ಬಾಲ್ಯದ ದ್ವೇಷಕ್ಕೆ 50 ವರ್ಷಗಳ ನಂತರ ಸೇಡು: ಕಾಸರಗೋಡಿನಲ್ಲಿ ಇಬ್ಬರು ಬಂಧನ

ಕಾಸರಗೋಡು, ಜೂನ್ 11: ಚಿಕ್ಕವರಿದ್ದಾಗ ಹೊಡೆದಾಡಿಕೊಳ್ಳುವುದು, ಸಣ್ಣ ಪುಟ್ಟ ವಿಚಾರಕ್ಕೂ ಮುನಿಸಿಕೊಂಡು ಮಾತುಬಿಡುವುದು ಇವೆಲ್ಲವೂ ಸಾಮಾನ್ಯ. ಆದರೆ ವ್ಯಕ್ತಿಯೊಬ್ಬರು ತಾವು 4ನೇ ತರಗತಿಯಲ್ಲಿ ಪೆಟ್ಟು ತಿಂದಿದ್ದನ್ನು 50 ವರ್ಷ ಕಳೆದರೂ ಮರೆತಿರಲಿಲ್ಲ. ಶಾಲೆಯ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಸರಿಯಾಗಿ ಸೇಡು ತೀರಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಇದು 50 ವರ್ಷದ ವ್ಯಕ್ತಿಯ ಬಾಲ್ಯದ ದ್ವೇಷದ ಪ್ರಕರಣ ಎಂದು ಹೇಳಿದ್ದಾರೆ .ಬಾಲಕೃಷ್ಣನ್ ಅವರ…

Read More

ಮಂಗಳೂರಿನ ಅನನ್ಯಾ ರಾವ್ ಭಾರತೀಯ ನೌಕಾ ಪಡೆಯ ಸಬ್‌ಲೆಫ್ಟಿನೆಂಟ್

ಮಂಗಳೂರು: ಮಂಗಳೂರಿನ ಲ್ಯಾಂಡ್ ಲಿಂಕ್ಸ್‌ನ ನಿವಾಸಿ ಹಾಗೂ ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್ ರಾವ್ ಮತ್ತು ವೀಣಾ ದಂಪತಿಯ ಪುತ್ರಿ ಅನನ್ಯಾ ರಾವ್ ಅವರು ಭಾರತೀಯ ನೌಕಾ ಪಡೆಯ ಸಬ್‌ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅನನ್ಯಾ ಅವರು ಮೇ 31ರಂದು ಇಂಡಿಯನ್ ನೇವಲ್ ಅಕಾಡೆಮಿ ಎಝಿಮಾಲದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಕಮೀಷನ್ಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಇವರು ತಮ್ಮ ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೆ ಮಂಗಳೂರಿನಲ್ಲಿ ಪೂರೈಸಿದ್ದು, ನಂತರ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಅನನ್ಯಾ…

Read More

ಕಡಬದ ತೋಟದಲ್ಲಿ ಅಕ್ರಮ ಅಂಕ: ನಗದು, ವಾಹನ, ಕೋಳಿಗಳ ವಶಕ್ಕೆ

ಕಡಬ: ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ನೇರಂಕಿ ಗ್ರಾಮದ ನೇರಂಕಿ ಎಂಬಲ್ಲಿನ ತೋಟವೊಂದರಲ್ಲಿ, ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಮಾಹಿತಿ ಮೇರೆಗೆ, ಕಡಬ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಕೃತ್ಯದಲ್ಲಿ ತೊಡಗಿದ್ದ 8 ಮಂದಿ ಪರಾರಿಯಾಗಿದ್ದು, 3 ಜನರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ 6 ಬೈಕ್, 2 ಕಾರು, 4 ಕೋಳಿ, ಕೋಳಿ ಅಂಕಕ್ಕೆ ಬಳಸಲಾಗುವ ಕತ್ತಿ ಹಾಗೂ ನಗದು ಹಣ 3,560 ರೂ ವಶಕ್ಕೆ ಪಡೆದುಕೊಂಡು ಕಡಬ ಪೊಲೀಸ್ ಠಾಣೆಯಲ್ಲಿ…

Read More

ಎಲ್ಲಾ ತುರ್ತು ಸೇವೆಗಳಿಗೆ ಒಂದು ಸಂಖ್ಯೆ: ಮಂಗಳೂರಿನಲ್ಲಿ 112 ಸೇವೆ ಪ್ರಾರಂಭ

ಮಂಗಳೂರು: ‘ಒಂದು ರಾಷ್ಟ್ರ, ಒಂದು ತುರ್ತು ಸಂಖ್ಯೆ – 112’ ಉಪಕ್ರಮದಡಿಯಲ್ಲಿ ಪರಿಚಯಿಸಲಾದ ಏಕೀಕೃತ ತುರ್ತು ಪ್ರತಿಕ್ರಿಯೆ ಸಂಖ್ಯೆ 112 ಅನ್ನು ನಾಗರಿಕರು ಬಳಸುವಂತೆ ಮಂಗಳೂರು ನಗರ ಪೊಲೀಸರು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಈ ಸಂಯೋಜಿತ ವ್ಯವಸ್ಥೆಯು ತುರ್ತು ಸಂದರ್ಭಗಳಲ್ಲಿ ತ್ವರಿತ ಮತ್ತು ಸಂಘಟಿತ ಪ್ರತಿಕ್ರಿಯೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹಿಂದೆ, ಸಾರ್ವಜನಿಕರು ಪೊಲೀಸ್, ಅಗ್ನಿಶಾಮಕ ಅಥವಾ ವಿಪತ್ತು ಪ್ರತಿಕ್ರಿಯೆಗಾಗಿ ಪ್ರತ್ಯೇಕ ಸಹಾಯವಾಣಿಗಳನ್ನು ಸಂಪರ್ಕಿಸಬೇಕಾಗಿತ್ತು. ಹೊಸ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS)…

Read More

ತ್ಯಾಜ್ಯದಿಂದ ಹೆದ್ದಾರಿ: ಮಂಗಳೂರಲ್ಲಿ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ ಯಶಸ್ವಿ

ಮಂಗಳೂರು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 170 ಟನ್ ಪ್ಲಾಸ್ಟಿಕ್ ಕಸವನ್ನು ಸದ್ಬಳಕೆ ಮಾಡಿಕೊಂಡು, ಕರಾವಳಿಯಲ್ಲಿ 50 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಿಲ್ಲೆಯ ತಲಪಾಡಿಯಿಂದ ನಂತೂರುವರೆಗೆ ಹಾಗೂ ಸುರತ್ಕಲ್‌ನಿಂದ ಸಾಸ್ತಾನದವರೆಗೆ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ (ಎಲ್‌ಡಿಪಿಇ) ಬಳಸಿ ನಿರ್ಮಿಸಿರುವ ಸರ್ವಿಸ್ ರಸ್ತೆ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಂಡಿದೆ. ಏನಿದು ಪ್ಲಾಸ್ಟಿಕ್ ರಸ್ತೆ?: ಅಧಿಕ ಮಳೆಯಾಗುವ ಪ್ರದೇಶದಲ್ಲಿ ಡಾಂಬರ್ ರಸ್ತೆಗಳಲ್ಲಿ ಬಹುಬೇಗ ಹೊಂಡಗಳು ನಿರ್ಮಾಣವಾಗುತ್ತವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು…

Read More

ಕುಟುಂಬಕ್ಕೆ ಕಂಟಕವಾಗಿದ್ದ ಅಣ್ಣ; ಪೆಟ್ರೋಲ್ ಸುರಿದು ಕೊಂದ ತಮ್ಮ: ತಪ್ಪೊಪ್ಪಿಕೊಂಡ ಆರೋಪಿ!

ಕಡಬ ಜೂನ್ 10: ಸ್ವಂತ ಅಣ್ಣನಿಗೆ ಪೆಟ್ರೋಲ್ ಸುರಿದು ತಮ್ಮನೇ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ , ಗಂಭೀರವಾಗಿ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಣ್ಣ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಇದೀಗ ತಮ್ಮನ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಈತನ ಸಹೋದರ ನಿಂಗಪ್ಪ (21) ಕೃತ್ಯ ಎಸಗಿದ ಆರೋಪಿ. ಮೊದಲು ಕಡಬ ಪೊಲೀಸರ ವಶದಲ್ಲಿದ್ದ ಈತನನ್ನು ಜೂನ್ 8 ರಾತ್ರಿ ಮಂಗಳೂರು ವಿಭಾಗದ ರೈಲ್ವೇ…

Read More

ದ್ವಾರಕಾದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಹತ್ತಿ, ಮೂವರ ದಾರುಣ ಸಾವು

ನವದೆಹಲಿ: ದೆಹಲಿಯ ದ್ವಾರಕಾ ಸೆಕ್ಟರ್ 13ರ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಅಪಾಯದಿಂದ ಪಾರಾಗಲು ಬಾಲ್ಕನಿಯಿಂದ ಹಾರಿದ ಇಬ್ಬರು ಮಕ್ಕಳು ಹಾಗೂ ತಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಹಾಗೂ ತಂದೆ ಯಾದವ್ (35) ಮೃತ ದುರ್ದೈವಿಗಳು. ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಅಪಾಯದಿಂದ ಪಾರಾಗುವ ಸಲುವಾಗಿ ತಂದೆ ಯಾದವ್ ತನ್ನ ಇಬ್ಬರು ಮಕ್ಕಳೊಂದಿಗೆ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಕ್ಕಳಿಬ್ಬರು…

Read More

ಕಂಟೈನರ್ ಹಡಗಿನಲ್ಲಿ ಅಗ್ನಿ ಅವಘಡ: ಭಾರತೀಯ ನೌಕಾಪಡೆಯಿಂದ ಜೀವ ರಕ್ಷಣೆ ಕಾರ್ಯ

ಮಂಗಳೂರು: ಕೇರಳದ ಕೋಯಿಕ್ಕೋಡ್ ಬೇಪೂರ್ ಸಮೀಪ ಸಿಂಗಾಪುರದ ಕಂಟೈನರ್ ಹಡಗು ಎಂ.ವಿ ವಾನ್ ಹಾಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಇನ್ನುಳಿದ 18 ಮಂದಿಯನ್ನು ರಕ್ಷಿಸಿಸಲಾಗಿದ್ದು, ಅವರನ್ನು ಹೊತ್ತ ಭಾರತೀಯ ನೌಕಾಪಡೆಯ ಐಎನ್‌ಎಸ್ ಸೂರತ್ ಹಡಗು ಸೋಮವಾರ ರಾತ್ರಿ 10:45 ಕ್ಕೆ ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಆಗಮಿಸಿದೆ. ಎಂ.ವಿ. ವಾನ್ ಹಾಯ್ 503 ಹಡಗು ಕೊಲೊಂಬೋದಿಂದ ಮುಂಬೈಯ ನ್ಹಾವಾ ಶೇವಾ ಕಂಟೈನರ್ ಟರ್ಮಿನಲ್‌ಗೆ ಪ್ರಯಾಣಿಸುತ್ತಿತ್ತು. ಆದರೆ ಜೂನ್ 9 ರಂದು ಕೇರಳದ ಬೇಪೂರ್ ಕರಾವಳಿಯಿಂದ…

Read More

ಸುಬ್ರಹ್ಮಣ್ಯದಲ್ಲಿ ಕೊಠಡಿ ವಿಚಾರಕ್ಕೆ ಯುವಕನಿಗೆ ಹಲ್ಲೆ

ಸುಬ್ರಹ್ಮಣ್ಯ: ಕೊಠಡಿ ಬಾಡಿಗೆಗೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಆದಿ ಸುಬ್ರಹ್ಮಣ್ಯ ಪ್ರದೇಶದಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಲಾಗಿದ್ದು, ಕೃತ್ಯದ ವೀಡಿಯೋ ವೈರಲ್‌ ಆಗಿದೆ. ಯುವಕನೋರ್ವ ಕೊಠಡಿಯನ್ನು ವೀಕ್ಷಿಸಿದ ಬಳಿಕ ಅದನ್ನು ಪಡೆಯದೇ ತೆರಳಿದ ಕಾರಣಕ್ಕೆ ಕೊಠಡಿಯನ್ನು ನಿರ್ವಹಿಸುವ ತಂಡ ವಾಗ್ವಾದಕ್ಕಿಳಿಯಿತು. ಬಳಿಕ ಯುವಕನ ಮೇಲೆ ತಂಡದ ಓರ್ವ ಸದಸ್ಯ ಹಲ್ಲೆ ನಡೆಸಿದನು. ಸುಬ್ರಹ್ಮಣ್ಯದಲ್ಲಿ ಕೆಲವೆಡೆ ಹೊರಗಿನವರು ರೂಂಗಳನ್ನು ಲೀಸ್‌ಗೆ ಪಡೆದುಕೊಂಡು ಯಾತ್ರಿಕರಿಗೆ ಪೂರೈಸುವ ಕೆಲಸ ಮಾಡುತ್ತಿದ್ದು ಅವರು ಈ ಕೃತ್ಯ ಎಸಗಿರಬೇಕು ಎಂದು ಸ್ಥಳೀಯರು ಶಂಕಿಸಿದ್ದಾರೆ….

Read More

ಇನ್ನಾ ಸರ್ಕಾರಿ ಶಾಲೆ ಹಳೆ ವಿದ್ಯಾರ್ಥಿ ಸಂಘಕ್ಕೆ ಕುಶ ಆರ್. ಮೂಲ್ಯ ಅಧ್ಯಕ್ಷರಾಗಿ ಆಯ್ಕೆ

ಕಾರ್ಕಳ : ಇನ್ನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಕುಶ ಆರ್. ಮೂಲ್ಯ ಇನ್ನಾ ಆಯ್ಕೆಯಾಗಿದ್ದಾರೆ. ಜೂ. 8ರಂದು ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಹರೀಶ್ ಶೆಟ್ಟಿ ದಡ್ಡು, ಕಾರ್ಯದರ್ಶಿಯಾಗಿ ಸಂದೀಪ್ ಶೆಟ್ಟಿ ಪಡು, ಕೋಶಾಧಿಕಾರಿಯಾಗಿ ರಾಕೇಶ್, ಸದಸ್ಯರಾಗಿ ಭವಾನಿ, ಕಿರಣ್, ಸುರೇಶ ಮೂಲ್ಯ, ದೀಪಕ್ ಕೋಟ್ಯಾನ್, ಸಂತೋಷ್, ಚಂದ್ರಹಾಸ ಶೆಟ್ಟಿಗಾ‌ರ್, ಪ್ರಸಾದ್‌ ಕುಂದರ್, ಸುರೇಶ ಮೂಲ್ಯ, ರಾಜೀವಿ, ಹರಿಣಾಕ್ಷಿ, ಸುಶೀಲ…

Read More