ಪುತ್ತೂರು: ಮನೆಯಂಗಳದಲ್ಲಿದ್ದ ನೀರಿನ ಟ್ಯಾಂಕ್‌ಗೆ ಬಿದ್ದು ಮಗು ಸಾವು!!

ಪುತ್ತೂರು: ತಾವರೆ ನೀರಿನ ಟ್ಯಾಂಕ್‌ಗೆ ಒಂದೂವರೆ ವರ್ಷದ ಮಗು ಬಿದ್ದು ಮೃತಪಟ್ಟ ಘಟನೆ ಬನ್ನೂರು ನೀರ್ಪಾಜೆಯಲ್ಲಿ ನಡೆದಿದೆ. ಮನೆಯಂಗಳದಲ್ಲಿ ಮಗುವಿಗೆ ಊಟ ಕೊಡುತ್ತಿದ್ದ ತಾಯಿ ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಮಗು ನಾಪತ್ತೆಯಾಗಿದೆ. ಹುಡುಕಾಡಿದಾಗ ಮನೆಯಂಗಳದ ತಾವರೆ ನೀರಿನ ಟ್ಯಾಂಕ್‌ಗೆ ಬಿದ್ದಿರುವುದು ಬೆಳಕಿಗೆ ಬಂದಿದ್ದು, ತಕ್ಷಣ ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದಲಾಗಿತ್ತು. ಆಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.    

Read More

ಬೆಂಗಳೂರಿನಿಂದ ಮಂಗಳೂರು, ಉಡುಪಿ, ಕಾರವಾರಕ್ಕೆ ವಂದೇ ಭಾರತ್ ರೈಲು

ಉಡುಪಿ: ಹಾಸನ ಮತ್ತು ಸಕಲೇಶಪುರ ವಿಭಾಗಗಳಲ್ಲಿ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಮಂಗಳೂರು, ಉಡುಪಿ ಮತ್ತು ಕಾರವಾರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಈ ಸಂಬಂಧ ಒಂದು ಮನವಿ ಪತ್ರವನ್ನು ಸಲ್ಲಿಸಿ, ಈ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸುವ ಅಗತ್ಯವನ್ನು ವಿವರಿಸಿದರು. ಮನವಿಗೆ…

Read More

ಮಂಗಳೂರು: ಯುವಕ ನೇಣು ಬಿಗಿದು ಆತ್ಮಹತ್ಯೆ!!

ಮಂಗಳೂರು ನಗರ ಹೊರ ವಲಯದ ಪಡೀಲ್‌ನಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.  ಮೃತರನ್ನು ಪಡೀಲ್ ಕೊಡೆಕ್ಕಲ್ ನಿವಾಸಿ ಶ್ರವಣ್(26) ಎಂದು ಗುರುತಿಸಲಾಗಿದೆ. ಶ್ರವಣ್ ಅವರ ಮೃತದೇಹ ಪಡೀಲ್ ಕೊಡೆಕ್ಕಲ್ ಬಳಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕಂಕನಾಡಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. 

Read More

ಜ. 04ರಂದು “ಕುಂಭಕಲಾವಳಿ ಕುಲಾಲ ಕಲಾ ಸೇವಾಂಜಲಿ” ಕಾರ್ಯಕ್ರಮ: ಮಾಣಿಲ ಸ್ವಾಮೀಜಿಯವರಿಗೆ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿ, ಆಶೀರ್ವಾದ ಪಡೆದ ಪದಾಧಿಕಾರಿಗಳು

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ) ಮಂಗಳೂರು ಇದರ ಸಹಯೋಗದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ಜ. 4, 2026ರಂದು ನಡೆಯಲಿರುವ ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿ ಕಾಯ೯ಕ್ರಮದ ಆಮಂತ್ರಣ ಪತ್ರಿಕೆಯನ್ನು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್‌ನ ಲ. ಅನಿಲ್‌ದಾಸ್ ಹಾಗೂ ಪದಾಧಿಕಾರಿಗಳು ಮಾಣಿಲ ಶ್ರೀಧಾಮದ…

Read More

ದೇಶಾದ್ಯಂತ `ಸ್ಪ್ಯಾಮ್ ಕರೆ’ ತಡೆಗೆ ಮಹತ್ವದ ಕ್ರಮ : ಒಂದೇ ಕ್ಲಿಕ್ ನಲ್ಲಿ ನಂಬರ್ ಬಂದ್ ಮಾಡಿಸಬಹುದು.!

ಸ್ಪ್ಯಾಮ್ ಕರೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ. ಇಲ್ಲಿಯವರೆಗೆ, ಟೆಲಿಕಾಂ ಆಪರೇಟರ್‌ಗಳು, ಟ್ರೂ ಕಾಲರ್‌ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳು ಅಥವಾ ಫೋನ್‌ನಲ್ಲಿ ನಿರ್ಮಿಸಲಾದ ಕೆಲವು ಆಯ್ಕೆಗಳು ಮಾತ್ರ ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಬಲ್ಲವು. ಇವುಗಳನ್ನು ಬಳಸುತ್ತಿದ್ದರೂ, ವಿವಿಧ ಮಾರ್ಕೆಟಿಂಗ್ ಕಂಪನಿಗಳು ವಿಭಿನ್ನ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಗ್ರಾಹಕರನ್ನು ಕಿರಿಕಿರಿಗೊಳಿಸುತ್ತಿದ್ದವು. ಸ್ಪ್ಯಾಮ್ ಕರೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಈ ರೀತಿಯ ಕರೆಗಳಿಂದ ಸೈಬರ್ ಅಪರಾಧಗಳು ನಡೆಯುತ್ತಿವೆ. ಪರಿಸ್ಥಿತಿ ಗಂಭೀರವಾಗಿದೆ. ಇದರೊಂದಿಗೆ, ಕೇಂದ್ರ ಸರ್ಕಾರವೂ ಸಹ ಇದನ್ನು…

Read More

ನನ್ನ CM ಮಾಡ್ತೀನಿ ಅಂದ್ರೆ ಬಿಜೆಪಿಗೆ ವಾಪಸ್ ಹೋಗ್ತೀನಿ : ಶಾಸಕ ಯತ್ನಾಳ್ ಸ್ಪೋಟಕ ಹೇಳಿಕೆ

ಬೆಳಗಾವಿ : ರಾಜ್ಯದಲ್ಲಿ ಕುರ್ಚಿ ಕದನದ ನಡುವೆ ಡಿನ್ನರ್ ಪಾಲಿಟಿಕ್ಸ್ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದ್ದು, ಇದರ ಮಧ್ಯ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಸಿಎಂ ಮಾಡ್ತೀನಿ ಅಂದ್ರೆ ಬಿಜೆಪಿಗೆ ವಾಪಸ್ ಹೋಗ್ತೀನಿ ವಾಪಸ್ ಬಿಜೆಪಿಗೆ ಬನ್ನಿ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಕರೆದಿದ್ದಾರೆ. ಅಮಿತ್ ಶಾ ಬಳಿ ನಿಯೋಗ ಹೋಗುವ ಬಗ್ಗೆ…

Read More

2025ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ವತಿಯಿಂದ ಕೊಡಮಾಡುವ ಮುಂಗಾರು ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ವಡ್ಡರ್ಸೆಯವರ ಒಡನಾಡಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆಯಾಗಿದ್ದಾರೆ. ಕಳೆದ 9 ವರ್ಷಗಳಿಂದ ನಾಡಿನ ಗಣ್ಯ ಪತ್ರಕರ್ತರಿಗೆ ಬ್ರಹ್ಮಾವರ ಪತ್ರಕರ್ತರ ಸಂಘ ಈ ಪ್ರಶಸ್ತಿ ನೀಡುತ್ತ ಬಂದಿದ್ದು 2025ನೇ ಸಾಲಿನ ಪ್ರಶಸ್ತಿಗೆ ಬೈಕಂಪಾಡಿಯವರನ್ನು ಆಯ್ಕೆ ಮಾಡಿದೆ ಹಾಗೂ 2025 ಡಿಸೆಂಬರ್ 27 ರಂದು ಶನಿವಾರ ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ…

Read More

ಬೆತ್ತಲೆ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ:ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ

ಬೆತ್ತಲೆ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆಗೆ ನೊಂದು ಎಂಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಕೇರಳ ಮೂಲದ ಜಗನ್ ಮೋಹನ್ (25) ಮೃತ ವಿದ್ಯಾರ್ಥಿ. ಮೋಹನ್ ಖಾಸಗಿ ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜು ಸಮೀಪದಲ್ಲಿರುವ ಶಾಂತಿನಗರದಲ್ಲಿ ರೂಂ ಬಾಡಿಗೆ ಪಡೆದು ವಾಸವಿದ್ದ ಮೋಹನ್ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಮೋಹನ್…

Read More

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ರಾಜ್ಯದ ಕ್ರೀಡಾಪಟುಗಳಿಗೆ ಇದೀಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ ನೀಡಲಾಗುತ್ತದೆ ಅಂತ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ‌ಸದಸ್ಯ ಐವಾನ್ ಡಿಸೋಜ ಪ್ರಶ್ನೆ ಕೇಳಿದ್ರು. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳು ಕೊಡಬೇಕು. ಈವರೆಗೂ 13 ಜನಕ್ಕೆ ಮಾತ್ರ ಹುದ್ದೆ ನೀಡಲಾಗಿದೆ. ನೇರ ನೇಮಕಾತಿಯಲ್ಲಿ 3% ಹುದ್ದೆ ಕ್ರೀಡಾಪಟುಗಳಿಗೆ ಮೀಸಲು ಇಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಒಂದು…

Read More

‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗಳನ್ನು ಪರಿಶೀಲಿಸುವ ಸಮಿತಿಯ ಅವಧಿಯನ್ನು ವಿಸ್ತರಿಸಿದ ಲೋಕಸಭೆ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಪರಿಚಯಿಸುವ ಮಸೂದೆಗಳನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಅವಧಿಯನ್ನು ಲೋಕಸಭೆ ಗುರುವಾರ ವಿಸ್ತರಿಸಿದೆ. ಸಂವಿಧಾನದ ಜಂಟಿ ಸಮಿತಿ (129 ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2024 ರ ಅವಧಿಯನ್ನು 2026 ರ ಬಜೆಟ್ ಅಧಿವೇಶನದ ಕೊನೆಯ ವಾರದ ಮೊದಲ ದಿನದವರೆಗೆ ವಿಸ್ತರಿಸುವಂತೆ ಕೋರಿ ಸಮಿತಿಯ ಅಧ್ಯಕ್ಷ ಪಿ ಪಿ ಚೌಧರಿ ಪ್ರಸ್ತಾವನೆಯನ್ನು ಮಂಡಿಸಿದರು. ಲೋಕಸಭೆಯು ಧ್ವನಿ ಮತದ ಮೂಲಕ ಈ…

Read More