ಹಿಂದೂ ಸಂಘಟನೆಗಳು ಟಾರ್ಗೆಟ್? ದ.ಕ. ಎಸ್‌ಪಿಗೆ ಸ್ಪಷ್ಟನೆ ಕೇಳಿದ ಪೊಲೀಸ್ ಪ್ರಾಧಿಕಾರ

ಮಂಗಳೂರು ಜೂನ್ 06: ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಬಳಿಕ ಕಾನೂನು ಸುವವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಲೊಕೇಶನ್ ಮತ್ತು ಮಾಹಿತಿ ಸಂಗ್ರಹದಂತಹ ಕ್ರಮ ಕೈಗೊಂಡಿದ್ದ ದಕ್ಷಿಣಕನ್ನಡ ಪೊಲೀಸ್ ಇಲಾಖೆಗೆ ಇದೀಗ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ದಕ್ಷಿಣಕನ್ನಡ ಜಿಲ್ಲೆಗೆ ನೂತನ ಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಪೊಲೀಸರು ಹಿಂದೂ ಸಂಘಟನೆಗಳ ಮುಖಂಡರ ಮನೆಗೆ ಮಧ್ಯರಾತ್ರಿ ಆಗಮಿಸಿ ಅವರ…

Read More

ಬೆಳ್ತಂಗಡಿಯ ಬೊಳಿಯಾರುವಿನಲ್ಲಿ ಕಾಡಾನೆ ದಾಳಿಗೆ ಆಟೋ ರಿಕ್ಷಾ ನಜ್ಜುಗುಜ್ಜು

ಬೆಳ್ತಂಗಡಿ : ಕಾಡಾನೆ ದಾಳಿಗೆ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ನಡೆದಿದೆ. ಬೊಳಿಯಾರು ನಿವಾಸಿ ದಿನೇಶ್ ಎಂಬವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಯೊಂದು ರಸ್ತೆ ಮಧ್ಯೆ ಎದುರಾಗಿದೆ. ಇದನ್ನು ಗಮನಿಸಿ ಆತಂಕಗೊಂಡ ದಿನೇಶ್, ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ. ಈ ವೇಳೆ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ರಿಕ್ಷಾವನ್ನು ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದೆ. ಸ್ಥಳೀಯರು ಸ್ಥಳಕ್ಕೆ…

Read More

‘ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್’ ಪ್ರಶಸ್ತಿ ತನ್ನದಾಗಿಸಿಕೊಂಡ 8 ವರ್ಷದ ಪ್ರತಿಭೆ

ಮಂಗಳೂರು ನಗರದ ಕುಲಶೇಖರ ನಿವಾಸಿಯಾದ ಕೇವಲ 8 ವರ್ಷದ ರುಶಭ್ ರಾವ್ ಅವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ, ಮೇ 25, 2025 ರಂದು ಗೋವಾದಲ್ಲಿ ಆಯೋಜಿಸಲಾದ “ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025” ಸ್ಪರ್ಧೆಯಲ್ಲಿ ‘ಪ್ರಿನ್ಸ್ ಆಫ್‌ ಜೂನಿಯ‌ರ್ ಮಾಡೆಲ್ ಇಂಟರ್‌ನ್ಯಾಷನಲ್’ ಎಂಬ ಗೌರವಾನ್ವಿತ ಪ್ರಶಸ್ತಿಯನ್ನು ಗೆದ್ದು, ಮಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಲೂರ್ಡ್ಸ್ ಸೆಂಟ್ರಲ್ ಶಾಲೆ, ಬಿಜೈ , ಮಂಗಳೂರು ಇಲ್ಲಿನ ಮೂರನೇ ತರಗತಿಯ ವಿದ್ಯಾರ್ಥಿಯಾದ ರುಶಭ್, ತನ್ನ ಅಪ್ರತಿಮ…

Read More

ಕುಡುಪು ಗುಂಪು ಹತ್ಯೆ ಪ್ರಕರಣ: 3 ಆರೋಪಿಗಳಿಗೆ ಮಂಗಳೂರು ನ್ಯಾಯಾಲಯದಿಂದ ಜಾಮೀನು

ಮಂಗಳೂರು:ನಗರದ ಹೊರವಲಯದ ಕುಡುಪುವಿನಲ್ಲಿ 2025ರ ಎ.27ರಂದು ನಡೆದ ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳಿಗೆ ಗುರುವಾರ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಗುಂಪು ಹತ್ಯೆ ಪ್ರಕರಣದ 14ನೇ ಆರೋಪಿ ಸಂದೀಪ್, 15ನೇ ಆರೋಪಿ ದೀಕ್ಷಿತ್, 19ನೇ ಆರೋಪಿ ಸಚಿನ್ ಗೆ ಜಾಮೀನು ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರಾಹುಲ್ ಮತ್ತು ಕೆ. ಸುಶಾಂತ್ ಗೆ ದಕ್ಷಿಣ ಕನ್ನಡ ಜಿಲ್ಲಾ ಎರಡನೇ ಹೆಚ್ಚುವರಿ ಜಿಲ್ಲಾ…

Read More

ನರಿಕೊಂಬು: 13ನೇ ವಯಸ್ಸಿನಲ್ಲಿ ಮನೆ ಬಿಟ್ಟು 62 ವರ್ಷ ನಂತರ ಮನೆಗೆ ಮರಳಿದ ವ್ಯಕ್ತಿ

ಬಂಟ್ವಾಳ: ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬಯಿಗೆ ತೆರಳಿದ್ದ ನರಿಕೊಂಬಿನ ವ್ಯಕ್ತಿಯೊಬ್ಬರು ಸುಮಾರು 62 ವರ್ಷಗಳ ಬಳಿಕ ಮನೆಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.ನರಿಕೊಂಬು ಗ್ರಾಮದ ಕರ್ಬೆಟ್ಟು ಗೌಂಡ್ಲೆಪಾಲ್‌ ಸಂಜೀವ ಪೂಜಾರಿ (75) ಅವರು 62 ವರ್ಷಗಳ ಹಿಂದೆ ಸ್ಥಳೀಯ ನಿವಾಸಿ ತನಿಯಪ್ಪ ಅವರ ಜತೆಗೆ ಮುಂಬಯಿಗೆ ಕೆಲಸಕ್ಕಾಗಿ ತೆರಳಿದ್ದರು. ಬಳಿಕ ತಾವು ಹೋಗಿದ್ದ ಕೆಲಸವನ್ನು ಬಿಟ್ಟು ಮನೆಯವರ ಸಂಪರ್ಕವನ್ನೂ ಕಳೆದುಕೊಂಡಿದ್ದರು.ಮನೆಯವರು ಅಂದು ಅವರನ್ನು ಹುಡುಕುವ ಪ್ರಯತ್ನ ಮಾಡಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ ಅವರು ನರಿಕೊಂಬಿಗೆ…

Read More

ಗಾನ ಗಂಧರ್ವನಿಗೆ ಮಂಗಳೂರಿನಲ್ಲಿ ಸಂಗೀತ ಶ್ರದ್ಧಾಂಜಲಿ – 270 ಹಾಡುಗಳ ಗಾಯನದ ಮೂಲಕ ಯಶವಂತ್ ಎಂ.ಜಿ. ವಿಶ್ವದಾಖಲೆ

ಮಂಗಳೂರು: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. ಈ ಹಿನ್ನೆಲೆ ಬುಧವಾರ ಮಂಗಳೂರಿನಲ್ಲಿ ಗಾಯಕ ಯಶವಂತ ಎಂ.ಜಿ. ವಿಶೇಷ ಪ್ರಯತ್ನದ ಮೂಲಕ ದಾಖಲೆ ಮಾಡಿದ್ದಾರೆ. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ನಿರಂತರ 24 ಗಂಟೆಗಳ ಕಾಲ ಹಾಡುವ ಮೂಲಕ ಗೋಲ್ಡನ್​ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ಗಾಯಕ ಮಂಗಳೂರಿನ ಯಶವಂತ ಎಂ.ಜಿ. ದಾಖಲೆ ಬರೆದಿದ್ದಾರೆ.ಬಾಲಗಾನ ಯಶೋಯನ ಎಂಬ ಹೆಸರಿನ ಈ ಕಾರ್ಯಕ್ರಮವು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಟೌನ್ ಹಾಲ್‌ನಲ್ಲಿ ಪ್ರಾರಂಭವಾಗಿ ಬುಧವಾರ ಮಧ್ಯಾಹ್ನ 3…

Read More

ಜೋಲಿ ತೊಟ್ಟಿಲಿನಲ್ಲಿ ಸೀರೆ ಸಿಕ್ಕಿ ಹಾಕಿಕೊಂಡು ಮಗು ಸಾವು

ಉಡುಪಿ: ತೊಟ್ಟಿಲಿನ ಸೀರೆಯಲ್ಲಿ ಸಿಕ್ಕಿಹಾಕಿಕೊಂಡು ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಉಡುಪಿಯ ನಿಟ್ಟೂರಿನಲ್ಲಿ ಜೂನ್ 4ರಂದು ನಡೆದಿದೆ. ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಅಯ್ಯಪ್ಪ (27) ಎಂಬುವರು ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದು, ನಿಟ್ಟೂರಿನಲ್ಲಿ ಗಂಗಾಧರ್ ಒಡೆತನದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಜೂನ್ 4 ರಂದು ಬೆಳಿಗ್ಗೆ 9.30 ರ ಸುಮಾರಿಗೆ, ಅಯ್ಯಪ್ಪ ತನ್ನ ಪತ್ನಿ ಮತ್ತು ಒಂದು ವರ್ಷದ ಮಗಳು ಕಾಳಮ್ಮ ಅವರನ್ನು ಬಟ್ಟೆಯ ತೊಟ್ಟಿಲಿನಲ್ಲಿ (ಜೋಲಿ) ಮಲಗಿಸಿ ಕೆಲಸಕ್ಕೆ ಹೋಗಿದ್ದರು.ಅವರು ಬೆಳಿಗ್ಗೆ…

Read More

ನಂದಿನಿ ನದಿ ಮಾಲಿನ್ಯ: ಸ್ಥಳಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ತ್ಯಾಜ್ಯದಿಂದ ಸುರತ್ಕಲ್ ಖಂಡಿಗೆ ಬಳಿ ನಂದಿನಿ ನದಿ ಮಲಿನವಾಗುತ್ತಿರುವ ಬಗ್ಗೆ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿದರು. ನಂದಿನಿ ನದಿ ಸೇತುವೆಯಲ್ಲಿ ನಿಂತು ಪರಿಶೀಲನೆ ನಡೆಸಿದ ಅವರು, ಸ್ಥಳೀಯರ ಅಹವಾಲು ಆಲಿಸಿದರು. ಹಲವು ವರ್ಷಗಳಿಂದ ನದಿಗೆ ಸ್ಥಳೀಯ ವೈದ್ಯಕೀಯ ಕಾಲೇಜಿನಿಂದ ತ್ಯಾಜ್ಯ ಹರಿದು ಬರುತ್ತಿದೆ. ಸುರತ್ಕಲ್ ವೆಟ್ ವೆಲ್ ನಿಂದಲೂ ತ್ಯಾಜ್ಯವನ್ನು ನೇರವಾಗಿ ಬಿಡಲಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ನದಿ…

Read More

ಹಿಂದೂ ಮುಖಂಡ ಭರತ್ ಕುಮ್ಡೇಲು ಮನೆಗೆ ಪೊಲೀಸರ ದಾಳಿ

ಬಂಟ್ವಾಳ : ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಮನೆಗೆ ಪೊಲೀಸರು ನ್ಯಾಯಾಲಯದ ಆದೇಶದ ಜೊತೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಗಡಿಪಾರಿನ ಭೀತಿಯಲ್ಲಿರುವ ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಅವರ ಮನೆಗೆ ಪೊಲೀಸರು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ಮಾಡಿದ್ದಾರೆ. ತನಿಖಾ ತಂಡವು ದಿನಾಂಕ : 04.06.2025 ರಂದು ಮಾನ್ಯ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಬಂಟ್ವಾಳ ಪುದು ಗ್ರಾಮದ ನಿವಾಸಿ ಭರತ್…

Read More

ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಸಮುದಾಯದ ಏಕೈಕ ನೋಂದಾಯಿತ ಸಂಸ್ಥೆಗೆ ನೂತನ ಶಕ್ತಿ

ಮಂಗಳೂರು :ಕರ್ನಾಟಕ ರಾಜ್ಯ ಕುಲಾಲರ /ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ ರಿ. ಮಂಗಳೂರು ಇದರ ರಾಜ್ಯ, ವಿಭಾಗ, ಜಿಲ್ಲೆ ಹಾಗೂ ವಿಧಾನಸಭಾ/ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೊಡುವಂತೆ ರಾಜ್ಯ, ವಿಭಾಗ ಹಾಗೂ ಜಿಲ್ಲಾ ನಾಯಕರುಗಳಿಗೆ ನೋಂದಾಯಿತ ಕೇಂದ್ರಸಮಿತಿಯಿಂದ ಅಧಿಕಾರ ಹಸ್ತಾಂತರ 15 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ನೊಂದಾವಣೆ ಗೊಂಡು, 15 ವರ್ಷಗಳಲ್ಲಿ ಮಾಡಿದ ಸಮಾಜ ಮುಖೀ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ…

Read More