ಗಮನಿಸಿ: ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮಾ.31ರ ವರೆಗೆ ಅವಕಾಶ

ಬೆಂಗಳೂರು : ಎಲ್ಲಾ ರೀತಿಯ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ(ಎಚ್‍ಎಸ್‍ಆರ್‌ಪಿ) ಅಳವಡಿಸಲು ನೀಡಲಾಗಿದ್ದ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸುವಂತೆ ಸರಕಾರ ಆದೇಶ ಹೊರಡಿಸಿದೆ. ಎಪ್ರಿಲ್ 1, 2019ಕ್ಕಿಂತ ಪೂರ್ವದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‍ಎಸ್‍ಆರ್‌ಪಿ ಅಳವಡಿಸಲು 2023ರ ಆಗಸ್ಟ್ 8 ರವರೆಗೆ ಕಾಲಮಿತಿ ನೀಡಲಾಗಿತ್ತು. ಇದೀಗ 2025ರ ಮಾಚ್ 31ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಆದೇಶದಲ್ಲಿ ತಿಳಿಸಿದ್ದಾರೆ.    

Read More

ಮುಲ್ಕಿ: ಬಪ್ಪನಾಡು ಚೆಕ್‌ ಪೋಸ್ಟ್‌ ಬಳಿ ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿ ಅರೆಸ್ಟ್

ಮುಲ್ಕಿ: ಬಪ್ಪನಾಡು ಚೆಕ್‌ ಪೋಸ್ಟ್‌ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಯನ್ನು  ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿದ್ದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಉಡುಪಿ ಜಿಲ್ಲೆಯ ಮಲ್ಟೆ ನಿವಾಸಿ ಮೊಹಮ್ಮದ್‌ ಸಲೀಂ(38) ಎಂದು ಗುರುತಿಸಲಾಗಿದೆ. ಈತ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ.ರಿಜ್ಡ್‌ ಕಾರು ( ಕೆಎ 19 ಎಂಪಿ 662)ನಲ್ಲಿ ಮಾದಕ ವಸ್ತುಗಳನ್ನು ಕಾರಿನ ಡ್ಯಾಶ್‌ ಬಾಕ್ಸ್‌ ನಲ್ಲಿ ಇರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದ. ಚೆಕ್‌…

Read More

ಮಂಗಳೂರು: ಸರಕಾರಿ ಉದ್ಯೋಗ ಕೊಡಿಸುವುದಾಗಿ 2.66 ಲಕ್ಷ ರೂ. ವಂಚನೆ..!

ಮಂಗಳೂರು: ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.66 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಗೆ ನಮ್ರತಾ ಎಂಬಾಕೆಯ ಪರಿಚಯವಾಗಿದ್ದು, ಆಕೆ ಟೆಂಡರ್‌ದಾರ ಅವಿನಾಶ್ ಶೆಟ್ಟಿಗೆ 2.50 ಲಕ್ಷ ರೂ. ನೀಡಿದರೆ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿದ್ದಳು. ಅದರಂತೆ ತಾನು ಅವಿನಾಶ್ ಶೆಟ್ಟಿಗೆ ಕರೆ ಮಾಡಿ ಆತನ ಸೂಚನೆಯಂತೆ ತನ್ನ ಮಗಳಿಗೆ ಉದ್ಯೋಗ ದೊರಕಿಸಿಕೊಡಲು ವಿನಂತಿಸಿದೆ. ಹಾಗೇ ಚೆಕ್ ಕೂಡ ನೀಡಿದೆ.ಬಳಿಕ ಆತನನ್ನು ವಿಚಾರಿಸಿದಾಗ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದಿದ್ದ. ಬಳಿಕ ಇದೊಂದು…

Read More

ಮಂಗಳೂರು: ಬ್ಯಾಂಕ್ ಲಾಕರ್‌ನಲ್ಲಿಟ್ಟ 8 ಲಕ್ಷ ರೂ.ಗೆದ್ದಲು ಹಿಡಿದು ಪುಡಿ ಪುಡಿ..!

ಮಂಗಳೂರು: ಬ್ಯಾಂಕ್ ಲಾಕರ್ ಅತ್ಯಂತ ಸುರಕ್ಷಿತ ಇಲ್ಲಿಡುವ ದಾಖಲೆಗಳು ಮತ್ತು ಆಭರಣಗಳು ಅತ್ಯಂತ ಸುರಕ್ಷಿತವಾಗಿರುತ್ತದೆ ಎನ್ನುವುದು ಜನಸಾಮಾನ್ಯರ ನಂಬಿಕೆ ಹಾಗೂ ಬ್ಯಾಂಕ್ ಗಳು ನೀಡುವ ಖಾತರಿ. ಇದನ್ನು ನಂಬಿ ಲಾಕರ್ ನಲ್ಲಿ ನಗದು ಇಟ್ಟ ಗ್ರಾಹಕರೊಬ್ಬರು ಇದೀಗ ಪರಿತಪಿಸುವಂತಾಗಿದೆ. ಮಂಗಳೂರಿನ ಕೆನರಾ ಬ್ಯಾಂಕ್ ಶಾಖೆಯೊಂದರ ಲಾಕರ್‌ನಲ್ಲಿಟ್ಟಿದ್ದ 8 ಲಕ್ಷ ರೂಪಾಯಿ ನೋಟುಗಳು ಗೆದ್ದಲು ಹಿಡಿದು ಪುಡಿಯಾಗಿವೆ. ಈ ಸಂಬಂಧ ಗ್ರಾಹಕರೊಬ್ಬರು ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಗೆ ಬಂದು ದೂರು ನೀಡಿದ್ದಾರೆ.ಆದರೆ ಬ್ಯಾಂಕ್ ಇದಕ್ಕೆ ನಾವು ಜವಾಬ್ದಾರರಲ್ಲ…

Read More

ಮೀನುಗಾರಿಕಾ ಬೋಟ್‌ಗೆ ಬೆಂಕಿ- ಲಕ್ಷಾಂತರ ರೂ.ನಷ್ಟ..!

ಉಡುಪಿ: ಮಲ್ಪೆಯ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟಿನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡು, ಬೋಟು ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ. ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಎಂಬ ಸಣ್ಣಟ್ರಾಲ್ (ಫಿಶಿಂಗ್) ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಆ ಬೋಟಿನ ಮೀನುಗಾರರು ಮೀನುಗಾರಿಕೆ ಮುಗಿಸಿಬಂದು ಬೋಟನ್ನು ಬಾಪುತೋಟದ ಬಳಿಯ ದಕ್ಕೆಯಲ್ಲಿ ನಿಲ್ಲಿಸಿದ್ದರು. ಸ್ಥಳೀಯರು ಮತ್ತು…

Read More

ಹೀರೆಕಾಯಿಯ ಆರೋಗ್ಯ ಪ್ರಯೋಜನಗಳು..!

ಹಸಿರೆಲೆ ತರಕಾರಿಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಹೀರೆಕಾಯಿ. ಆರೋಗ್ಯದ ವಿಚಾರದ ಬಗ್ಗೆ ಹೇಳುವುದಾದರೆ, ನಾವು ಯಾವ ಬಗೆಯ ತರಕಾರಿಯನ್ನು ಕೂಡ ಕಡೆಗಣಿ ಸುವ ಹಾಗಿಲ್ಲ! ಇದಕ್ಕೆ ಪ್ರಮುಖ ಕಾರಣಗಳು ಏನೆಂದರೆ, ಎಲ್ಲಾ ಬಗೆಯ ತರಕಾರಿಗಳಿಂದಲೂ ಕೂಡ ನಮಗೆ ಒಂದೊಂದು ಬಗೆಯ ಆರೋಗ್ಯ ಪ್ರಯೋಜನಗಳು ಸಿಗುತ್ತಾ ಹೋಗುತ್ತವೆ. ಉದಾಹರಣೆಗೆ ಹೇಳುವುದಾದರೆ, ಕೆಲವು ತರಕಾರಿಗಳಲ್ಲಿ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾಗಿರುವ ವಿಟಮಿನ್ಸ್‌ಗಳು ಹೆಚ್ಚಾಗಿದ್ದರೆ, ಇನ್ನು ಕೆಲವೊಂದರಲ್ಲಿ ಖನಿಜಾಂಶಗಳು, ಕಬ್ಬಿಣಾಂಶದ…

Read More

ಬಂಟ್ವಾಳ: ಸಮಾಜ ಸೇವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಸುರೇಶ್ ಕುಲಾಲ್, ಉಪಾಧ್ಯಕ್ಷ ರಾಗಿ ಜನಾರ್ದನ ಬೋಂಡಾಲ ಆಯ್ಕೆ

ಸಮಾಜ ಸೇವ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಸಾಧಿಸಿ ಆಡಳಿತ ಚುಕ್ಕನಿಯನ್ನು ಸತತ ಮೂರನೇ ಬಾರಿಗೆ ಪಡೆದಿರುವ ಸುರೇಶ್ ಕುಲಾಲ್ ಮತ್ತು ಅವರ ತಂಡ ಇವತ್ತಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಶ್ರೀ ಸುರೇಶ್ ಕುಲಾಲ್ ಉಪಾಧ್ಯಕ್ಷರಾಗಿ ಶ್ರೀ ಜನಾರ್ದನ ಬೋಂಡಾಲ ಹಾಗೂ ನಿರ್ದೇಶಕರಾಗಿ ಅರುಣ್ ಕುಮಾರ್ ಕೆ., ಶ್ರೀ ಕಿರಣ್ ಅಟ್ಲೂರು, ಶ್ರೀ ರಮೇಶ್ ಸಾಲಿಯನ್ , ಶ್ರೀ ಅರುಣ್ ಬೋರುಗುಡ್ಡೆ , ಶ್ರೀ ರಮೇಶ್ ಸಾಲಿಯನ್ ಸಂಚಯಗಿರಿ , ಶ್ರೀ ಪ್ರೇಮನಾಥ್ ಬಂಟ್ವಾಳ ,…

Read More

ಮಂಗಳೂರಲ್ಲಿ ಅದ್ದೂರಿಯ ಸರ್ವಜ್ಞ ಜಯಂತಿ ಆಚರಣೆ

ಮಂಗಳೂರು: ದ ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘದ ದ ಕ ಜಿಲ್ಲಾ ಸಂಘಗಳ ಒಕ್ಕೂಟ, ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಯುವ ವೇದಿಕೆ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಅಯೋಜನೆಯಲ್ಲಿ ಬೊಂದೇಲ್ ನ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನ ಸಭಾಂಗಣದಲ್ಲಿ ಸರ್ವಜ್ಞ ಜಯಂತಿ ಆಚರಣೆಗೂ ಮೊದಲು, ಮಂಗಳೂರು ಉತ್ತರ ವಿಧಾನ ಸಭಾ ಶಾಸಕರಾದ ಡಾ, ವೈ ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್…

Read More

ಉಳ್ಳಾಲ: ಸಂತ ಕವಿ ಸರ್ವಜ್ಞನ ಜಯಂತಿ ಆಚರಣೆ

ಉಳ್ಳಾಲ: 16ನೇ ಶತಮಾನದಲ್ಲಿ ಕರ್ನಾಟಕ ಕಂಡ ಒಬ್ಬ ಶ್ರೇಷ್ಠ ವಚನಕಾರ, ದಾರ್ಶನಿಕ ಕವಿ ಸರ್ವಜ್ಞನ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇಂದು ರಾಜ್ಯದೆಲ್ಲಡೆ ಸರ್ವಜ್ಞನ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಉಳ್ಳಾಲ ತಾಲೂಕು ಆಡಳಿತ ಮತ್ತು ಉಳ್ಳಾಲ ತಾಲೂಕು ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ/ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಉಳ್ಳಾಲ ಸಮಿತಿ ಸಹಭಾಗಿತ್ವದಲ್ಲಿ ನಾಟೆಕಲ್ ತಾಲೂಕು ಕಛೆರಿಯಲ್ಲಿ ಸಂತ ಕವಿ ಸರ್ವಜ್ಞ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ…

Read More

ಬೆಳ್ತಂಗಡಿ : ಹತ್ತು ವರ್ಷಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣಕ್ಕೆ ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್

ಬೆಳ್ತಂಗಡಿ : ಸುಮಾರು ಹತ್ತು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಗೊಳಗಾದ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗೋಪಾಲ ಗೌಡ ಯಾನೆ ಗೋಪಾಲಕೃಷ್ಣ ಗೌಡ, ಮಂಗಳೂರಿನ ಕುಡುಪು ಪಾಲ್ಡನೆಯ ಎ.ದಮಯಂತಿ, ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಸಂತ ಗೌಡ ಯಾನೆ ರಾಮಣ್ಣ ಗೌಡ, ನೆರಿಯ…

Read More