ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ :ದ.ಕ ಜಿಲ್ಲಾಧ್ಯಕ್ಷರಾಗಿ ಲಯನ್ ಅನಿಲ್ ದಾಸ್,ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ನವೀನ ಮಜಲ್ ಆಯ್ಕೆ

ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆ ಗಳ ಒಕ್ಕೂಟ (ರಿ ) ಇದರ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾಗಿ ಶ್ರೀ ಲಯನ್ ಅನಿಲ್ ದಾಸ್ ರವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ನವೀನ ಮಜಲ್ ರವರು ಆವಿರೋದವಾಗಿ ಆಯ್ಕೆಯಾಗಿದ್ದಾರೆ.    

Read More

ಬೆಳ್ತಂಗಡಿ: ಇನ್ಮುಂದೆ ಗಡಾಯಿಕಲ್ಲು ಪ್ರವಾಸಿತಾಣಕ್ಕೆ ನಿಷೇಧ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತ ಉಂಟಾಗಿ ಜೀವಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಜಿಲ್ಲೆಯ ಜಲಪಾತ, ಚಾರಣ ಪ್ರದೇಶಗಳಿಗೆ ನಿಷೇಧಿಸಲಾಗಿದೆ. ಬೆಳ್ತಂಗಡಿಯ ನರಸಿಂಹಗಡ ಕೋಟೆ, ಬೊಳ್ಳೆ, ಬಂಡಾಜೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದವರೆಗೆ ಪ್ರವೇಶ ನಿಷೇಧಿಸಿ ಬೆಳ್ತಂಗಡಿ ವನ್ಯಜೀವಿ ವಿಭಾಗ ಆದೇಶ ನೀಡಿದೆ. ಗಡಾಯಿಕಲ್ಲಿಗೆ ಕೂಡಾ ಪ್ರವೇಶ ನಿರ್ಬಂಧವಾಗಿದೆ. ಪ್ರವಾಸಿಗರು ಮೋಜು ಮಸ್ತಿಯಲ್ಲಿ ಮೈಮರೆತು ಯಾವುದೇ ಅಪಾಯ ಸಂಭವಿಸದಂತೆ ಈ ಕ್ರಮ ಜರುಗಿಸಲಾಗಿದೆ.

Read More

ಬಂಟ್ವಾಳದ ಹಳೆಯ ಪ್ರಕರಣಕ್ಕೆ ಹೊಸ ಎಸ್ಪಿ ಬಂದ ಬೆನ್ನಲ್ಲೇ ಮರು ಜೀವ..!

ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿ 2024ರ ಡಿಸೆಂಬರ್ 29ರಂದು ಧಾರ್ಮಿಕ ಆಚರಣೆ ಮುಗಿಸಿ ಹಿಂತಿರುಗುತ್ತಿದ್ದ ಮುಸ್ಲಿಂ ಧರ್ಮಗುರುವಿನ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಕೊಲೆ ಯತ್ನ ನಡೆಸಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಉಪ್ಪಿನಂಗಡಿಯ ಸಿನಾನ್ ಪೈಝಿ ಎಂಬವರು ದಿನಾಂಕ 29.12.2024 ರಂದು ಮಧ್ಯಾಹ್ನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲಿನಲ್ಲಿ ಧಾರ್ಮಿಕ ಆಚರಣೆ ಮುಗಿಸಿ, ತಮ್ಮ ಬೈಕಿನಲ್ಲಿ ಉಪ್ಪಿನಂಗಡಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ…

Read More

ಮಂಗಳೂರು: ಕಾಂಗ್ರೆಸ್ ಪಕ್ಷದ ಇಬ್ಬರು ಮುಸ್ಲಿಂ ಮುಖಂಡರಿಗೆ ಶಿಸ್ತು ಉಲ್ಲಂಘನೆಯ ನೋಟಿಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೋಮು ದಳ್ಳುರಿ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಇಬ್ಬರು ಮುಸ್ಲಿಂ ಮುಖಂಡರಿಗೆ ಶಿಸ್ತು ಉಲ್ಲಂಘನೆಯ ನೋಟಿಸ್ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಶ್ರಫ್ ಗೆ ನೋಟಿಸ್ ಜಾರಿ ಮಾಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ್ ಶೆಟ್ಟಿಯಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ತಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದಾಗಿ ಎಚ್ಚರಿಸಲಾಗಿದೆ. ಇನ್ನೂ ಶಿಸ್ತು ಉಲ್ಲಂಘನೆಯ ನೋಟಿಸ್…

Read More

ಯಾವುದೇ ಪ್ರಕರಣಗಳ ಆರೋಪಿಗಳಿಗೆ ಆಶ್ರಯ ನೀಡಿದರೆ ಕ್ರಮ: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ

ಮಂಗಳೂರು: ಯಾವುದೇ ಪ್ರಕರಣಗಳ ಆರೋಪಿಗಳಿಗೆ ಯಾರೇ ಆದರೂ ಆಶ್ರಯ ನೀಡಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಅಪರಾಧ ಪ್ರಕರಣ ಮಾಡಿದ ಬಳಿಕ ಆರೋಪಿಗಳಿಗೆ ಆಶ್ರಯ ನೀಡುವುದು, ಆರ್ಥಿಕ ಸಹಾಯ ಮಾಡುವುದು, ಆಹಾರ, ಫೋನ್, ವಾಹನ ಇತ್ಯಾದಿ ರೂಪದಲ್ಲಿ ನೀಡಿದರೆ ಅವರನ್ನೂ ಕೂಡ ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಕೆಲವೊಂದು ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ….

Read More

ಮೊಂಟೆಪದವು ಗುಡ್ಡ ಕುಸಿತ ದುರಂತದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಗಾಯಾಳು ಅಶ್ವಿನಿ

ಮಂಗಳೂರು : ನಿನ್ನೆ ಮಂಜನಾಡಿಯ ಮೊಂಟೆಪದವು ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಸಾವನಪ್ಪಿದ್ದರು. ಒಂದೇ ಕುಟುಂಬದ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಒಂದು ದುರಂತದಲ್ಲಿ ಮೃತಪಟ್ಟ ಬಾಲಕರ ತಾಯಿ ಅಶ್ವಿನಿ ಗಾಯಗೊಂಡಿದ್ದು ಇದೀಗ ಅಶ್ವಿನಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಹೌದು ಮಂಗಳೂರಿನ ಮಂಜನಾಡಿಯ ಮೊಂಟೆಪದವು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಯಾಳು ಅಶ್ವಿನಿ ದುರಂತದಲ್ಲಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಅಶ್ವಿನಿ ಸಂಪೂರ್ಣವಾಗಿ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿ ಅಶ್ವಿನಿಯ…

Read More

ಉಪ್ಪಳ ಗೇಟ್ ಬಳಿ ಅಪಘಾತ: ಕೋಳ್ಯೂರು ನಿವಾಸಿ ಮಹಿಳೆ ಮೃತ್ಯು..!

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪಳ ಗೇಟ್ ಬಳಿ ಇಂದು ಸಂಜೆ ಮೀನಿನ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ವರ್ಕಡಿ ಸಮೀಪದ ಕೋಳ್ಯೂರು ಪದವು ನಿವಾಸಿ ಮಹಿಳೆ ನವ್ಯ ಮೃತಪಟ್ಟಿದ್ದಾರೆ. ಪತಿ ಪದ್ಮನಾಭ (36) ಹಾಗೂ ಮಗು ಗಾಯನ್ (2)ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ನವ್ಯಾ.ಕೆ (24) ಅವರು ತಲಪಾಡಿ ಗ್ಯಾರೇಜಿನ ಶಿವರಾಮ ಆಚಾರ್ಯ ಅವರ ಪುತ್ರಿಯಾಗಿದ್ದು ಇಂದು ಔಷಧಿ ಗೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

Read More

ಕಾರ್ಕಳ: ಹಟ್ಟಿಗೆ ಬೆಂಕಿ ತಗುಲಿ ಕಂಬಳದ ಕೋಣಗಳು ಸಾವು..!

ಕಾರ್ಕಳ: ಹಟ್ಟಿಗೆ ಬೆಂಕಿ ತಗುಲಿ ಕಂಬಳದ ಕೋಣಗಳು ಸಾವನಪ್ಪಿದ ದುರ್ಘಟನೆ ಮೇ 30ರ ರಾತ್ರಿ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಸಂಭವಿಸಿದೆ. 2022-23ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಚಾಂಪಿಯನ್‌ ಪಡೆದ ಬೇಲಾಡಿ ಬಾವ ಅಶೋಕ್‌ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು. ವಿದ್ಯುತ್‌ ಶಾರ್ಟ್‌ ಸರ್ಕೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎನ್ನಲಾಗುತ್ತಿದೆ.

Read More

ಮಂಗಳೂರು: ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗೆ ಲಂಚ ನೀಡಲು ಬಂದ ಅಧಿಕಾರಿ ಅರೆಸ್ಟ್

ಮಂಗಳೂರು : ದಾಳಿ ಮಾಡದಂತೆ ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗೆ ಲಂಚ ನೀಡಲು ಬಂದ ಆರೋಪದ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಕೋಟೆಕಣಿ ಪ್ರಶಾಂತ್ ಆಯಿಲ್ ಇಂಡಸ್ಟ್ರೀಸ್ ಮಾಲೀಕ ಪ್ರವೀಣ್ ನಾಯ್ಕ್ ಮತ್ತು ಗಜೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದಿದ್ದರು. ಬಂದವರು ಇನ್‌ಸ್ಪೆಕ್ಟರ್‌ ಅವರಲ್ಲಿ ಮಾತನಾಡುತ್ತಾ…

Read More

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಮತ್ತೆ ಇಬ್ಬರ ಬಂಧನ..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ  ಮತ್ತು ಕಲಂದರ್ ಶಾಫಿ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಇನ್ನಷ್ಟು ಪ್ರಗತಿ ಕಂಡುಬಂದಿದ್ದು, ಶುಕ್ರವಾರ (ಮೇ 30) ಇನ್ನಿಬ್ಬರನ್ನು ಬಂಧಿಸಲಾಗಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ 5ಕ್ಕೆ ಏರಿದೆ. ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27) ಮತ್ತು ಬಂಟ್ವಾಳ ಬಡಗಬೆಳ್ಳೂರು ಗ್ರಾಮದ ರವಿರಾಜ್ (23) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ….

Read More