ಶಾಲಾ ವಾಹನಕ್ಕೆ ಕಾರು ಡಿಕ್ಕಿ..!! ಇಬ್ಬರಿಗೆ ಗಾಯ

ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂತಲ್ ನಗರದ ಸಮೀಪ ಶಾಲಾ ವಾಹನವೊಂದಕ್ಕೆ ಇಕೋ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಾ.29 ರಂದು ಶನಿವಾರ ಬೆಳಿಗ್ಗೆ ಸಂಭವಿಸಿದೆ. ಶಾಲಾ ಮಕ್ಕಳ ವಾಹನ ಮಣಿಪುರ ಕಡೆಗೆ ಬರುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಇಕೋ ಕಾರು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ಪರಿಣಾಮ ಇಕೋ ಕಾರ್ ನಲ್ಲಿದ್ದ ತಂದೆ ಮಗ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು….

Read More

ಉಡುಪಿ: ಲವ್ ಜಿಹಾದ್ ಪ್ರಕರಣ -ದೂರು ದಾಖಲು..!!

ಉಡುಪಿ : ಓರ್ವ ಮುಸ್ಲಿಂ ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ ಷಡ್ಯಂತ್ರವಾಗಿದೆ ಎಂದು ಅಪಹರಣಕ್ಕೆ ಒಳಗಾದ ಯುವತಿಯ ತಂದೆ ಗಾಡ್ವಿನ್ ದೇವದಾಸ್ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬವನು ನನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿ ಸುತ್ತಿದ್ದಂತೆ ಮೊಹಮ್ಮದ್ ಅಕ್ರಮ್ ಉಡುಪಿ ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆ. ಯುವತಿ…

Read More

ಮೂಡುಬಿದಿರೆ: ಅಕ್ರಮ ದನ ‌ಸಾಗಾಟದ ಆರೋಪ – ಇಬ್ಬರ ಮೇಲೆ ಹಲ್ಲೆ

ಮೂಡುಬಿದಿರೆ: ಅಕ್ರಮ ದನ‌ಸಾಗಾಟದ ಆರೋಪದಲ್ಲಿ ಬಜರಂಗದಳ‌ ಕಾರ್ಯಕರ್ತರು ಇಬ್ಬರಿಗೆ ಗಂಭೀರ ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳುವಾಯಿಯಲ್ಲಿ ಸಂಭವಿಸಿದೆ. ಮೂಡುಬಿದಿರೆ ಮೂಲದ ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಪೂಜಾರಿ ಗಂಭೀರವಾಗಿ ಹಲ್ಲೆಗೀಡಾದವರು ಎಂದು ತಿಳಿಯಲಾಗಿದೆ. ಅವರನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಬ್ದುಲ್ ರಹಿಮಾನ್ ಮತ್ತು ಕೂಸಪ್ಪ ಅವರು ಹೈಬ್ರೀಡ್ ಹಸುವನ್ನು ಕೃತಕ ಗರ್ಭಧಾರಣೆಗೆಂದು ವಾಹನವೊಂದರಲ್ಲಿ ಕಾರ್ಕಳದ ತಮ್ಮ ಪರಿಚಯದವರ ಮನೆಯಿಂದ ಮೂಡುಬಿದಿರೆಗೆ ತರುವಾಗ ಬೆಳುವಾಯಿ ಎಂಬಲ್ಲಿ ವಾಹನಕ್ಕೆ ಅಡ್ಡಗಟ್ಟಿದ ಬಜರಂಗದಳದ ಕಾರ್ಯಕರ್ತರು…

Read More

ಬಂಟ್ವಾಳ: ಬಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ನಾವೂರು‌ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಮೋನು ಅರೆಸ್ಟ್

ಬಂಟ್ವಾಳ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಆರೋಪಿಯು ನಾವೂರು‌ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಯಾನೆ ಮೋನು ಎಂದು ತಿಳಿಯಲಾಗಿದೆ. ಆರೋಪಿಯನ್ನು ಸ್ಥಳೀಯರು‌ ಹಿಡಿದು ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಸರ್ಕಾರಿ ಬಸ್ ನಲ್ಲಿ ವಿದ್ಯಾರ್ಥಿನಿಗೆ ಆರೋಪಿ ಮೋನು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಬಂಟ್ವಾಳ ಪೊಲೀಸರು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.

Read More

ಬೆಳ್ತಂಗಡಿ: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ..! 100 ಪರ್ಸೆಂಟ್‌ ಫಲಿತಾಂಶಕ್ಕಾಗಿ SSLC ಪರೀಕ್ಷೆ ಬರೆಯಲು ಬಿಡದ ಶಿಕ್ಷಕರು

ಬೆಳ್ತಂಗಡಿ: ಕರ್ನಾಟಕದಾದ್ಯಂತ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುತ್ತಿದೆ. ಆದರೆ 100 ಪರ್ಸೆಂಟ್‌ ರಿಸಲ್ಟ್‌ಗಾಗಿ ಆಸೆಗೆ ಸರ್ಕಾರಿ ಶಾಲೆಯೊಂದು ಎಡವಟ್ಟು ಮಾಡಿಕೊಂಡಿದೆ. ಇಬ್ಬರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಯರನ್ನ ಪರೀಕ್ಷೆಗೆ ಕೂರಿಸದೇ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ. ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶವೇ ಕೊಟ್ಟಿಲ್ಲವಂತೆ. ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯೊಂದು, ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ. ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ….

Read More

ಮಂಗಳೂರು: ಅಕ್ರಮ ಗೋಸಾಗಾಟ..! ‌ಹಿಂದೂ ಕಾರ್ಯಕರ್ತರ ಭರ್ಜರಿ ಬೇಟೆ- 25 ಗೋವುಗಳ ರಕ್ಷಣೆ

ಮಂಗಳೂರು: ಮಂಗಳೂರಿನಲ್ಲಿ ಅಕ್ರಮ ಗೋಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಮತ್ತೆ ಭಜರಂಗದಳ ಕಾರ್ಯಕರ್ತರು ಅದನ್ನು ತಡೆದು ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ನಗರದ ಹೊರವಲಯದ ಬಜಪೆ ಸುರಲ್ಪಾಡಿಯಲ್ಲಿ ಇಂದು ನಡೆದಿದೆ. ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ವೇಳೆ ಗೂಡ್ಸ್ ವಾಹನದಲ್ಲಿ ಕಾಲುಗಳನ್ನು ಕಟ್ಟಿ ಅಮಾನುಷವಾಗಿ 25 ಗೋವುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಘಟನೆ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಕೂಡಲೇ ವಾಹನದಲ್ಲಿದ್ದ ಗೋವುಗಳನ್ನು ರಕ್ಷಣೆ ಮಾಡಿದ ಕಾರ್ಯಕರ್ತರು ವಾಹನವನ್ನು…

Read More

ಪುತ್ತೂರು: ಮಹಿಳೆ ಮೇಲೆ ತಲ್ವಾರಿನಿಂದ ಹಲ್ಲೆಗೆ ಯತ್ನ..!

ಪುತ್ತೂರು: ಮಹಿಳೆ ಮೇಲೆ ತಲ್ವಾರ್ ಬೀಸಿ ಹಲ್ಲೆಗೆ ಯತ್ನಿಸಿದ ಘಟನೆ ಸಂಪ್ಯದ ಮೂಲೆ ಎಂಬಲ್ಲಿ ನಡೆದಿದೆ. ಹಸೈನಾರ್ ಎಂಬಾತ ಸಂಪ್ಯದಮೂಲೆ ನಿವಾಸಿ ರೇಖನಾಥ್‍ ರೈ ಅವರ ಸಹೋದರಿ ಪುಷ್ಪಾವತಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Read More

ಮಲ್ಪೆ ಹಲ್ಲೆ ಪ್ರಕರಣ: ಮೂವರಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು..!

ಬೆಂಗಳೂರು: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ. ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಲಕ್ಷ್ಮೀ, ಶಿಲ್ಪಾ ಹಾಗೂ ಸುಂದರ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂರ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ನ್ಯಾಯಪೀಠ ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು. ಮಲ್ಪೆ ಬಂದರಿನಲ್ಲಿ ಮಾರ್ಚ್‌ 19ರಂದು ಮೀನುಕದ್ದ ಆರೋಪದಲ್ಲಿ ವಿಜಯನಗರದ ಲಕ್ಷ್ಮೀಬಾಯಿ ಎಂಬವರನ್ನು ಕಟ್ಟಿಹಾಕಿ ಹಲ್ಲೆ…

Read More

ಏ.1ರಿಂದ ನಂದಿನಿ ಹಾಲಿನ ದರ 4 ರೂ ಹೆಚ್ಚಳ

ಬೆಂಗಳೂರು: ರಾಜ್ಯದ ಜನತೆಗೆ ಬೆಲೆ ಏರಿಕೆ ನಿಯಂತ್ರಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಇದೀಗ ಮೂರನೇ ಬಾರಿಗೆ ನಂದಿನಿ ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಅನುಮೋದನೆ ನೀಡಿದೆ. ಬೆಂಗಳೂರಿನಲ್ಲಿ ಇಂದು ಸಚಿವ ಸಂಪುಟದ ಸಭೆ ನಡೆಸಿದ ಬಳಿಕ ಕರ್ನಾಟಕ ಹಾಲು ಒಕ್ಕೂಟದ ಎಲ್ಲಾ ನಿಗಮಗಳಿಗೂ ಅನ್ವಯವಾಗುವಂತೆ ನಂದಿನಿ ಹಾಲಿನ ದರವನ್ನು ಪ್ರತಿ ಲೀ.ಗೆ 4 ರೂ. ಹೆಚ್ಚಳ ಮಾಡುವುದಕ್ಕೆ ಅನುಮೋದನೆ ನೀಡಿದೆ. ಈ ಮೂಲಕ ಒಂದೆರಡು ದಿನಗಳಲ್ಲಿಯೇ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಈ…

Read More

ಮಂಗಳೂರು – ಬೆಂಗಳೂರು ರೈಲಿನಿಂದ ಬಿದ್ದ ಯುವಕ- 15 ಗಂಟೆ ಬಳಿಕ ಸವಣೂರಿನಲ್ಲಿ ಪತ್ತೆ..!

ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಿಂದ ಯುವಕನೋರ್ವ ಬಿದ್ದು, 15 ಗಂಟೆ ಬಳಿಕ ಪತ್ತೆಯಾದ ಘಟನೆ ಸವಣೂರಿನಲ್ಲಿ ನಡೆದಿದೆ. ಮಾ 25ರಂದು ರೈಲಿನಲ್ಲಿ ಕುಮಟದಿಂದ ಮಂಗಳೂರು ಮಾರ್ಗ ವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಉದಯ ಕುಮಾರ್ ರಾತ್ರಿ 11 ಗಂಟೆ ವೇಳೆಗೆ ಸವಣೂರು ಸಮೀಪದ ಸುಣ್ಣಾಜೆ ಬಳಿ ರೈಲಿನಿಂದ ಬಿದ್ದಿದ್ದಾರೆ. ರಾತ್ರಿ ವೇಳೆ ಯುವಕ ರೈಲಿನಿಂದ ಬೀಳುವುದನ್ನು ಸಹ ಪ್ರಯಾಣಿಕರು ಗಮನಿಸಿದ್ದು ನೆಟ್ಟಣ ತಲುಪಿದ ವೇಳೆ ರೈಲ್ವೆ ಮಾಸ್ಟ‌ರ್ ಗಮನಕ್ಕೆ ತಂದಿದ್ದರು. ಆದರೆ ಯುವಕ ಬಿದ್ದ ಜಾಗ ಯಾವುದು ಎನ್ನುವುದು…

Read More