ದ.ಕ ಜಿಲ್ಲೆಯಲ್ಲಿ ಭಾರಿ ಮಳೆಗೆ 5ನೇ ಬಲಿ : ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ನೌಕರ ಸಾವು!
ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಇಂದು ಒಂದೇ ಕುಟುಂಬದ ಮೂವರು ಹಾಗೂ ಓರ್ವ ಬಾಲಕಿ ಸೇರಿದಂತೆ ನಾಲ್ವರು ಬಲಿಯಾಗಿದ್ದಾರೆ. ಇದೀಗ ಮಹಾ ಮಳೆಗೆ ಐದನೇ ಬಲಿಯಾಗಿದ್ದು ಟಿಸಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಮೆಸ್ಕಾಂ ನೌಕರರೊಬ್ಬ ಸಾವನ್ನಪ್ಪಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿನ್ಮಾಳದಲ್ಲಿ ನಡೆದಿದೆ. ಲೈನ್ ದುರಸ್ತಿಯ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪ್ಪಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿನ್ಮಾಳ ಗ್ರಾಮದ ಕುಲಮುಂಜ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಪ್ರವಹಿಸಿ ವೀರೇಶ್…

