ಮಂಗಳೂರು : ಬ್ಯಾಂಕ್‌ನಲ್ಲಿ ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

ಮಂಗಳೂರು : ವಾಣಿಜ್ಯ ಕಟ್ಟಡವೊಂದರಲ್ಲಿರುವ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲಪಾಡಿಯ ಬಳಿ ಇಂದು  (ಫೆ. 28) ಸಂಭವಿಸಿದೆ. ಶಾರ್ಟ್ ಸರ್ಕೀಟ್‌ನಿಂದ ಬ್ಯಾಂಕ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ದಟ್ಟ ಹೊಗೆಯ ವಾತವರಣ ನಿರ್ಮಿತವಾಗಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸಿಬ್ಬಂದಿಗಳು ಹೊರ ಬಂದಿದ್ದಾರೆ. ಮಧ್ಯಾಹ್ನವಾದ್ದರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆ ಇತ್ತು. ಹಾಗಾಗಿ ಭಾರೀ ಅನಾಹುತ ತಪ್ಪಿದೆ. ಆದರೂ, ಈ ಬೆಂಕಿ ಅವಘಡದ ಪರಿಣಾಮವಾಗಿ ಬ್ಯಾಂಕ್‌ನಲ್ಲಿದ್ದ ದಾಖಲೆಗಳು ಸುಟ್ಟುಹೋಗಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ಅಗ್ನಿ ಶಾಮಕ…

Read More

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಮಾರ್ಚ್‌ 1 ರಿಂದ ಶುರುವಾಗಿ ಮಾರ್ಚ್‌ 20 ರಂದು ಪರೀಕ್ಷೆಗಳು ಕೊನೆಗೊಳ್ಳಲಿವೆ. ಪರೀಕ್ಷೆ ನಡೆಸಲು ಮಂಡಳಿ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಕೆಲವು ಮುಖ್ಯ ಸೂಚನೆಗಳನ್ನು ಅನುಸರಿಸಬೇಕು.ಮುಖ್ಯ ಅಧೀಕ್ಷಕರು ಕ್ಯಾಮೆರಾ ಇಲ್ಲದ ಸಾಮಾನ್ಯ ಮೊಬೈಲ್ ಫೋನ್ ಅನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶವಿದೆ. ಆದರೆ, ಎಲ್ಲಾ ಪರೀಕ್ಷಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಬಳಕೆ ನಿಷೇಧಿಸಲಾಗಿದೆ. ಯಾವುದೇ ಎಲೆಕ್ಟ್ರಾನಿಕ್…

Read More

ಮುಂದಿನ ಎರಡು ದಿನ ದಕ್ಷಿಣ ಕನ್ನಡ ಉಡುಪಿಯಲ್ಲಿ ವಿಪರೀತ ಬಿಸಿಲ ಝಳ: ಹವಾಮಾನ ಇಲಾಖೆ ಎಚ್ಚರಿಕೆ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ಕರಾವಳಿಯಲ್ಲಿ ಉಷ್ಣಅಲೆ ಬೀಸಲಿದ್ದು, ಬಿಸಿಲ ಝಳ ವಿಪರೀತ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಎಚ್ಚರಿಕೆ ನೀಡಿದೆ. ಹಲವಾರು ಪ್ರದೇಶಗಳಲ್ಲಿ ತಾಪಮಾನವು ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿರುವುದರಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ. ತೀವ್ರವಾದ ಶಾಖದ ಅಲೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು…

Read More

ಮಂಗಳೂರು : ನಿಲ್ಲಿಸಿದ್ದ ಕಾರಿನಲ್ಲಿ ಕೋಟಿ ಹಣ ಪತ್ತೆ ಪ್ರಕರಣ; ತಲ್ಲತ್‌ ಗ್ಯಾಂಗ್‌ನ ಇಬ್ಬರು ಅರೆಸ್ಟ್

ಮಂಗಳೂರು : ಜ.28 ರಂದು ಅಂಕೋಲ ರಾಮನಗುಳಿ ಹೆದ್ದಾರಿ ಬದಿಯ ನಿರ್ಜನ ಪ್ರದೇಶದಲ್ಲಿ ಮಂಗಳೂರಿನ ಪ್ರಸಿದ್ಧ  ಜ್ಯುವೆಲ್ಲರಿ ಮಾಲೀಕರಾಗಿರುವ ರಾಜೇಶ ಪವಾರ್‌ ಎಂಬುವವರಿಗೆ ಸೇರಿದ್ದ ಕಾರು ದೊರಕಿತ್ತು. ಆದರೆ. ಅಚ್ಚರಿಯೆಂಬಂತೆ ಅದರಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು. ಇದಾದ ಕೆಲವು ದಿನದ ಬಳಿಕ ರಾಜೇಶ್‌ ಪವಾರ್‌ ಮತ್ತು ಕಾರಿನ ಚಾಲಕರು ಅಂಕೋಲಾ ಠಾಣೆಗೆ ತೆರಳಿ ದರೋಡೆ ಕುರಿತು ದೂರು ದಾಖಲಿಸಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಕಾರವಾರ ಪೊಲೀಸರು ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ತಲ್ಲತ್‌ ಗ್ಯಾಂಗ್‌ನ…

Read More

ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿಗಳಿಗೆ ಮಾರಾಟ: ಆರೋಪಿ ಬಂಧನ

ಕಲಬುರಗಿಯ ಸೈಬರ್‌ ಕ್ರೈಮ್‌ ಪೊಲೀಸರು ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಪದವಿಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದ ದೊಡ್ಡ ದಂಧೆಯನ್ನು ಪತ್ತೆ ಹಚ್ಚಿದ್ದು, ದೆಹಲಿ ಮೂಲದ ರಾಜೀವ ಸಿಂಗ್‌ ಆರೋರಾ ಬಂಧಿತ ಆರೋಪಿ. ಈತನನ್ನು ನವದೆಹಲಿಯ ರಾಮಪಾರ್ಕ್‌ ಅಪಾರ್ಟ್ಮೆಂಟ್‌ ದ್ವಾರಕ್‌ ಮೋಡ್‌ನಲ್ಲಿ ಬಂಧಿಸಲಾಗಿದೆ. 500ಕ್ಕೂ ಹೆಚ್ಚು ನಕಲಿ ಪದವಿ ಪ್ರಮಾಣಪತ್ರಗಳು, ಖಾಲಿ ಪ್ರಮಾಣಪತ್ರಗಳು, ನಕಲಿಸೀಲುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Read More

ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಸ್ಟೇರಿಂಗ್ ಕಟ್!

ಧರ್ಮಸ್ಥಳ: ಚಾರ್ಮಾಡಿ ಘಾಟ್ ರಸ್ತೆಯ ತಿರುವಿನಲ್ಲೇ ಕೆಎಸ್​ಆರ್​ಟಿಸಿ ಬಸ್ಸೊಂದರ ಸ್ಟೇರಿಂಗ್ ಜಾಯಿಂಟ್ ತುಂಡಾದ ಘಟನೆ ನಡೆದಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ KA 17-F-1487 ಶಿವಮೊಗ್ಗ ವಿಭಾಗದ ಬಸ್, ಚಾರ್ಮಾಡಿ ಘಾಟ್​ನಲ್ಲಿ ಸಂಚರಿಸುತ್ತಿದ್ದಾಗ ಸ್ಟೇರಿಂಗ್ ಜಾಯಿಂಟ್ ಕಟ್ ಆಗಿದೆ. ಆದರೆ, ಚಾಲಕನ ಚಾಕಚಕ್ಯತೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ಅಪಾಯದ ಅರಿವಾಗುತ್ತಿದ್ದಂತೆಯೇ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಹೇಗೋ ಬಸ್ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಬಸ್​ನಲ್ಲಿದ್ದ ಪ್ರಯಾಣಿಕರನ್ನು ಬದಲಿ ಬಸ್​ನಲ್ಲಿ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತಿದೆ.

Read More

ಐಡಿಬಿಐ ಬ್ಯಾಂಕಿನಲ್ಲಿ 650 ಜೂನಿಯರ್‌ ಅಸಿಸ್ಟೆಂಟ್‌ಮ್ಯಾನೇಜರ್‌ ಹುದ್ದೆಗಳಿಗೆ ನೇಮಕಾತಿ

ಐಡಿಬಿಐ ಬ್ಯಾಂಕಿನಲ್ಲಿ 650 ಜೂನಿಯರ್‌ ಅಸಿಸ್ಟೆಂಟ್‌ ಮ್ಯಾನೇಜರ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪೂರ್ಣಗೊಳಿಸಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರುಅರ್ಹರು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳು 250 ರೂ. ಮತ್ತು ಇತರರು 1,050 ರೂ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ನೀವು ಮಾರ್ಚ್‌ 1 ರಿಂದ 12 ರವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು https://www.idbibank.in/ ವೆಬ್‌ಸೈಟ್‌ಗೆ ಭೇಟಿ ನೀಡಿ.

Read More

ಪುರುಷರಿಗೂ ಕೆ.ಎಸ್‌.ಆರ್‌.ಟಿ.ಸಿ ಯಲ್ಲಿ ಉಚಿತ ಪ್ರಯಾಣ..! – ಸಿದ್ದರಾಮಯ್ಯನಿಗೆ ಯುಟಿ ಖಾದರ್‌ ಪತ್ರ!

ಮಂಗಳೂರು : ತಾನು ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ‘ಶಕ್ತಿ ಯೋಜನೆ’ ಕೂಡ ಒಂದಾಗಿದೆ. ಇದು ಜಾರಿಯಾದ ಬಳಿಕ ಬಸ್ಸಿನಲ್ಲಿ ಪೂರ್ತಿ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಪುರುಷರಿಗೆ ನಿಲ್ಲಲೂ ಜಾಗ ಇರದಂತಹ ದುರಂತ ಎದುರಾಗುತ್ತಿದೆ. ಈ ಹಿನ್ನೆಲೆ ಪುರುಷರಿಗೂ ಕೂಡ ಉಚಿತ ಪ್ರಯಾಣ ನೀಡಬೇಕೆಂದು ಹಲವರು ಆಗ್ರಹಿಸಿದ್ದರು. ಈ ಕುರಿತು ಇದೀಗ ಸರ್ಕಾರ ಸದ್ಯದಲ್ಲೇ ಶುಭ ಸುದ್ದಿ ನೀಡುವ ಸೂಚನೆ ದೊರಕುತ್ತಿದೆ.ರಾಜ್ಯ ಸರ್ಕಾರ…

Read More

ಫರಂಗಿಪೇಟೆ – ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ನಾಪತ್ತೆ

ಮಂಗಳೂರು: ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫರಂಗಿಪೇಟೆಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಅವರ ಪುತ್ರ ದಿಗಂತ್(17) ನಾಪತ್ತೆಯಾದ ವಿದ್ಯಾರ್ಥಿ. ಆತ ಫೆ. 25ರಂದು ಸಂಜೆ ದೇವಸ್ಥಾನಕ್ಕೆ ಹೋಗಿವುದಾಗಿ ಮನೆಯಲ್ಲಿ ತಿಳಿಸಿದ್ದು, ಆದರೆ ದೇವಸ್ಥಾನಕ್ಕೆ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದಾನೆ. ಬಳಿಕ ಹುಡುಕಾಡಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ರೈಲ್ವೇ ಹಳಿಯಲ್ಲಿ ಬಿದ್ದು ಕೊಂಡಿರುವುದು ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಿಸಿಗಾಳಿಯ ಭೀತಿ: ಕರಾವಳಿ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್

ಉಡುಪಿ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ/ ಯಲ್ಲೋ ಎಚ್ಚರಿಕೆಯನ್ನು ನೀಡಿದ್ದು, ತಾಪಮಾನದಲ್ಲಿ ಗಣನೀಯ ಏರಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ. ಫೆಬ್ರವರಿ 26 ಮತ್ತು 27 ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಕರ್ನಾಟಕದಲ್ಲಿ ತಾಪಮಾನದಲ್ಲಿ ತೀವ್ರ ಏರಿಕೆಯಾಗಿದೆ. ಫೆಬ್ರವರಿಯಾಗಿದ್ದರೂ, ಸಾಮಾನ್ಯವಾಗಿ ತಂಪಾದ ಹವಾಮಾನದೊಂದಿಗೆ ಸಂಬಂಧಿಸಿದ ಒಂದು ತಿಂಗಳು,…

Read More