ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನೀಶ್’ ಅಂತ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ವೈರಲ್..!

ಮಂಗಳೂರು: ನಗರದ ಬಜ್ಪೆ ಕಿನ್ನಿಪದವು ಬಳಿ ನಿನ್ನೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು  ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್​ನ ಫಾಜಿಲ್ ಎಂಬಾತನ ಹತ್ಯೆ ಮಾಡಲಾಗಿತ್ತು. ಇದೇ ಸೇಡಿಗೆ ಈಗ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ. ಸುಹಾಸ್ ಹತ್ಯೆ ಬೆನ್ನಲ್ಲೇ ‘ಫಿನೀಶ್’ ಅಂತ ಸೋಶಿಯಲ್​ ಮೀಡಿಯಾದಲ್ಲಿ ಅದೊಂದು ಪೋಸ್ಟ್ ವೈರಲ್​ ಆಗಿದ್ದು, ಸದ್ಯ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ. ಮಾರ್ಚ್ 31ರಂದೇ ಸುಹಾಸ್ ಶೆಟ್ಟಿ ಹತ್ಯೆಗೆ ಮುಹೂರ್ತ…

Read More

ಮಂಗಳೂರು: ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ..!! ಖಾಸಗಿ ಬಸ್ ಮೇಲೆ ಕಲ್ಲು ತೂರಾಟ, ಬಸ್ ಸಂಚಾರ ಸ್ಥಗಿತ

ಮಂಗಳೂರು: ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಬಂದ್‌ಗೆ ಕರೆ ನೀಡಿದ್ದು ನಗರದಲ್ಲಿ ಅಂಗಡಿಗಳು ಮುಚ್ಚಿವೆ. ಬಸ್ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನಿಂದ ಬಂದ ನಾಲ್ಕು ಬಸ್‌ಗಳಿಗೆ ಕಿಡಿಗೇಡಿಗಳು ನಸುಕಿನಲ್ಲಿ ಕಲ್ಲೆಸೆದಿದ್ದಾರೆ. ಇದರ ಬೆನ್ನಲ್ಲೆ ಕೆಎಸ್ಆರ್‌ಟಿಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಪಂಪ್‌ವೆಲ್‌ ಬಳಿ ನಾಲ್ಕು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗಿಲ್ಲ, ಬಸ್‌ಗಳ ಗಾಜು ಒಡೆದಿವೆ. ಹಾಗಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದು ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ…

Read More

ಮಂಗಳೂರು ಗುಂಪು ಹತ್ಯೆ: ಇನ್‌ ಸ್ಪೆಕ್ಟರ್ ಶಿವಕುಮಾರ್ ಸಹಿತ ಮೂವರು ಪೊಲೀಸರು ಅಮಾನತು

ಮಂಗಳೂರು: ನಗರ ಹೊರವಲಯದ ಕುಡುಪು ಎಂಬಲ್ಲಿ ಎ.27ರಂದು ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ ಸ್ಪೆಕ್ಟರ್ ಶಿವಕುಮಾರ್ ಕೆ ಆರ್ ‌ಸಹಿತ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಕೇರಳ ಮೂಲದ ಅಶ್ರಫ್ ಎಂಬವರನ್ನು 30 ಮಂದಿಯ ಗುಂಪು ಥಳಿಸಿ ಹತ್ಯೆಗೈದಿದ್ದರು‌. ಪ್ರಕರಣ ಬೆಳಕಿಗೆ ಬಂದರೂ ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆಕ್ಷೇಪ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು. ಆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು 20 ಮಂದಿ ಆರೋಪಿಗಳನ್ನು ‌ಬಂಧಿಸಿದ್ದರು‌. ಪ್ರಕರಣದಲ್ಲಿ ಕರ್ತವ್ಯಲೋಪ…

Read More

ಪುತ್ತೂರು: ವಿದ್ಯುತ್‌ ಶಾಕ್ ಹೊಡೆದು ಮಹಿಳೆ ಸಾವು

ಪುತ್ತೂರು: ಪುತ್ತೂರಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕದಲ್ಲಿ ವಿದ್ಯುತ್ ಶಾಕ್‌ನಿಂದ ಮಹಿಳೆ ಮೃತಪಟ್ಟ ಘಟನೆ ಎ. 30ರಂದು ಸಂಭವಿಸಿದೆ. ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಸಾವನ್ನಪ್ಪಿದವರು. ಏಪ್ರಿಲ್ 30ರಂದು ಮನೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಮಧ್ಯಾಹ್ನ ವೇಳೆ ಮನೆಯ ಟೇರಸ್ ಮೇಲೆ ತೆರಳಿದ್ದ ಸಂದರ್ಭದಲ್ಲಿ ಪಂಪ್‌ಗೆ ಅಳವಡಿಸಿದ್ದ ವಯರ್ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Read More

ಅಕ್ಷಯ ತೃತೀಯ ಬೆನ್ನಲ್ಲೇ ಬಂಗಾರ ಬೆಲೆಯಲ್ಲಿ ಇಳಿಕೆ

ಅಕ್ಷಯ ತೃತೀಯ ದಿನದ ಕರ್ನಾಟಕ ಸೇರಿದಂತೆ ದೇಶದಲ್ಲಿ ದಾಖಲೆ ಮೊತ್ತದ ಚಿನ್ನಾಭರಣ ಮಾರಾಟವಾಗಿದೆ. ಕರ್ನಾಟಕದಲ್ಲಿ ಅಕ್ಷಯ ತೃತೀಯ ದಿನ ಬರೋಬ್ಬರಿ 3000 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದೀಗ ಅಕ್ಷಯ ತೃತೀಯ ದಿನ ಬಳಿಕ ಅಂದರೆ ಮೇ.01 ರಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇದು ಹಲವರ ನೆಮ್ಮದಿಗೆ ಕಾರಣವಾಗಿದೆ.

Read More

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ..!

ಬಂಟ್ವಾಳ ರೈಲ್ವೆ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬುಧವಾರ ಸಂಜೆ ವೇಳೆ 40-45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ಥಳಿಯರು ನೀಡಿರುವ ಮಾಹಿತಿಯಂತೆ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮೇಲಕ್ಕೆತ್ತಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಧಿಸಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಘಟನೆಯ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದೆ.

Read More

ಮಂಗಳೂರು: ಖಾಸಗಿ ಗೋಡೌನ್ ನಲ್ಲಿ ಅಕ್ರಮ ದಾಸ್ತಾನು ಇಟ್ಟಿದ್ದ 500 ಕ್ವಿಂಟಾಲ್‌ ಅಕ್ಕಿಪತ್ತೆ..!

ಮಂಗಳೂರು: ಮಂಗಳೂರಿನ ಖಾಸಗಿ ಗೋಡೌನ್ ಒಂದರಲ್ಲಿ ನೂರಾರು ಮೂಟೆ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಮಂಗಳೂರು ನಗರದ ಬಂದರು ಸಮೀಪದ ಅಕ್ಕಿ ದಾಸ್ತಾನು ಗೋಡೌನ್​​ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್ ಸೂಚನೆಯಂತೆ ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರು ದಾಳಿ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಸುಮಾರು 500 ಕ್ವಿಂಟಾಲ್‌ ಅಕ್ಕಿ ಅಕ್ರಮ ದಾಸ್ತಾನು ಇಟ್ಟಿರುವುದು ಪತ್ತೆಯಾಗಿದೆ. ಇದು ಅನ್ನಭಾಗ್ಯದ ಅಕ್ಕಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಅನ್ನಭಾಗ್ಯದ ಅಕ್ಕಿ ತಂದು…

Read More

ಮಂಗಳೂರು: “ಭಾರತ ದ್ವೇಷಿಸುವೆ” ಎಂದಿದ್ದ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ಅಫೀಫಾ ಫಾತೀಮಾ ಕೆಲಸದಿಂದ ವಜಾ..!

ಮಂಗಳೂರು: ಭಾರತ ದ್ವೇಷಿಸುವೆ ಎಂದಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜೊತೆಗೆ ಈಕೆ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಡೀ ಭಾರತವೇ ಆಕ್ರೋಶ ವ್ಯಕ್ತಪಡಿಸಿತ್ತು. ಉಗ್ರರ ಗುಂಡಿಗೆ ಬಲಿಯಾದವರ ಕುಟುಂಬಸ್ಥರ ಕಣ್ಣೀರು ಇನ್ನೂ ನಿಂತಿಲ್ಲ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಇಡಿ ವಿಶ್ವವೇ ಖಂಡಿಸಿದೆ. ಆದ್ರೆ, ಮಂಗಳೂರಿನ ವೈದ್ಯೆ ಎಕ್ಸ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ಆಕ್ರೋಶಕ್ಕೂ ಕಾರಣವಾಗಿತ್ತು. ಪೆಹಲ್ಗಾಮ್​ನಲ್ಲಿ ನಡೆದ ದಾಳಿ ವಿರುದ್ಧದ ಸಿಟ್ಟು ದಿನಕಳೆಂದಂತೆ…

Read More

ಮಂಗಳೂರು: ಯುವಕನ ಕೊಲೆಶಂಕೆ ಪ್ರಕರಣ – ವದಂತಿಗಳಿಗೆ ಕಿವಿಗೊಡದಿರಿ: ಅನುಪಮ್ ಅಗರ್ವಾಲ್

ಮಂಗಳೂರು : ನಗರ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು, ಕೊಲೆಶಂಕೆ ವ್ಯಕ್ತವಾಗಿದೆ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಸುಮಾರು 35ರಿಂದ 40 ವರ್ಷ ಪ್ರಾಯದ ಹೊರ ರಾಜ್ಯದ ಈ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ನಗರದ ಕುಡುಪು ಕಟ್ಟೆ ಸಮೀಪದ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಅಪರಿಚಿತ ಯುವಕನೊಬ್ಬ ತೆರಳಿದ್ದು, ಯಾವುದೋ ಕಾರಣಕ್ಕೆ…

Read More

ನೀವು ಹಿಂದೂಗಳನ್ನು ಉಳಿಸಿದರೆ ನಾವು ನಿಮ್ಮ ಕುಟುಂಬವನ್ನು ಮುಗಿಸುತ್ತೇವೆ – ಯೋಧನ ಮನೆಯ ಹೊರಗೆ ಬೆದರಿಕೆ ಪತ್ರ ಪತ್ತೆ

ನವದೆಹಲಿ: ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನೆಯ ಪ್ಯಾರಾ ಕಮಾಂಡೋ ಅವರ ಪಶ್ಚಿಮ ಬಂಗಾಳ ನಿವಾಸದ ಹೊರಗೆ “ಗೌರವ್ ಅವರ ತಲೆ ಬೇಕು ಮತ್ತು “ಪಾಕಿಸ್ತಾನ್ ಜಿಂದಾಬಾದ್” ನಂತಹ ಸಂದೇಶಗಳನ್ನು ಹೊಂದಿರುವ ಕೈಬರಹದ ಟಿಪ್ಪಣಿಯೊಂದಿಗೆ ಬೆದರಿಕೆ ಪೋಸ್ಟರ್ ಕಂಡುಬಂದಿದೆ. ಹೂಗ್ಲಿ ಜಿಲ್ಲೆಯ ಧನಿಯಾಖಾಲಿ ಗ್ರಾಮದಲ್ಲಿರುವ ಸೇನಾ ಯೋಧ ಗೌರವ್ ಮುಖರ್ಜಿ ಅವರ ಮನೆಯ ಬಳಿ ಶನಿವಾರ ರಾತ್ರಿ ಪತ್ತೆಯಾದ ಈ ಟಿಪ್ಪಣಿಯಲ್ಲಿ ಹಲವಾರು ಕಾಗುಣಿತ ದೋಷಗಳೊಂದಿಗೆ ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ ಮತ್ತು ಅವರ ಕುಟುಂಬದ…

Read More