ಪಾಕಿಸ್ತಾನದ ವಿರುದ್ಧ ಸಮರಕ್ಕೆ ಭಾರತ ಸಜ್ಜು : ನಾಳೆಯಿಂದ ದೇಶಾದ್ಯಂತ ʻಯುದ್ಧದ ಡ್ರಿಲ್‌ʼ, ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ಸೈರನ್‌.!

ನವದೆಹಲಿ : ಭಾರತ ಸರ್ಕಾರವು ಮೇ 7, 2025 ರಂದು ದೇಶಾದ್ಯಂತ ಗುರುತಿಸಲಾದ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಬೃಹತ್ ಅಣಕು ಡ್ರಿಲ್ ಅನ್ನು ಆಯೋಜಿಸಲಿದೆ. ಕ್ಷಿಪಣಿ ದಾಳಿ ಅಥವಾ ವಾಯುದಾಳಿಗಳಂತಹ ಯುದ್ಧದಂತಹ ಸಂದರ್ಭಗಳಲ್ಲಿ ಸಾರ್ವಜನಿಕರು ಎಷ್ಟು ಬೇಗನೆ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಬಹುದು ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿದೆ. ಈ ಅಣಕು ಪ್ರದರ್ಶನವು ನಿಜ ಜೀವನದ ಸನ್ನಿವೇಶಗಳನ್ನು ಅನುಕರಿಸುತ್ತದೆ, ವಾಯುದಾಳಿಯ ಸೈರನ್‌ಗಳು ಸದ್ದು ಮಾಡುವುದು, ನಗರಗಳಲ್ಲಿ ವಿದ್ಯುತ್ ಕಡಿತಗೊಳ್ಳುವುದು, ಆಶ್ರಯ ಪಡೆಯುವ ಅಭ್ಯಾಸ ಮಾಡುತ್ತಿರುವ ಜನರು ಮತ್ತು…

Read More

ಸುಹಾಸ್ ಭೀಕರ ಹತ್ಯೆ ಪ್ರಕರಣ : ಈ ಕೃತ್ಯದಲ್ಲಿ ಬಜಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ನ ಬಗ್ಗೆ VHP ಅನುಮಾನ..!

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆ ಮೇಲೆ ನೇರ ಅನುಮಾನವಿದೆ ಇದರಲ್ಲಿ ಬಜ್ಪೆ ಪೋಲೀಸರ ಕೈವಾಡವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೃತ್ಯಕ್ಕಾಗಿ 50 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ಹೂಡಿಕೆಯಾಗಿದ್ದು, ಇದರ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡಿದೆ ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಕೆ.ಟಿ. ಉಲ್ಲಾಸ್ ಆರೋಪಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉಲ್ಲಾಸ್ ಪಿಎಫ್‌ಐನ ಟಾರ್ಗೆಟೆಡ್ ಕಿಲ್ಲಿಂಗ್ ಈ ಪ್ರಕರಣದಲ್ಲೂ ನಡೆದಿದೆ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ…

Read More

ಮಂಗಳೂರು: 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ..!

ಮಂಗಳೂರು: ಮಂಗಳೂರಿನ ಪಣಂಬೂರಿನಲ್ಲಿ ಮೂರು ವರ್ಷ ಪ್ರಾಯದ ಮಗುವಿನ ಮೇಲೆ 50ರ ಹರೆಯದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಉತ್ತರ ಭಾರತದ ದಂಪತಿಯ 3 ವರ್ಷ ಪ್ರಾಯದ ಮಗುವಿನ ಮೇಲೆ ಅಶೋಕ್‌ ಖಾರ್ವಿ (50) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಎಫ್‌ಐಆರ್‌ ದಾಖಲಾಗಿದೆ. ಪಣಂಬೂರಿನ ಬೆಂಗ್ರೆಯಲ್ಲಿ ಘಟನೆ ನಡೆದಿದ್ದು, ಭಾನುವಾರ ದಂಪತಿ ಮನೆಯಲ್ಲಿ ಇಲ್ಲದ ವೇಳೆ ಅರೋಪಿ ಮಗುವನ್ನು ತನ್ನ ಮನೆಗೆ ಕರೆದುಕೊಂಡು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ದಂಪತಿ ಸಂಜೆ ಮನೆಗೆ ಹಿಂದಿರುಗಿದ…

Read More

ಉಪ್ಪಿನಂಗಡಿ: ಅಕ್ರಮ ಜಾನುವಾರು ಸಾಗಾಟ- ಚಾಲಕ ವಶಕ್ಕೆ..!!

ಉಪ್ಪಿನಂಗಡಿ: ಗೂಡ್ಸ್‌ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಉಪ್ಪಿನಂಗಡಿ ಪೊಲೀಸರು ಉಪ್ಪಿನಂಗಡಿ ಬಳಿಯ ಉರುವಾಳು ಗ್ರಾ.ಪಂನ ಕುಪ್ಪೆಟ್ಟಿ ಎಂಬಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಾಹನ ಚಾಲಕ ಜಯಂತ್ ಗೌಡ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ಜಯಂತ್ ಗೌಡನು ಕುಪ್ಪೆಟ್ಟಿಯ ಬದ್ರುದ್ದೀನ್ ಎಂಬಾತನಿಗೆ ಜಾನುವಾರುಗಳನ್ನು ತಲುಪಿಸುತ್ತಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ದಾಖಲೆಗಳಿಲ್ಲದೆ ಸಾಗಾಟ ಮಾಡಲಾಗುತ್ತಿದ್ದ ನಾಲ್ಕು ಜಾನುವಾರುಗಳು ಪತ್ತೆಯಾಗಿದೆ. ಈ ಘಟನೆಗೆ ಸಂಬಂಧಿಸಿ ಮೂವರ ವಿರುದ್ಧ ಪ್ರಕರಣ…

Read More

ಬೆಳ್ತಂಗಡಿ: 16 ವರ್ಷದ ಬಾಲಕ ಹೃದಯಾಘಾತದಿಂದ ಸಾವು…!

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿವಾಸಿ ಒಂಭತ್ತನೇ ತರಗತಿ ಮುಗಿಸಿ ಹತ್ತನೇ ತರಗತಿ ಹೋಗಬೇಕಾದ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮೇ 4ರಂದು ಸಂಭವಿಸಿದೆ. ಧರ್ಮಸ್ಥಳದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗೋವಿಂದ ಗೌಡರ ಪುತ್ರ ಪ್ರಥಮ್ (16) ಮೃತ ಬಾಲಕ. ಮೇ 4ರಂದು ಮಧ್ಯಾಹ್ನ ಮನೆಯ ಸಮೀಪ ಆಟವಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಬಾಲಕನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಫಲಕಾರಿಯಾಗಿಲ್ಲ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಶರಣ್​ ಪಂಪ್ವೆಲ್​, ಭರತ್ ಕುಮ್ಡೇಲ್​​, ರಿಯಾಜ್ ಕಡಂಬುಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಮಂಗಳೂರು: ಜೀವ ಬೆದರಿಕೆ ಇರುವ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್​ ಪಂಪ್ವೆಲ್ ಮಂಗಳೂರಿನ ಕದ್ರಿ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆ ಪೊಲೀಸರು ಇನ್​ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ ಮತ್ತು ಬಿಎನ್​ಎಸ್ ಕಾಯ್ದೆ 351(4) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಶರಣ್​ ಪಂಪ್ವೆಲ್​ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಜೀವ ಬೆದರಿಕೆ ಒಡ್ಡಿದ್ದರು. ‘‘ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್’’ ಎಂದು ಪೋಸ್ಟ್ ಮಾಡಿದ್ದರು. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್. ಶರಣ್ ಹತ್ಯೆಯಾಗಲು ತಯಾರಾಗು’’…

Read More

ಸುಹಾಸ್ ಶೆಟ್ಟಿ ಹತ್ಯೆಗೆ ಬಿಗ್ ಟ್ವಿಸ್ಟ್ : ಕೃತ್ಯಕ್ಕೆ 20 ಕ್ಕೂ ಅಧಿಕ ಜನ ಶಾಮೀಲು..!

ಮಂಗಳೂರು : ಹಿಂದೂ ಕಾರ್ಯಕರ್ತ ಹತ್ಯೆಗೆ ಸಂಬಂಧಿಸಿದಂತೆ ಪೋಲಿಸರು 30 ಕ್ಕೂ ಅಧಿಕ ಜನರ ವಿಚಾರಣೆ ನಡೆಸಿದ್ದಾರೆಂದು ತಿಳಿದಿದೆ. ಈ ಕೃತ್ಯ ಪ್ರೀ ಪ್ಲಾನ್ ಆಗಿ ನಡೆಸಿದ್ದು ಘಟನಾ ಸ್ಥಳದ ವಿಡಿಯೋ ಸರಿಯಾಗಿ ಗಮನಿಸಿದರೆ ಹಲವು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.ಸುವಾಸ್ ಶೆಟ್ಟಿ ಚಲನವಲನದ ಇಂಚಿಂಚು ಮಾಹಿತಿ ಸ್ಥಳೀಯರು ನೀಡಿದ್ದಾರೆಂದು ಮಾಹಿತಿ ದೊರೆತಿದೆ. ಬಜ್ಪೆ ಪರಿಸರದಲ್ಲಿ ಆರೋಪಿಗಳಿಗೆ ಸ್ಥಳೀಯರ ನೆರವು ನೀಡಿದ್ದು ಘಟನಾ ಸಂಧರ್ಭದ ಸಿಸಿಟಿವಿ ಫೂಟೇಜ್,ಮೊಬೈಲ್ ವಿಡಿಯೋ ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸುಹಾಸ್ ಕಾರ್ ಬರೋ ಟೈಮಿಂಗ್ಸ್…

Read More

ಮಂಗಳೂರು: ಮತ್ತಿಬ್ಬರು ಹಿಂದೂಪರ ಮುಖಂಡರಿಗೆ ಜೀವ ಬೆದರಿಕೆ – ಡೇಟ್‌ ಫಿಕ್ಸ್‌ ಮಾಡಿ ಪೋಸ್ಟ್.!

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಮಾಡಿ ರೈಟ್ ಚಿಹ್ನೆ ಹಾಕಿ ಮತ್ತೊರ್ವ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಗೂ ಬೆದರಿಕೆ ಬಂದಿದೆ ಆದರೆ ಭರತ್ ಕುಂಮ್ಡೆಲ್ ರವರಿಗೆ 5-5-2025 9.30 ರ ಒಳಗೆ ನೀನು ಇದ್ದ ಸ್ಥಳದಲ್ಲೇ ಮುಗಿಸುತ್ತೆನೆಂದು ಸಾಮಾಜಿಕ ಜಾಲಾತಾಣದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಪೋಸ್ಟ್ ವೈರಲ್ ಮಾಡಿದ್ದಾರೆ. ಮತ್ತೊರ್ವ ಹಿಂದೂ ಮುಖಂಡ ಭರತ್ ಕುಂಮ್ಡೇಲ್ ಗೆ ಈ ರೀತಿ ಜೀವ ಬೆದರಿಕೆ ಹಾಕಿದ್ದಾರೆ.

Read More

ಮಂಗಳೂರು : ಬಸ್‌ಗೆ ಕಲ್ಲು ತೂರಾಟ ಪ್ರಕರಣ – ನಾಲ್ವರ ಬಂಧನ

ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಕೃತ್ಯ ಖಂಡಿಸಿ ವಿಶ್ವಹಿಂದೂ ಪರಿಷತ್ ನೀಡಿದ್ದ ದ.ಕ. ಜಿಲ್ಲಾ ಬಂದ್ ಸಂದರ್ಭ ನಗರದ ಪಂಪ್‌ವೆಲ್ ಬಳಿ ಬಸ್‌ಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ನಾಲ್ಕು ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಲಾದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಅತ್ತಾವರ ನಿವಾಸಿಗಳಾದ ಬಾಲಚಂದ್ರ (31), ಅಕ್ಷಯ್ (21), ಜಪ್ಪಿನಮೊಗರು ನಿವಾಸಿ ಶಬೀನ್ ಪಡಿಕ್ಕಲ್ (38), ಮಂಜನಾಡಿ ನಿವಾಸಿ ರಾಕೇಶ್ ಎಂ.(26) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.ಮೇ 2ರಂದು ಬೆಳಗ್ಗೆ…

Read More

ಗಡಿಯಲ್ಲಿ ಪಾಕಿಸ್ತಾನಿ ರೇಂಜರ್ ಬಂಧಿಸಿದ ಭಾರತೀಯ ಸೇನೆ

ನವದೆಹಲಿ: ಬಿಎಸ್ಎಫ್ ಕಾನ್ಸ್ಟೇಬಲ್ ಒಂದು ವಾರಕ್ಕೂ ಹೆಚ್ಚು ಕಾಲ ಪಾಕಿಸ್ತಾನದ ವಶದಲ್ಲಿರುವುದರಿಂದ ಪಾಕಿಸ್ತಾನಿ ರೇಂಜರ್ ಒಬ್ಬರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ . ಕಳೆದ ವಾರ, ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ ಬಿಎಸ್ಎಫ್ ಕಾನ್ಸ್ಟೇಬಲ್ ಪಿ.ಕೆ.ಸಾಹು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅವರ ಸುರಕ್ಷಿತ ಬಿಡುಗಡೆಗೆ ಸಂಬಂಧಿಸಿದಂತೆ ಎಂಟು ದಿನಗಳಿಂದ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ. ಆದಾಗ್ಯೂ, ಅವು ಇಲ್ಲಿಯವರೆಗೆ ಯಾವುದೇ ಫಲಿತಾಂಶಗಳನ್ನು ನೀಡಿಲ್ಲ. ಬಿಎಸ್ಎಫ್ ಅಧಿಕಾರಿಗಳಿಗೆ ಪಾಕಿಸ್ತಾನದಿಂದ ಪದೇ ಪದೇ ಅದೇ ಉತ್ತರವನ್ನು ನೀಡಲಾಗಿದೆ. ನಾವು ಉನ್ನತ ಅಧಿಕಾರಿಗಳ…

Read More