ಪಾಸ್‌ಪೋರ್ಟ್ ಮಾಡಿಸಲು ಇನ್ಮುಂದೆ ಜನನ ಪ್ರಮಾಣಪತ್ರ ಕಡ್ಡಾಯ..!
ಭಾರತದಲ್ಲಿ ಪಾಸ್‌ಪೋರ್ಟ್ ವಿದೇಶ ಪ್ರವಾಸಕ್ಕಾಗಿ ಪ್ರಮುಖ ದಾಖಲೆಯಾಗಿದೆ. ಇದು ಇಲ್ಲದೆ, ನೀವು ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ನೀವು ಪಾಸ್‌ಪೋರ್ಟ್ ಪಡೆಯಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ವಿದೇಶಾಂಗ ಸಚಿವಾಲಯ ಫೆ. 24ರಂದು ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಆದೇಶವನ್ನು ಹೊರಡಿಸಿದೆ. ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 24ರ ನಿಬಂಧನೆಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಮಾಹಿತಿಯನ್ನು ತಿಳಿಸಲಾಗಿದೆ. ಭಾರತದಲ್ಲಿ ಪಾಸ್‌ಪೋರ್ಟ್ ಪಡೆಯಲು ಇರುವ ನಿಯಮಗಳಿಗೆ ತಿದ್ದುಪಡಿ…

