ಕಾರ್ಕಳ: ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರತಿಮಾಗೆ ಜಾಮೀನು ಮಂಜೂರು

ಕಾರ್ಕಳ: ಅ.20 ರಂದು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆಯಲ್ಲಿ ನಡೆದ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅವರ ಪತ್ನಿ ಪ್ರತಿಮಾಗೆ ಜಾಮೀನು ಮಂಜೂರಾಗಿದೆ. ಬಾಲಕೃಷ್ಣ ಪೂಜಾರಿ ಪತ್ನಿ  ಪ್ರತಿಮಾ (36)ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಇನ್ನೋರ್ವ ಆರೋಪಿ ಪ್ರಿಯಕರ ದಿಲೀಪ್‌ ಹೆಗ್ಡೆ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ತನ್ನ ಪತಿ ದಿಲೀಪ್‌ನನ್ನು ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್‌ ಸೇರಿ ಕೊಲೆ ಮಾಡಿರುವ ಆರೋಪದಲ್ಲಿ ಅ.25 ರಂದು ಅಜೆಕಾರು ಠಾಣೆ ಪೊಲೀಸರು ಇಬ್ಬರನ್ನೂ…

Read More

ಮಂಗಳೂರು: ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಹತ್ತು ತಿಂಗಳ ಮಗು ದುರ್ಮರಣ

ಮಂಗಳೂರು: ಮನೆಯಲ್ಲಿ ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ 10 ತಿಂಗಳ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಅಡ್ಯಾರ್‌ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತ ಮಗು. ಶನಿವಾರ ಮಧ್ಯಾಹ್ನ 1.30ರ ವೇಳೆಗೆ ಘಟನೆ ಸಂಭವಿಸಿದೆ. ಅಸ್ವಸ್ಥಗೊಂಡಿದ್ದ ಮಗುವನ್ನು ಅಪರಾಹ್ನ 3.30ರ ವೇಳೆಗೆ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 10.25ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ. ಪತಿಯ ನಿರ್ಲಕ್ಷ್ಯವೇ ಕಾರಣ…

Read More

ಬಂಟ್ವಾಳ: ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕ..! ಹಳ್ಳದಲ್ಲಿ ಮೃತದೇಹ ಪತ್ತೆ

ಬಂಟ್ವಾಳ; ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ  ಪತ್ತೆಯಾಗಿದೆ. ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ( 28 ) ಮೃತ ಯುವಕ. ಬಂಟ್ವಾಳದ ಬೆಂಜನಪದವು ನಿವಾಸಿ ಸಾಗರ್ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಸಾಗರ್‌ ಗಾಗಿ ಮನೆಮಂದಿ ಹಾಗೂ ಸ್ನೇಹಿತರು ಹುಡುಕಾಟ ನಡೆಸಿದ್ದರು. ಟವರ್ ಲೋಕೇಶನ್ ಪ ತ್ತೆಮಾಡಲು ಪ್ರಕರಣ ದಾಖಲಿಸಿದ್ದರು. ಆದರೆ ಇಂದು ಪಕ್ಕದ ಹಳ್ಳದಲ್ಲಿ ಸಾಗರ್ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Read More

ಉಡುಪಿ: ವಿದ್ಯೋದಯ ಪಬ್ಲಿಕ್ ಶಾಲೆಗೆ ಬೆದರಿಕೆ

ಉಡುಪಿ: ನಗರದ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಸೋಮವಾರ ಇ-ಮೇಲ್ ಮೂಲಕ ಬಾಂಬ್ ಸ್ಪೋಟದ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಪೊಲೀಸರು ಬಿಗು ತಪಾಸಣೆ ನಡೆಸಿದ್ದಾರೆ. ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು, ಶಾಲಾ ಆವರಣದಲ್ಲಿ ತೀವ್ರ ತಪಾಸಣೆ ನಡೆಸಿದರು. ಸದ್ಯ ಯಾವುದೇ ಬಾಂಬ್ ಅಥವಾ ಅಪಾಯಕಾರಿ ಅಂಶ ಪತ್ತೆಯಾಗಿಲ್ಲ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ಶಾಲೆಯಲ್ಲಿ ಬಾಂಬ್ ಇಟ್ಟಿರೋ ಬಗ್ಗೆ ಇ-ಮೇಲ್ ಸ್ವೀಕೃತವಾಗಿರುತ್ತದೆ….

Read More

ಬೆಳ್ತಂಗಡಿ: ಬೈಕ್ ಸಮೇತ ನದಿ ನೀರಿನಲ್ಲಿ ಕೊಚ್ಚಿ ಹೋದ ಸವಾರರು..!

ಬೆಳ್ತಂಗಡಿ: ಯುವಕರಿಬ್ಬರು ಬೈಕ್ ಸಮೇತ ನದಿ ನೀರಿನಲ್ಲಿ ಕೊಚ್ಚಿ ಹೋಗಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದ ಘಟನೆ ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ರವಿವಾರ ನಡೆದಿದೆ. ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಅಪಾಯದಿಂದ ಪಾರಾದ ಯುವಕರು. ಇವರು ಕೆಲಸಕ್ಕೆ ಹೋಗುವಾಗ ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು…

Read More

ಪುತ್ತೂರು: 7 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು

ಪುತ್ತೂರು: ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಪುತ್ತೂರು ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ. ಚಿಕ್ಕಪುತ್ತೂರಿನ ನಿವಾಸಿ, ಚಿಂತನ್ ಎಂಬವರ ಪತ್ನಿ ರೇಷ್ಮಾ (28) ಆತ್ಮಹತ್ಯೆ ಮಾಡಿಕೊಂಡವರು. ರೇಷ್ಮಾ ಏಳು ತಿಂಗಳ ಗರ್ಭಿಣಿಯಾಗಿದ್ದರು. ಸುರತ್ಕಲ್ ಮೂಲದ ರೇಷ್ಮಾರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು…

Read More

ಸುರತ್ಕಲ್‌: ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು- ಅಪಾಯದಿಂದ ಪಾರು..!

ಸುರತ್ಕಲ್‌: ಭಾರೀ ಮಳೆಯಾಗುತ್ತಿದ್ದ ಪರಿಣಾಮ ಸುರತ್ಕಲ್‌ ಎನ್‌ಐಟಿಕೆ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಉರುಳಿ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಕುಂದಾಪುರ ನಿವಾಸಿ ಪ್ರತ್ಯಕ್ಷ ಎಂಬವರು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಿಂದ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ಅವರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕುಂದಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಏಕಾಏಕಿ ಬ್ರೇಕ್…

Read More

ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಸ್ ಢಿಕ್ಕಿ.! ಓರ್ವ ಮೃತ್ಯು, ಹಲವರಿಗೆ ಗಂಭೀರ ಗಾಯ

ನೆಲ್ಯಾಡಿ: ನಿಲ್ಲಿಸಿದ್ದ ಹಿಟಾಚಿಗೆ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ರವಿವಾರ ತಡ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಕಾರ್ಕಳ ಹೆರ್ಮುಂಡೆ ನಿವಾಸಿ ಶಂಕರ ನಾರಾಯಣ ಭಟ್ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಲಾವತ್ತಡ್ಕ ಎಂಬಲ್ಲಿ ಹೆದ್ದಾರಿ ಬದಿ ಲಾರಿಯಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದು,…

Read More

ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ದುರಂತ: ಮನೆ ಸೋರಿಕೆ ಪರಿಶೀಲನೆ ವೇಳೆ ಅಪಘಾತ

ಉಡುಪಿ, ಜೂ. 14 : ಮನೆ ಸೋರಿಕೆಯನ್ನು ಪರಿಶೀಲಿಸಲು ಬಳಸುತ್ತಿದ್ದ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕೋರ್ಟ್ ಬ್ಯಾಕ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಯೂಡಿ) ಕಚೇರಿ ಬಳಿ ಜೂನ್ 14 ರಂದು ನಡೆದಿದೆ. ಮನೆಯ ಮೇಲ್ಛಾವಣಿಯ ಸ್ಲ್ಯಾಬ್‌ನಲ್ಲಿನ ಸೋರಿಕೆಯನ್ನು ಪರಿಶೀಲಿಸಲು ಕ್ರೇನ್ ಅನ್ನು ಬಳಸಿಕೊಂಡು ಇಬ್ಬರು ವ್ಯಕ್ತಿಗಳನ್ನು ಅದರ ಬಾಸ್ಕೆಟ್‌ನಲ್ಲಿ ಮೇಲೆತ್ತಲಾಗುತ್ತಿತ್ತು. ಆದರೆ ಈ ವೇಳೆ ಬಾಸ್ಕೆಟ್ ಓರೆಯಾದ ಕಾರಣ, ಅದರಲ್ಲಿದ್ದ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಸ್ಥಳಕ್ಕೆ ಧಾವಿಸಿದ…

Read More

“ನೀನು ಸುಂದರಿಯಲ್ಲ” ಎಂದಿದ್ದಕ್ಕೆ ಗಂಡನಿಗೆ ಪತ್ನಿ ಪೆಟ್ರೋಲ್ ಸುರಿದು ಬೆಂಕಿ: ತಿರುಪತಿಯಲ್ಲಿ ಬಂಧನ

ತಮಿಳುನಾಡು, ಜೂನ್ 14: ತಾನು ಸುಂದರವಾಗಿಲ್ಲ ಎಂದು ಹೇಳಿ ಕಿರುಕುಳ ನೀಡಿದ್ದರಿಂದ ಪತಿಯನ್ನು ಮಹಿಳೆ ಕೊಂದಿದ್ದಾಳೆ. ಕೃಷ್ಣಗಿರಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿ ಜಿಲ್ಲೆಯ ರಂಗಸಾಮಿ (47), ಕವಿತಾ (44) ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಒಬ್ಬ ಹೆಣ್ಣು ಮಗಳು ವಿವಾಹವಾಗಿದ್ದರೆ, ಇನ್ನೊಬ್ಬ ಮಗಳು ಮತ್ತು ಮಗ ಕಾಲೇಜಿನಲ್ಲಿ ಓದುತ್ತಿದ್ದಾರೆ. ಜೂನ್ 9, 2025 ರ ರಾತ್ರಿ, ರಂಗಸಾಮಿಯನ್ನು ಅವರ ಪತ್ನಿ ಕವಿತಾ ಅವರ ಪತಿ ಮೇಲೆ ಪೆಟ್ರೋಲ್…

Read More