‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗಳನ್ನು ಪರಿಶೀಲಿಸುವ ಸಮಿತಿಯ ಅವಧಿಯನ್ನು ವಿಸ್ತರಿಸಿದ ಲೋಕಸಭೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಪರಿಚಯಿಸುವ ಮಸೂದೆಗಳನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಅವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ. ಸಂವಿಧಾನದ ಜಂಟಿ ಸಮಿತಿ (129 ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2024 ರ ಅವಧಿಯನ್ನು 2026 ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವಂತೆ ಕೋರಿ ಸಮಿತಿಯ ಅಧ್ಯಕ್ಷ ಪಿ ಪಿ ಚೌಧರಿ ಪ್ರಸ್ತಾವನೆಯನ್ನು ಮಂಡಿಸಿದರು. ಲೋಕಸಭೆಯು ಧ್ವನಿ ಮತದ ಮೂಲಕ ಈ…

Read More

ಕಾಸರಗೋಡು: ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆ

ಕಾಸರಗೋಡು: ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಯಾಬಜಾರ್‌ ಬಳಿಯ ಚೆರುಗೋಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 19 ವರ್ಷದ ಐಟಿಐ ವಿದ್ಯಾರ್ಥಿ ಅಬ್ದುಲ್ ಶಿಹಾಬ್ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಮೂಲತಃ ಕರ್ನಾಟಕದವರಾದ ಶಿಹಾಬ್ ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಬಶೀರ್ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಬೆಳಿಗ್ಗೆ ಕುಟುಂಬ ಸದಸ್ಯರು ಕೋಣೆಗೆ ತೆರಳಿದಾಗ ಆತ ಭಾವನಾತ್ಮಕ ತೊಂದರೆ ಅನುಭವಿಸಿರುವ ಸುಳಿವುಗಳು ಗೋಚರಿಸಿದವು ಎಂದು ತಿಳಿಸಲಾಗಿದೆ. ವೈಯಕ್ತಿಕ ಸಂಬಂಧಕ್ಕೆ ಸಂಬಂಧಿಸಿದ ಮಾನಸಿಕ ಒತ್ತಡದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು…

Read More

ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ : ‘ಜನೌಷಧಿ ಕೇಂದ್ರ’ ಮುಚ್ಚುವ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಕಳೆದ ಕೆಲವು ತಿಂಗಳುಗಳ ಹಿಂದೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷಧಿ ಕೇಂದ್ರವನ್ನು ಬಂದ್‌ ಮಾಡುವ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ರದ್ದುಗೊಳಿಸಿ ಮಹತ್ವದ ಆದೇಶ ಪ್ರಕಟಿಸಿದೆ.ಈ ಪ್ರಕರಣ ನ್ಯಾಯಾಲಯಕ್ಕೆ ಬಾರಬಾರದಿತ್ತು. ಜನೌಷಧಿ ಅಂಗಡಿ ಇಡಲು ಅವಕಾಶ ಕೊಡದೇ ಇದ್ದರೆ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಕಾಣುತ್ತದೆ ಎಂದು ಅಭಿಪ್ರಾಯಪಟ್ಟು ಸರ್ಕಾರದ ಆದೇಶವನ್ನು ರದ್ದು ಮಾಡಿದೆ. ಜನೌಷಧಿ ಅಂಗಡಿಯವರ ಲೀಸ್ ತಿಂಗಳು ಮುಗಿದ ಹಿನ್ನೆಲೆ…

Read More

ದ್ವೇಷ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು

ದೀಪಾವಳಿ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಅ.22ರಂದು ನಡೆದ ದೀಪೋತ್ಸವ ಮತ್ತು ಗೋಪೂಜೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನಾತ್ಮಕವಾಗಿ ಭಾಷಣ ಮಾಡಿರುವ ಬಗ್ಗೆ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು…

Read More

‘ದೀಪಾವಳಿಗೆ’ ವಿಶ್ವ ಮನ್ನಣೆ: ಯುನೆಸ್ಕೋ ಪಟ್ಟಿಗೆ ಹಬ್ಬ ದಾಖಲು : ಭಾರತದ ಹೆಮ್ಮೆಯ ಕ್ಷಣ ಎಂದ ಪ್ರಧಾನಿ

ನವದೆಹಲಿ: ಯುನೆಸ್ಕೋದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬವನ್ನು ಸೇರ್ಪಡೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯ ಜೊತೆಗೆ ನಿಕಟ ಸಂಪರ್ಕ ಹೊಂದಿದೆ. ಇದು ನಾಗರೀಕತೆಯ ಆತ್ಮವಾಗಿದೆ. ಸದಾಚಾರ ಮತ್ತು ಜ್ಞಾನೋದಯವನ್ನು ಬಿಂಬಿಸುತ್ತದೆ. ಈ ವಿಚಾರ ಭಾರತ ಮತ್ತು ವಿಶ್ವದ ಜನರನ್ನು ರೋಮಾಂಚನಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯುನೆಸ್ಕೋ ಪಟ್ಟಿಗೆ ಸೇರಿರುವ ಕಾರಣ…

Read More

ಉಡುಪಿ: ಅಕ್ರಮವಾಗಿ ಭಾರತ ಪ್ರವೇಶಿಸಿದ್ದ 10 ಬಾಂಗ್ಲಾದೇಶಿ ವಲಸಿಗರಿಗೆ 2 ವರ್ಷ ಜೈಲು

ಉಡುಪಿ: ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಗ್ಗಿದ್ದ ಹತ್ತು ಮಂದಿ ವಲಸಿಗರಿಗೆ ಉಡುಪಿ ನ್ಯಾಯಾಲಯವು ಎರಡು ವರ್ಷದ ಜೈಲು ಮತ್ತು ತಲಾ ₹10,000 ದಂಡ ವಿಧಿಸಿದೆ. 2024ರ ಅಕ್ಟೋಬರ್ 11ರಂದು ಸಂಜೆ ಸುಮಾರು 7 ಗಂಟೆ ವೇಳೆಗೆ ಮಲ್ಪೆ PSI ಪ್ರವೀಣ್ ಕುಮಾರ್ ಆರ್. ಮತ್ತು ಸಿಬ್ಬಂದಿಗಳು ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಶಂಕಾಸ್ಪದವಾಗಿ ಲಗೇಜ್‌ಗಳೊಂದಿಗೆ ಸುತ್ತಾಡುತ್ತಿದ್ದ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅವರು ಯಾವುದೇ ಮಾನ್ಯ ಅನುಮತಿ ದಾಖಲೆಗಳಿಲ್ಲದೆ ಅಕ್ರಮವಾಗಿ ದೇಶ ಪ್ರವೇಶಿಸಿದ್ದರೊಂದಿಗೆ, ನಕಲಿ…

Read More

RSS ಪಥಚಂಚಲನದಿಂದ ಎಲ್ಲಿಯೂ ದೊಂಬಿ, ಗಲಾಟೆ ಆಗಿಲ್ಲ : ಸದನದಲ್ಲಿ ಒಪ್ಪಿಕೊಂಡ ಸರ್ಕಾರ

ಬೆಳಗಾವಿ : ಈ ವರ್ಷ ಕರ್ನಾಟಕದಾದ್ಯಂತ 518 ಕಡೆ ಆರ್​ಎಸ್​ಎಸ್ ಕಾರ್ಯಕ್ರಮ, ಪಥಸಂಚಲನ ನಡೆದಿದೆ. ಎಲ್ಲಿಯೂ ಗಲಾಟೆ, ದೊಂಬಿ ಆಗಿಲ್ಲ ಎಂದು ಕಾಂಗ್ರೆಸ್ ಸರ್ಕಾರವೇ ಒಪ್ಪಿಕೊಂಡಿದೆ. ಆರ್​ಎಸ್‌ಎಸ್‌ ಕಾರ್ಯಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿ ಗೃಹ ಸಚಿವ ಅವರೇ ಡಾ.ಜಿ.ಪರಮೇಶ್ವರ, ಕರ್ನಾಟಕದಾದ್ಯಂತ ಒಟ್ಟು 518 ಕಡೆಗಳಲ್ಲಿ ಆರ್​ಎಸ್​ಎಸ್ ಪಥ ಸಂಚಲನ ನಡೆದಿದೆ. ಅಂದಾಜು 2 ಲಕ್ಷಕ್ಕೂ ಅಧಿಕ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಯಾವುದೇ ಗಲಾಟೆ, ದೊಂಬಿ ಅಥವಾ ಕೋಮು ಗಲಭೆಗಳು…

Read More

ಮಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪ್ರತೀಕಾರ ಪೋಸ್ಟ್‌..!! 16 Instagram ಖಾತೆ ವಿರುದ್ಧ FIR

ಮಂಗಳೂರು: ಪೊಲೀಸರ ಕಟ್ಟುನಿಟ್ಟಿನ ಕ್ರಮದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಗಲಭೆ, ಹಿಂಸೆಗೆ ದುಷ್ಪ್ರೇರಣೆ ನೀಡುವ ಪೋಸ್ಟ್‌ಗಳು ಕಡಿಮೆಯಾಗಿದ್ದವು. ಇದೀಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಇಂತಹಾ ಪೋಸ್ಟ್‌ಗಳು ಕಾಣಿಸಿದ್ದು ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಲಾಯಿ ಅಶ್ರಫ್ ಹತ್ಯೆಗೆ ಪ್ರತೀಕಾರದ ಬಗ್ಗೆ ಸಂದೇಶಗಳು ಓಡಾಡುತ್ತಿದ್ದು, Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೇಜ್​​ಗಳಲ್ಲಿ ಭಯ ಹುಟ್ಟಿಸುತ್ತಿರುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ. 2017ರಲ್ಲಿ ನಡೆದ ಎಸ್​ಡಿಪಿಐ ಮುಖಂಡ ಕಲಾಯಿ ಅಶ್ರಫ್ ಹತ್ಯೆ ಪ್ರಮುಖ ಆರೋಪಿ, ಹಿಂದೂ…

Read More

ಮಂಗಳೂರಿನ ಹೆಸರಾಂತ ಗೌಜಿ ಇವೆಂಟ್ ಮಾಲಕ ಕಾರು ಅಪಘಾತಕ್ಕೆ ಬಲಿ..!!

ಮಂಗಳೂರಿನ ಹೆಸರಾಂತ Gowjee Events ನ ಮಾಲಕರಾದ ಅಭಿಷೇಕ್ ಪಡುಬಿದ್ರಿ ಹೆದ್ದಾರಿಯಲ್ಲಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ರಾತ್ರಿ (ಡಿಸೆಂಬರ್ 10) ಬೆಳಗಿನ ಜಾವ 2:20 ರ ಸುಮಾರಿಗೆ ಪಡುಬಿದ್ರಿ ಹೆದ್ದಾರಿಯ ಬಳಿ ಸಂಭವಿಸಿದೆ,ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ಅಭಿಷೇಕ್ ಅವರನ್ನು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

Read More

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಶ್ರೀ ವಿಠಲ್ ಕುಲಾಲ್ ಅವರು “ಉದ್ಯಮ ಸಿಂಧೂರ” ಪ್ರಶಸ್ತಿಗೆ ಆಯ್ಕೆ

ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾಯ೯ಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 04ರಂದು ನಡೆಯಲಿದೆ. ಬೆಳಿಗ್ಗೆ 09 ಗಂಟೆಗೆ ಪದಗ್ರಹಣ ನಡೆಯಲಿದ್ದು, ಬಳಿಕ ಮಧ್ಯಾಹ್ನ 12.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ನಡುಬೊಟ್ಟು…

Read More