ಭಕ್ತಕೋಡಿ ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಆತ್ಮಹತ್ಯೆ..!

ಶ್ರೀ ರಾಮ ಭಜನಾ ಮಂದಿರದ ಭಕ್ತಕೊಡಿಯ ಅಧ್ಯಕ್ಷ ಹಾಗೂ ಷಣ್ಮುಖ ಯುವಕ ಮಂಡಲ ಸದಸ್ಯ ರಾಜೇಶ್‌ ಎಸ್‌.ಡಿ (45) ವಿಷ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಮೃತ ಹೊಂದಿದ್ದಾರೆ. ಶನಿವಾರ ಸಂಜೆ ವಿಷ ಸೇವಿಸಿದ ರಾಜೇಶ್‌ ಅವರು, ಪುತ್ತೂರಿನ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.    

Read More

ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ

 ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜಾನ್ ಡೋ (ಅಶೋಕಕುಮಾರ್) ಆದೇಶ ಹೊರಡಿಸಿದೆ. ಈ ಸಂಬಂಧ ಹಿರಿಯ ನ್ಯಾಯವಾದಿ ಎಸ್. ರಾಜಶೇಖರ್ ಹಿಳಿಯಾರು ವಾದ ಮಂಡಿಸಿದ್ದು, ದಾವೆಯನ್ನು ವಿಚಾರಣೆ ನಡೆಸಿದ ಸಿಸಿಎಚ್‌–11ನೇ ನ್ಯಾಯಾಲಯ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಹಾಗೂ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ…

Read More

ಜಸ್ಟ್ ಪಾಸ್ ಮಾಡು ಸಾಕು: ಚೀಟಿಯಲ್ಲಿ ಬರೆದು ಹುಂಡಿಗೆ ಹಾಕಿ ದೈವಕ್ಕೆ ಮನವಿಯಿತ್ತ ವಿದ್ಯಾರ್ಥಿ

ಉಡುಪಿ: ವಿದ್ಯಾರ್ಥಿಯೊಬ್ಬ ದೈವಕ್ಕೆ ಪತ್ರ ಬರೆದು ನನ್ನನ್ನು ಜಸ್ಟ್ ಪಾಸ್ ಮಾಡು ಸಾಕು ಎಂದು ಮನವಿ ಮಾಡಿದ ಅಪರೂಪದ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇಗುಲದ ಕಾಣಿಕೆ ಹುಂಡಿಯ ಹಣ ಲೆಕ್ಕಾಚಾರ ಮಾಡುವ ಸಂದರ್ಭ ಈ ಪತ್ರ ಸಿಕ್ಕಿದೆ. ಪರೀಕ್ಷೆ ಅಂದ್ರೆ ಭಯ ಯಾರಿಗಿರಲ್ಲ ಹೇಳಿ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಬರಬೇಕು ಎನ್ನುವ ಆಸೆ ಇದ್ದರೆ ಸೋಂಬೇರಿ ವಿದ್ಯಾರ್ಥಿಗಳಿಗೆ ಜಸ್ಟ್ ಪಾಸ್ ಆದ್ರೆ ಸಾಕು ಎಂಬ ಯೋಚನೆ ಇರುತ್ತೆ….

Read More

ಉಡುಪಿ: ಮಹಿಳೆಯ ಮೊಬೈಲ್‌ ಮತ್ತು ಪರ್ಸ್ ಎಗರಿಸಿದ ಆರೋಪಿ ಬಂಧನ

ಉಡುಪಿಯ ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆಯಲ್ಲಿ ನಾಲ್ಕು ದಿನಗಳ ಹಿಂದೆ ಪಾದಚಾರಿ ಮಹಿಳೆಯ ಮೊಬೈಲ್‌ ಫೋನ್‌ ಮತ್ತು ಪರ್ಸ್ ಎಗರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಲ್ಪೆಯ ತೊಟ್ಟಂ ನಿವಾಸಿ ದರ್ಶನ್‌ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಬಾಗಲ್ಕೋಟೆ ಮೂಲದ ಮಹಿಳೆ ಸರಸ್ವತಿ (21) ಎಂಬವರು ಮಾರ್ಚ್ 21 ರಂದು ಬೆಳಿಗ್ಗೆ 11:45 ಗಂಟೆಗೆ ಸಂತೆಕಟ್ಟೆಯಲ್ಲಿನ ವೈದ್ಯರ ಬಳಿ ಹೋಗಲು ತನ್ನ ಮಗನನ್ನು ಎತ್ತಿಕೊಂಡು ಕೆಳಾರ್ಕಳಬೆಟ್ಟುವಿನ ತನ್ನ ತಾಯಿಯ ಮನೆಯಿಂದ ಹೊರಟು ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಸುಲಿಗೆ…

Read More

ಮಂಗಳೂರು : ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಬಸ್ ಪೊಲೀಸರ ವಶಕ್ಕೆ

ಮಂಗಳೂರು : ವಿಟ್ಲ -ಮುಡಿಪು ಮಧ್ಯೆ 2 ದಿನಗಳಿಂದ ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಒಂದೇ ಟಯರಲ್ಲಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್ಸೊಂದು ಹಿಂದಿನ ಎಡಬದಿ ಟಯರ್‌ನಲ್ಲಿ ಮಾತ್ರ ಸಂಚರಿಸುತ್ತಿತ್ತು‌. ಇನ್ನೊಂದು ಟಯರ್ ಒಡೆದು ಕರ್ಕಶ ಶಬ್ದ ಬರುತ್ತಿತ್ತು. ಬಸ್‌ನ ಚಾಲಕ, ಕಂಡಕ್ಟರ್ ಮುಂಜಾಗ್ರತೆ ವಹಿಸಿಲ್ಲ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಮಾ.22 ಮಧ್ಯಾಹ್ನದಿಂದ ಮಾ.23 ಮಧ್ಯಾಹ್ನ ತನಕ ವಿಟ್ಲ – ಮುಡಿಪು –…

Read More

ಪುತ್ತೂರು: ಹೊಸದಾಗಿ ಖರೀದಿಸಿದ ರಿಕ್ಷಾ ಪಲ್ಟಿ- ಚಾಲಕ ಅಪಾಯದಿಂದ ಪಾರು

ಪುತ್ತೂರು : ಹೊಸ ರಿಕ್ಷಾವೊಂದು ನಿಯಂತ್ರಣ ತಪ್ಪಿ ಗುಂಡಿಗೆ ಪಲ್ಟಿಯಾದ ಘಟನೆ ಪುತ್ತೂರಿನ ಸಾಲ್ಮರದ ಕೊಟೇಚಾ ಹಾಲ್ ಬಳಿ ನಡೆದಿದೆ. ಹೊಸ ರಿಕ್ಷಾ ಖರೀದಿಸಿದ ವ್ಯಕ್ತಿ ಚಲಾವಣೆ ಕಲಿಯುತ್ತಿದ್ದ ಎನ್ನಲಾಗಿದೆ. ರಿಕ್ಷಾಕ್ಕೆ ಹಾನಿಯಾಗಿದ್ದು, ಚಾಲಕ ಮತ್ತು ಇನ್ನೋರ್ವ ವ್ಯಕ್ತಿ ರಿಕ್ಷಾದಲ್ಲಿದ್ದರು ಸಹ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Read More

ಆನ್‌ಲೈನ್ ಮೂಲಕ  ಬಡಜನರ ಬ್ಯಾಂಕ್‍ ಖಾತೆ ವಂಚನೆ – ಇಬ್ಬರು ಆರೋಪಿಗಳ ಬಂಧನ

ಮಂಗಳೂರು : ಆನ್‌ಲೈನ್ ವಂಚನೆಯ ಮೂಲಕ  ಬಡ ಜನರ ಬ್ಯಾಂಕ್ ಖಾತೆಗಳನ್ನು ದುರುಪಯೋಗಿಸುತ್ತಿದ್ದ  ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ತಹಸೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28), ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42) ಬಂಧಿತ ಆರೋಪಿಗಳು. ದಕ್ಷಿಣ ಕನ್ನಡ ಸೈಬರ್ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಪ್ಲಾನ್ ತಿಳಿದು ಬಂದಿದೆ. ಮುಗ್ಧ ಜನರ ಬ್ಯಾಂಕ್ ಖಾತೆಯೇ ಇವರ ಗುರಿಯಾಗಿತ್ತು. ಆರೋಪಿಗಳು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು…

Read More

 ‘ನಂದಿನಿ’ ಹಾಲಿನ ದರ ಲೀ.ಗೆ 3 ರೂ.ಏರಿಕೆಗೆ ಸರ್ಕಾರ ಚಿಂತನೆ

ಬೆಂಗಳೂರು: ಕೆಎಂಎಫ್, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು, ಸಂಬಂಧಿಸಿದ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಹತ್ವದ ಸಭೆ ನಡೆಸಲಿದ್ದು, ಹಾಲಿನ ದರ 3 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದೆ. ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳಕ್ಕೆ ಹಾಲು ಒಕ್ಕೂಟಗಳು ಬೇಡಿಕೆ ಸಲ್ಲಿಸಿವೆ. ಪಶು ಆಹಾರ, ಮೇವು, ಕೂಲಿ ಸೇರಿ ಇತರೆ ಖರ್ಚು ಹೆಚ್ಚಾಗಿರುವುದರಿಂದ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ….

Read More

ಮಂಗಳೂರು: ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಪ್ರವಾಸಿಗ ಸಾವು

ಮಂಗಳೂರು : ಪ್ರವಾಸಿಯೊಬ್ಬರು ನಗರದ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮಡಿಕೇರಿಯ ಕುಶಾಲನಗರದ ಪ್ರವಾಸಿ ನಿಶಾಂತ್ ಈಜಲೆಂದು ಈಜುಕೊಳಕ್ಕೆ ಹಾರಿದ ಸಂದರ್ಭ ತಲೆ ಟ್ವಿಸ್ಟ್ ಆಗಿ ಈಜುಕೊಳದಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ನಿಶಾಂತ್ ಕುಶಾಲನಗರದಲ್ಲಿ ಮೊಬೈಲ್ ಗ್ಯಾಲರಿ ಶಾಪ್ ಮಾಲೀಕರಾಗಿದ್ದರು. ಪ್ರವಾಸಕ್ಕೆಂದು ಮಂಗಳೂರಿಗೆ ಸ್ನೇಹಿತನ ಜೊತೆ ಬಂದ ಸಂದರ್ಭ ದುರ್ಘಟನೆ ಸಂಭವಿಸಿದೆ. ನೀರಿಗೆ ಹಾರಿದ ನಂತರ ನಿಶಾಂತ್ ಕೈ ಕಾಲು ಆಡಿಸದ ಕಾರಣ ಸ್ನೇಹಿತ ಹಾಗೂ ಇತರರು ಮೇಲಕ್ಕೆತ್ತಿದ್ದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯ…

Read More

ಪ್ರತಿದಿನ ಮೂಲಂಗಿ ಜ್ಯೂಸ್ ಕುಡಿಯಿರಿ..! ಒಂದು ವಾರದಲ್ಲಿಯೇ ತೂಕ ಇಳಿಸಿಕೊಳ್ಳಬಹುದು

ಪ್ರತಿದಿನ ಮೂಲಂಗಿ ರಸವನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಮತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ನಾವು ಇಂದು ಈ ಕುರಿತಾಗಿ ತಿಳಿದುಕೊಳ್ಳೋಣ.. ಮೂಲಂಗಿ ರಸ ಕುಡಿಯುವುದರಿಂದ ಹೊಟ್ಟೆ ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ. ರಕ್ತದಲ್ಲಿರುವ ತ್ಯಾಜ್ಯ ವಸ್ತುಗಳು ಹೊರಹೋಗುತ್ತವೆ. ಮೂಳೆಗಳು ಬಲಿಷ್ಠವಾಗುತ್ತವೆ. ಇದು ರಾತ್ರಿ ಊಟದಲ್ಲಿ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳುತ್ತದೆ. ಮೂಲಂಗಿಯಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅದೇ ರೀತಿ, ಇದು ಮಲಬದ್ಧತೆಯನ್ನು ತಡೆಗಟ್ಟುತ್ತದೆ ಮತ್ತು ಕರುಳಿನ ಚಲನೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಮೂಲಂಗಿ ಖನಿಜಗಳಿಂದ ಸಮೃದ್ಧವಾಗಿದೆ….

Read More