ನಿಮ್ಮ ಹಾಗೆ ಡಿಸಿ ಆಗುವೆ ಎಂದ ವಿದ್ಯಾರ್ಥಿನಿ; ತಮ್ಮ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿ !
ಕಾರವಾರ: ಡಿಸಿ ಆಗಬೇಕೆಂಬ ಗುರಿ ಹೊಂದಿರುವ ವಿದ್ಯಾರ್ಥಿನಿಯನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ತಮ್ಮ ಕುರ್ಚಿ ಮೇಲೆ ಕೂರಿಸಿದ ಅಪರೂಪದ ಗಳಿಗೆಗೆ ಜಿಲ್ಲಾಧಿಕಾರಿ ಕಚೇರಿ ಸಾಕ್ಷಿಯಾಯಿತು. ಈ ಮೂಲಕ ಐಎಎಸ್ ಕನಸು ಕಂಡಿರುವ ವಿದ್ಯಾರ್ಥಿನಿಗೆ ಉತ್ತರ ಕನ್ನಡ ಡಿಸಿ ಸ್ಫೂರ್ತಿ ತುಂಬಿದ್ದಾರೆ. ಗುರುವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಉತ್ಸುಕತೆಯಿಂದ…

