ಮಂಗಳೂರು RTO ಕಚೇರಿಗೆ ಬಾಂಬ್ ಬೆದರಿಕೆ!

ಮಂಗಳೂರು: ನೆಹರೂ ಮೈದಾನ ಬಳಿಯ ಆರ್‌ಟಿಒ ಕಚೇರಿಗೆ ಭಾನುವಾರ (ಡಿಸೆಂಬರ್ 14) ರಾತ್ರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಈ ಮೇಲ್‌ನಲ್ಲಿ ಐದು ವಿಭಿನ್ನ ಸ್ಥಳಗಳಲ್ಲಿ ಸ್ಫೋಟಕ ವ್ಯವಸ್ಥೆ ಇಟ್ಟಿರುವಂತೆ ಕಿಡಿಗೇಡಿಗಳು ಬೆದರಿಕೆ ನೀಡಿದ್ದಾರೆ. ಕಚೇರಿಯ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ಈ ಮೆಸೇಜ್‌ನ್ನು ಗಮನಿಸಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೀಗ ಮಂಗಳೂರು ಪೊಲೀಸ್ ಎಎಸ್‌ಸಿ ಮತ್ತು ಬಿಡಿಡಿಎಸ್ ತಂಡ ಕಚೇರಿ ಹಾಗೂ ಅದರ ಸುತ್ತಲೂ ತಪಾಸಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ಪರಿಶೀಲನೆಯಿಂದ ಯಾವುದೇ ಸ್ಫೋಟಕ ವಸ್ತು…

Read More

ಕುಂದಾಪುರ: ಕುಲಾಲ ಕ್ರೀಡೋತ್ಸವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲ. ಅನಿಲ್‌ದಾಸ್ ರವರಿಗೆ ಸನ್ಮಾನ ಕಾರ್ಯಕ್ರಮ

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ.) ಕುಂದಾಪುರ ಮತ್ತು ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಮಂಗಳೂರು ಇದರ ಕುಂದಾಪುರ & ಬೈಂದೂರು ವಿಧಾನಸಭಾ ಘಟಕಗಳ ನೇತೃತ್ವದಲ್ಲಿ ದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಅದ್ದೂರಿ ಕುಲಾಲ ಕ್ರೀಡೋತ್ಸವ ದಿನಾಂಕ 14-12-2025 ರಂದು ನಡೆಯಿತು . ಕ್ರೀಡೋತ್ಸವದ ಉದ್ಘಾಟನೆಯನ್ನು ಜಯರತ್ನ ಟ್ರಸ್ಟ್ ಪ್ರವರ್ತಕರು ಹಾಗೂ ಕುಂದಾಪುರ ಕಾಂಗ್ರೆಸ್ ಮುಖಂಡರಾದ ಶ್ರೀ ದಿನೇಶ್ ಹೆಗ್ಡೆಯವರು ನೆರವೇರಿಸಿದರು . ಸಭೆಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಲಾಲ…

Read More

ಬಂಟ್ವಾಳ: ಅಕ್ರಮ ಗೋ ಸಾಗಾಟ..!! ಜಾನುವಾರು ನೀಡಿದ ವ್ಯಕ್ತಿಯ ಮನೆ, ಹಟ್ಟಿ ಜಪ್ತಿ

ಬಂಟ್ವಾಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬOಧಿಸಿ ಜಾನುವಾರು ನೀಡಿದ ವ್ಯಕ್ತಿಯೊಬ್ಬರ ಮನೆ ಹಾಗೂ ಹಟ್ಟಿಯನ್ನು ಪುಂಜಾಲಕಟ್ಟೆ ಪೊಲೀಸರು ಜಪ್ತಿ ಮಾಡಿದ್ದಾರೆ. ಜಾನುವಾರು ನೀಡಿದ ಆರೋಪಿ ಭೋಜ ಮೂಲ್ಯ ಅವರ ಬಂಟ್ವಾಳ ತಾಲೂಕಿನ ಸರಪ್ಪಾಡಿ ಗ್ರಾಮದಲ್ಲಿರುವ ಮನೆ ಹಾಗೂ ಜಾನುವಾರುಹಟ್ಟಿಯನ್ನು ಕಾನೂನು ಪ್ರಕ್ರಿಯೆಯಂತೆ ಜಪ್ತಿ ಮಾಡಲಾಗಿದೆ. ಬಂಟ್ವಾಳ ಉಳಿ ಗ್ರಾಮದ ಮಣಿನಾಲ್ಕೂರು-ತೆಕ್ಕಾರು ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಹಿಂಸಾತ್ಮಕವಾಗಿ ಜಾನುವಾರನ್ನು ಸಾಗಾಟ ಮಾಡಲಾಗುತ್ತಿತ್ತು. ಪುಂಜಾಲಕಟ್ಟೆ ಪೊಲೀಸರು ಗೂಡ್ಸ್ ಆಟೋವನ್ನು ತಡೆದು ಚಾಲಕ ಶೀಧರ…

Read More

ಕುಲಾಲ ಸಂಘ ಮೂಡಬಿದ್ರೆ ಇದರ 19 ನೇ ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ: ಲ| ಅನಿಲ್ ದಾಸ್ ಅನಿಲ್‌ದಾಸ್ ರವರಿಗೆ ಸನ್ಮಾನ

ಕುಲಾಲ ಸಂಘ ಮೂಡಬಿದ್ರೆ ಇದರ 19 ನೇ ವಾರ್ಷಿಕ ಮಹಾಸಭೆ,ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ- ಸನ್ಮಾನ ಕಾರ್ಯಕ್ರಮವು ಮೂಡಬಿದ್ರೆ ವಿದ್ಯಾಗಿರಿಯಲ್ಲಿ ಶ್ರೀ ಸತೀಶ್ ಕುಲಾಲ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಕುಲಾಲ್ ಮೂಡಬಿದಿರೆ ವಹಿಸಿದರು.ನಿವೃತ್ತ ಪಂ. ಅಭಿವೃದ್ಧಿ ಅಧಿಕಾರಯಾದ ಬಿ.ಉಗ್ಗಪ್ಪ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಧನಂಜಯ ಕುಲಾಲ್, ಬಾಲಕೃಷ್ಣ ಕುಲಾಲ್, ಶಂಕರ್ ಕುಲಾಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ಇವರನ್ನು…

Read More

MNREGA ಉದ್ಯೋಗ ಖಾತರಿ ಯೋಜನೆ ಮರುನಾಮಕರಣ – ‘ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ’

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸುವ ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಮುಂದಿನಿಂದ ‘ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ’ ಎಂಬ ಹೆಸರಿನಲ್ಲಿ ಪರಿಚಿತವಾಗಲಿದೆ. ಹೊಸ ಮಸೂದೆಯಂತೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವ ಕೆಲಸದ ದಿನಗಳ ಸಂಖ್ಯೆಯನ್ನು ಪ್ರಸ್ತುತ ಇರುವ 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ, ಕನಿಷ್ಠ ದಿನಗೂಲಿಯನ್ನು ರೂ. 240ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಪರಿಗಣನೆಯಲ್ಲಿದೆ ಎಂದು…

Read More

ವಿಟ್ಲ: KSRTC ಬಸ್ಸು ಮತ್ತು ಓಮ್ನಿ ಕಾರು ನಡುವೆ ಭೀಕರ ರಸ್ತೆ ಅಪಘಾತ; ಓಮ್ನಿ ಚಾಲಕ ಮೋನಪ್ಪ ಕುಲಾಲ್ ಮೈರ ಮೃತ್ಯು…!

ವಿಟ್ಲ: ಪೆರುವಾಯಿ ಸಮೀಪ ಮುಳಿಯ ಎಂಬಲ್ಲಿ KSRTC ಬಸ್ಸು ಮತ್ತು ಓಮ್ನಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ವಿಟ್ಲದಿಂದ ಪೆರುವಾಯಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲ ಕಡೆಗೆ ಬರುತ್ತಿದ್ದ KSRTC ಬಸ್ಸು ಮುಳಿಯ ಎಂಬಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಓಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು ಓಮ್ನಿ ಚಾಲಕ ಮೋನಪ್ಪ ಕುಲಾಲ್ ಮೈರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೋನಪ್ಪ…

Read More

ಕುಲಾಲ ಸಂಘ ವಾಮದಪದವು ಇದರ ವಾರ್ಷಿಕ ಮಹಾಸಭೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲ. ಅನಿಲ್‌ದಾಸ್ ರವರಿಗೆ ಸನ್ಮಾನ

ವಾಮದಪದವು: ಕುಲಾಲ ಸಂಘ ವಾಮದಪದವು ಇದರ ವಾರ್ಷಿಕ ಮಹಾಸಭೆಯು ಪದವು ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಲಯನ್ ಅನಿಲ್ ದಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಭವ ರುದ್ರನಾಥೇಶ್ವರ ಕ್ಷೇತ್ರದ ಶ್ರೀ ರವಿ ನಡುಬೊಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು . ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ ಮತ್ತು ಮುಖ್ಯ ಆಥಿತಿಗಳಾಗಿ ಗಿರೀಶ್ ಕುಂಭಶ್ರೀ, ಈಶ್ವರ್ ಕಣ್ವ ತೀರ್ಥ, ಪ್ರಿಯಾ ಸತೀಶ್, ಸೋಮಯ್ಯ ಅನೈನಾಡೆ, ರಾಧ ಕೃಷ್ಣ ಬಂಟ್ವಾಳ, ಬಂಟ್ವಾಳ ಅಧ್ಯಕ್ಷ ರಾದ ರಮೇಶ್ ಸಂಚಯ ಗಿರಿ, ಸುರೇಶ್ ನಾವೂರ್, ಪ್ರವೀಣ್…

Read More

ವಿಟ್ಲ: ಓಮ್ನಿ ಕಾರ್ ಗೆ KSRTC ಬಸ್ ಡಿಕ್ಕಿ..!! ಮೂವರು ಗಂಭೀರ

ವಿಟ್ಲ: ಪೆರುವಾಯಿ ಸಮೀಪ ಮುಳಿಯ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಮತ್ತು ಓಮ್ನಿ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನ ಮೋನಪ್ಪ ಕುಲಾಲ್ ಮೈರ, ಪತ್ನಿ ಲಲಿತಾ ಮತ್ತು ರಮಣಿ ಎಂದು ಗುರುತಿಸಲಾಗಿದೆ. ವಿಟ್ಲದಿಂದ ಪೆರುವಾಯಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ಮತ್ತು ಪಕಳಕುಂಜದಿಂದ ವಿಟ್ಲ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಮುಳಿಯ ಎಂಬಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಓಮ್ನಿಯಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು,…

Read More

ಬಂಟ್ವಾಳ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ..!!

ಬಂಟ್ವಾಳ : ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, 810 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) ಹಾಗೂ ಬಂಟ್ವಾಳ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಸೆರೆಯಾಗಿರುವ ಆರೋಪಿಗಳು. ಡಿಸೆಂಬರ್ 13ರ ಸಂಜೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಹನಮನಗರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧಾರವಾಗಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ…

Read More

ಮಂಗಳೂರು: ಸ್ಕೂಟರ್ ಚಲಾಯಿಸಿದ ಅಪ್ರಾಪ್ತ ಬಾಲಕ – ಮಾಲಕನಿಗೆ 25,000 ರೂ. ದಂಡ

ಮಂಗಳೂರು: ಅಪ್ರಾಪ್ತ ಬಾಲಕ ಸ್ಕೂಟರ್ ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದಡಿ ಸ್ಕೂಟರ್ ಮಾಲಕನಿಗೆ ನ್ಯಾಯಾಲಯದ ದಂಡ ವಿಧಿಸಿದೆ. ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ 2025ರ ಮಾ.30ರಂದು ಮುಂಜಾವ 3:50ರ ವೇಳೆಗೆ ಅಪ್ರಾಪ್ತ ಬಾಲಕ ಸ್ಕೂಟರ್‌ನಲ್ಲಿ ತೆರಳುತ್ತಿದ್ದ. ಆ ವೇಳೆ ಅದೇ ದಿಕ್ಕಿನಲ್ಲಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಾಲಕ ಢಿಕ್ಕಿ ಹೊಡೆದಿದ್ದು, ಇದರಿಂದ ಎರಡೂ ವಾಹನದಲ್ಲಿದ್ದವರು ಗಾಯಗೊಂಡಿದ್ದರು. ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಎಸ್‌ ಐ…

Read More