ಸೆಲ್ಫಿ ವಿಡಿಯೋ ಮಾಡಿ ಅತ್ತೆ, ನಾದಿನಿ, ಮಗಳ ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಚಾಲಕ
ಚಿಕ್ಕಮಗಳೂರು: ವ್ಯಕ್ತಿಯೊಬ್ಬ ತಮ್ಮ ಕುಟುಂಬದ ನಾಲ್ವರ ಮೇಲೆ ಗುಂಡು ಹಾರಿಸಿ ಹತ್ಯೆಗೈದು, ಬಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಳೆಹೊನ್ನೂರು ತಾಲೂಕಿನ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಅತ್ತೆ ಜ್ಯೋತಿ(50), ಮಗಳು ಮೌಲ್ಯ(6) ಮತ್ತು ನಾದಿನಿ ಸಿಂಧು(24) ಮೇಲೆ ಖಾಸಗಿ ಶಾಲೆಯ ವಾಹನ ಚಾಲಕ ರತ್ನಾಕರ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಘಟನೆಯಲ್ಲಿ ನಾದಿನಿಯ ಗಂಡನ ಕಾಲಿಗೆ ಗುಂಡು ತಗಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹತ್ಯೆ ಬಳಿಕ ರತ್ನಾಕರ ತಾನೂ ಗುಂಡು…

