ವಿಟ್ಲ: ಪೆಟ್ರೋಲ್ ಹಾಕಿ ಹಣ ನೀಡದೆ ಯಾಮಾರಿಸಿದ ಆಲ್ಟೋ ಕಾರು ಅಪಘಾತ..!!
ವಿಟ್ಲ: ಮದ್ಯ ಸೇವಿಸಿ ಆಲ್ಟೋ ಕಾರಿನಲ್ಲಿ ಬಿ.ಸಿ.ರೋಡ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ ಹಣ ನೀಡದೆ ಸಾಲೆತ್ತೂರು ಮೂಲಕ ಇಬ್ಬರು ಯುವಕರು ಪರಾರಿಯಾಗಿದ್ದು, ಸಮೀಪದ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ಮೇ 20ರಂದು ನಡೆದಿದೆ. ಈ ಅಪಘಾತದಲ್ಲಿ ಆಕ್ಟಿವಾ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಅವರಿಗೆ ಗಂಭೀರ ಗಾಯಗಳಾಗಿವೆ. ಆಲ್ಟೋ ಕಾರಿನಲ್ಲಿದ್ದ ಇಬ್ಬರು ಮದ್ಯವ್ಯಸನಿಗಳಾಗಿದ್ದು, ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಕಾರು…

