ಮಂಗಳೂರು : ಅಕ್ರಮ ಗೋ ಮಾಂಸ ಸಾಗಾಟ ; ಇಬ್ಬರು ಅರೆಸ್ಟ್
ಮಂಗಳೂರು : ಭಜರಂಗದಳದ ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದವರನ್ನು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನ ಕದ್ರಿ ದೇವಸ್ಥಾನದ ದ್ವಾರದ ಬಳಿ ಇಂದು (ಮಾ.10) ಮುಂಜಾನೆ ನಡೆದಿದೆ. ಟೆಂಪೋದಲ್ಲಿ ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿರುವ ಕುರಿತು ಭಜರಂಗದಳ ಕಾರ್ಯಕರ್ತರಿಗೆ ಮಾಹಿತಿ ದೊರಕಿದ್ದು, ಅವರು ಕದ್ರಿ ದೇವಸ್ಥಾನದ ಬಳಿ ವಾಹನವನ್ನು ತಡೆದು ಪರಿಶೀಲನೆ ಮಾಡಿದಾಗ ಅದರಲ್ಲಿ ಗೋ ಮಾಂಸ ಇರುವುದು ಪತ್ತೆಯಾಗಿದೆ. ಬಳಿಕ ಗೋ ಮಾಂಸ ಪತ್ತೆಯ ಕುರಿತು ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ…

