ಇಂದು ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ
ನಮ್ಮ ಹಬ್ಬಗಳಲ್ಲಿ ಪ್ರಕೃತಿಯನ್ನಾಧರಿಸಿ ಮಾಡುವ ಹಬ್ಬಗಳೇ ಹೆಚ್ಚು. ಅವುಗಳಲ್ಲಿ ಒಂದು ಹೋಲಿ ಅಥವಾ ವಸಂತೋತ್ಸವ. ಈ ಹೋಲಿಗಿಂತ ಮೊದಲು ಮಲೆನಾಡು ಮತ್ತು ಕರಾವಳಿಯ ಉತ್ತರ ಭಾಗದಲ್ಲಿ ಸುಗ್ಗಿಕುಣಿತ ಎಂಬುದಾಗಿ ಹಾಲಕ್ಕಿಸಮಾಜದವರು ನಡೆಸುತ್ತಾರೆ. ಇದೊಂದು ಜಾನಪದ ಸಂಪ್ರದಾಯ. ಸಾಮಾನ್ಯವಾಗಿ ಒಂದು ಸಲದ ಬೆಳೆ ಮುಗಿದು ಎರಡೆನೇಯ ಬೆಳೆಯ ಆರಂಭಕ್ಕೂ ಮುನ್ನ ಈ ಆಚರಣೆ ಮಾಡುತ್ತಾರೆ. ನಾನಾ ವಿಧವಾದ ಪಾರಂಪರಿಕ ವೇಷಗಳನ್ನು ಧರಿಸಿ ಮನೆ ಮನೆಗೂ ತಿರುಗುತ್ತಾ ಸಂತೋಷವೃದ್ಧಿಯನ್ನು ಮಾಡುತ್ತಾರೆ. ದುಡಿದು ದಣಿದ ರೈತನಿಗೆ ಇದು ಆನಂದವನ್ನು ನೀಡುತ್ತದೆ. ಹೋಳಿ ಹಬ್ಬದ ಮಹತ್ವ…

