ಅದ್ದೂರಿಯಾಗಿ ನಡೆದ ಕುಲಾಲ ಸಂಘ ಕೊಲ್ಯ ಇದರ 60 ನೇ ವಾರ್ಷಿಕೋತ್ಸವ

ಕುಲಾಲ ಸಂಘ ಕೊಲ್ಯ ಇದರ 60 ನೇ ವಾರ್ಷಿಕೋತ್ಸವವು, ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಶ್ರೀ ಭಾಸ್ಕರ್ ಕುತ್ತಾರ್ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ದಯಾನಂದ ಪಿ ಎಸ್.( ಟ್ರಸ್ಟಿ ಶ್ರೀ ವೀರ ನಾರಾಯಣ ದೇವಸ್ಥಾನ.ಕುಲಶೇಖರ) ಇವರು ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ. ಪೃಥ್ವಿರಾಜ್. ಗುರುಪುರ.(k. P. C. C. ಸದಸ್ಯರು.) ಶ್ರೀ ಗಂಗಾಧರ್ ಬಂಜನ್.(ರಾಜ್ಯಾಧ್ಯಕ್ಷರು ಕುಲಾಲ ಯುವ ವೇದಿಕೆ) ಶ್ರೀ ಅಶೋಕ್ ಕುಲಾಲ್…..

Read More

ಪುತ್ತೂರು: ಕಾರಿಗೆ ಬಸ್ ಡಿಕ್ಕಿ- ಮೂವರು ಗಂಭೀರ

ಪುತ್ತೂರು : ಕಾರು ಹಾಗೂ ಖಾಸಗಿ ಬಸ್‍ ಡಿಕ್ಕಿ ಹೊಡೆದುಕೊಂಡು ಮೂವರು ಗಂಭೀರ ಗಾಯಗೊಂಡ ಘಟನೆಮುರ ಸಮೀಪ ಇಂದು ಮುಂಜಾನೆ ನಡೆದಿದೆ. ಅಪಘಾತದಿಂದ ಅಂಡೆಪುಣಿ ನಿವಾಸಿ ಈಶ್ವರ ಭಟ್‍, ಪುತ್ರಿ ಅಪೂರ್ವ ಹಾಗೂ ಅಪೂರ್ವ ಅವರ ಪುಟಾಣಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ನಡೆಯುವ ಶ್ರಾದ್ಧ ಕಾರ್ಯಕ್ರಮಕ್ಕೆ ಮಗಳು ಮತ್ತು ಮೊಮ್ಮಗಳನ್ನು ಕರೆದುಕೊಂಡು ಬರುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಪುತ್ತೂರಿನಿಂದ ಕೆದಿಲ ಕಡೆಗೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ ಇದರಿಂದ…

Read More

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣದ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ಸಹಾಯ ಹಸ್ತ ವಿತರಣೆ,ಮಹಾಸಭೆ

ಮಂಜೇಶ್ವರ:- ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ.)ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿ ನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆಯು ಮೇ 25 ರಂದು ಜರಗಿತು. ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25 ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಯ ಕರ್ನಾಟಕ ಕೇರಳ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಗೌರವಾರ್ಪಣೆ…

Read More

ಭಾರೀ ಮಳೆಯಿಂದಾಗಿ `ಶಿರಾಡಿಘಾಟ್’ ನ ಹಲವಡೆ ಭೂಕುಸಿತ.!

ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್ ನ ಹಲವಡೆ ಭೂಕುಸಿತ ಉಂಟಾಗಿದೆ.  ರಾಷ್ಟ್ರೀಯ ಹೆದ್ದಾರಿಯ 75 ರ ಚತುಷ್ಪತ ರಸ್ತೆಯ ಹಲವು ಕಡೆ ಭೂಕುಸಿತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.  ರಾಜ್ಯದಲ್ಲಿ ಇನ್ನೂ 6 ದಿನ ಮುಂಗಾರು ಮಳೆಯ ಆರ್ಭಟ ಇಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿರೆಡ್ ಅಲರ್ಟ್ ಘೋಷಿಸಲಾಗಿದ್ದು, ಗಾಳಿ ಸಹಿತ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಉಳಿದಂತೆ ಹಾಸನ, ಕೊಡಗು, ಬೆಳಗಾವಿ, ಬೀದರ್,…

Read More

ಮೂಡಬಿದ್ರೆ: ಪಾಲಡ್ಕ ಎರುಗುಂಡಿ ಫಾಲ್ಸ್ ನಲ್ಲಿ ಸಿಲುಕ್ಕಿದ್ದ ಪ್ರವಾಸಿಗರ ರಕ್ಷಣೆ

ಮೂಡುಬಿದ್ರಿ ಸಮೀಪದ ಪಾಲಡ್ಕ ಎರುಗುಂಡಿ ಫಾಲ್ಸ್’ನಲ್ಲಿ ಮೋಜಿನಾಟಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕ್ಕಿದ್ದ ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮಳೆಗಾಲ ಸಂದರ್ಭದಲ್ಲಿ ಅಪಾಯಕಾರಿಯಾಗಿ ಹರಿಯುವ ಎರಗುಂಡಿ ಫಾಲ್ಸ್ ನಲ್ಲಿ ಈ ಮೊದಲು ಹಲವಾರು ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಬುದ್ದಿ ಕಲಿಯಲಿದ ಜನ ಮತ್ತೆ ಮಳೆ ಸುರಿಯುತ್ತಿದ್ದರೂ ಫಾಲ್ಸ್ ಬಳಿ ಮೋಜಿನಾಟಕ್ಕೆ ತೆರಳಿದ್ದಾರೆ. ನೀರಿನ ಅಪಾಯ ಲೆಕ್ಕಿಸದೆ ಪ್ರವಾಸಿಗರು ನೀರಿನಲ್ಲಿ ಆಟಕ್ಕೆ ಇಳಿದಿದ್ದಾರೆ. ಈ ವೇಳೆ ಮಳೆ ಜೊತೆ ನೀರಿನ ರಭಸವೂ ಹೆಚ್ಚಾಗಿದ್ದು, ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು…

Read More

ಜಪಾನ್ ಹಿಂದಿಕ್ಕಿ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ

ನವದೆಹಲಿ: ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಹೇಳಿದ್ದಾರೆ. ಒಟ್ಟಾರೆ ಭೌಗೋಳಿಕ ಮತ್ತು ಆರ್ಥಿಕ ವಾತಾವರಣವು ಭಾರತಕ್ಕೆ ಅನುಕೂಲಕರವಾಗಿದೆ ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ. “ನಾನು ಹೇಳುತ್ತಿರುವಂತೆ ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆ. ನಾನು ಹೇಳುತ್ತಿರುವಂತೆ ನಾವು 4 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದ್ದೇವೆ” ಎಂದು ಅವರು ಹೇಳಿದರು. ಐಎಂಎಫ್ ಡೇಟಾವನ್ನು ಉಲ್ಲೇಖಿಸಿ, ಸುಬ್ರಹ್ಮಣ್ಯಂ ಭಾರತ ಇಂದು ಜಪಾನ್‌ಗಿಂತ ದೊಡ್ಡದಾಗಿದೆ ಎಂದು ಹೇಳಿದರು. 2024 ರವರೆಗೆ…

Read More

BIG NEWS : ಕುವೈತ್‌ನಲ್ಲಿ 37,000 ಜನರ ಪೌರತ್ವ ರದ್ದು : ಬ್ಯಾಂಕ್ ಖಾತೆಗಳೂ ಸ್ಥಗಿತ  

ಕುವೈತ್‌ನಿಂದ ಆಘಾತಕಾರಿ ಸುದ್ದಿ ಹೊರಬಿದ್ದಿದೆ, ಅಲ್ಲಿ ಒಂದೇ ಬಾರಿಗೆ 37,000 ಜನರ ಪೌರತ್ವ ರದ್ದುಪಡಿಸಲಾಗಿದೆ, ಅವರಲ್ಲಿ ಮುಸ್ಲಿಂ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ಮಹಿಳೆಯರಲ್ಲಿ ಅನೇಕರು ದಶಕಗಳಿಂದ ಕುವೈತ್ ನಾಗರಿಕರಾಗಿದ್ದರು ಮತ್ತು ಕುವೈತ್ ಪುರುಷರನ್ನು ಮದುವೆಯಾದ ನಂತರ ಪೌರತ್ವವನ್ನು ಪಡೆದರು. ಆದರೆ ಈಗ ಸರ್ಕಾರದ ಹೊಸ ನೀತಿಯಡಿಯಲ್ಲಿ ಅವರ ಪೌರತ್ವವನ್ನು ರದ್ದುಗೊಳಿಸಲಾಗಿದೆ. ಪೌರತ್ವ ಕಳೆದುಕೊಂಡ ನಂತರ, ಈ ಮಹಿಳೆಯರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ, ಅವರ ಪಿಂಚಣಿಗಳನ್ನು ನಿಲ್ಲಿಸಲಾಗಿದೆ ಮತ್ತು ಅವರು ಸರ್ಕಾರಿ ಸವಲತ್ತುಗಳನ್ನು ಪಡೆಯುವುದನ್ನು ನಿಲ್ಲಿಸಿದ್ದಾರೆ. ಅನೇಕ…

Read More

ಮಂಗಳೂರು : ವ್ಯಾಪಕ ಮಳೆ – ಮನೆ ಮೇಲೆ ಉರುಳಿ ಬಿದ್ದ ಮರ

ಭಾರೀ ಗಾಳಿ ಮಳೆಗೆ ಮನೆ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾದ ಘಟನೆ ಕುಂಟಿಕಾನದ ಬಾರೆಬೈಲ್ ಎಂಬಲ್ಲಿ ನಡೆದಿದೆ. ಮರ ಬಿದ್ದ ಮನೆಗೆ ಅಳವಡಿಸಲಾಗಿದ್ದ ಶೀಟ್ ಹಾಗೂ ಕಟ್ಟಡಕ್ಕೆ ಹಾನಿ ಉಂಟಾಗಿದೆ. ಬಳಿಕ ಮನೆಯ ಮೇಲೆ ಬಿದ್ದ ಮರವನ್ನು ಸೂಚಿಸಲಾಗಿದೆ.

Read More

ಬಿಜೆಪಿಯ 18 ಶಾಸಕರ ಅಮಾನತು ಆದೇಶ ಅಧಿಕೃತವಾಗಿ ವಾಪಾಸ್: ಯಾರೆಲ್ಲ ಗೊತ್ತಾ? ಇಲ್ಲಿದೆ ಪಟ್ಟಿ

ಬೆಂಗಳೂರು: ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯ ಕಲಾಪದಿಂದ 6 ತಿಂಗಳು ಅಮಾನತು ಮಾಡಿದ್ದಂತ ಆದೇಶವನ್ನು ಸ್ಪೀಕರ್ ಯು.ಟಿ ಖಾದರ್ ಅವರು ಹಿಂಪಡೆದಿದ್ದಾರೆ. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಹಾಗಾದ್ರೇ ಯಾರನ್ನೆಲ್ಲ ಅಮಾನತುಗೊಳಿಸಲಾಗಿತ್ತು.? ಅಧಿಕೃತ ಆದೇಶದಲ್ಲಿ ಏನಿದೆ ಅಂತ ಮುಂದೆ ಓದಿ. ಇಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿಯವರು ಅಧಿಕೃತ ಆದೇಶ ಹೊರಡಿಸಿದ್ದು, ಕಳೆದ ಅಧಿವೇಶನದ ಅವಧಿಯಲ್ಲಿ ದಿನಾಂಕ: 21.03.2025ರಂದು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ…

Read More

ಮಂಗಳೂರು: ಅಕ್ರಮ ಹುಕ್ಕಾ ಬಾರ್ ಗೆ ಸಿಸಿಬಿ ಪೊಲೀಸರ ದಾಳಿ..!

ಮಂಗಳೂರು: ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿರುವ ಮಾಲ್ ವೊಂದರ ಪಾರ್ಕಿಂಗ್ ನಲ್ಲಿರುವ ಕೊಠಡಿಯಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿತ್ತೆನ್ನಲಾದ ಹುಕ್ಕಾ ಬಾರ್ ಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕಂಕನಾಡಿಯ ಮ್ಯಾಕ್ ಮಾಲ್ ನ ಪಾರ್ಕಿಂಗ್ ನಲ್ಲಿರುವ BLACK MOON RESTO CAFÉ ಎಂಬ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಗೆ ದಾಳಿ ನಡೆಸಲಾಗಿದೆ. 2023-24ರಲ್ಲಿ ಕೆಫೆಟೇರಿಯಾ ನಡೆಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆದಿದ್ದ ಆರೋಪಿಗಳು ಕೆಫೆಟೇರಿಯಾ ನೆಪದಲ್ಲಿ ಅಕ್ರಮ ಹುಕ್ಕಾ…

Read More