ಅಲ್ಲದೆ ಅದು ನಮ್ಮ ಅನುಭವಕ್ಕೂ ಬಂದಿರುತ್ತದೆ. ಸಾಮಾನ್ಯವಾಗಿ ಮೊಬೈಲ್‌ನಿಂದ ಸಿಮ್‌ನ್ನು ಹೊರತೆಗೆದಾಗ ವೈಫೈ ಮೂಲಕ ವಾಟ್ಸಪ್ ಬಳಸಬಹುದು. ಜೊತೆಗೆ ಟೆಲಿಗ್ರಾಂ ಅನ್ನು ಕೂಡ ಒಂದು ಬಾರಿ ಲಾಗಿನ್‌ ಆದರೆ ಸಿಮ್ ಇಲ್ಲದೆ ಬಳಸಬಹುದು. ಇದೀಗ ದೂರ ಸಂಪರ್ಕ ಇಲಾಖೆ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಸ್ನಾಪ್ ಚಾಟ್, ಶೇರ್…

Read More

ನ್ಯಾಷನಲ್‌ ಹೆರಾಲ್ಡ್‌ ಭ್ರಷ್ಟಾಚಾರ : ಇನಾಯತ್‌ ಅಲಿಗೆ ನೋಟಿಸ್‌

ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಭ್ರಷ್ಟಾಚಾರ ಪ್ರಕರಣದಲ್ಲಿ ಮಂಗಳೂರು ಮೂಲದ ಉದ್ಯಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಪ್ತರಾಗಿರುವ ಇನಾಯತ್‌ ಅಲಿ ಅವರಿಗೂ ನೋಟಿಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇನಾಯತ್‌ ಅಲಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇ.ಡಿ ನೀಡಿರುವ ದೂರಿನ ಮೇರೆಗೆ ದಿಲ್ಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಅ.3ರಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಈ ಹಗರಣಕ್ಕೆ ಸಂಬಂಧಿಸಿ ಹೊಸದಾಗಿ ಎಫ್‌ಐಆರ್‌…

Read More

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ:  ಶ್ರೀ ಸುನಿಲ್ ಆರ್. ಸಾಲ್ಯಾನ್ ಮುಂಬೈ ಅವರು “ಸೇವಾ ಸಿಂಧೂರ” ಪ್ರಶಸ್ತಿಗೆ ಆಯ್ಕೆ

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ. ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು…

Read More