
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಓಂ ಶ್ರೀ ಗೆಳೆಯರ ಬಳಗವು ಸಮಾಜ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅರ್ಹವಾಗಿ 2025ನೇ ಸಾಲಿನ ಪ್ರತಿಷ್ಠಿತ ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್ ನೆಲ್ಲಿಗುಡ್ಡೆ, ನಿಕಟ ಪೂರ್ವಾಧ್ಯಕ್ಷ ಕಿರಣ್ ಅಟ್ಲೂರು ಗೌರವಾಧ್ಯಕ್ಷ ನಾಗೇಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಕರುಣಾಕರ ಕುಲಾಲ್, ಉದ್ಯಮಿ ಉಮೇಶ್ ನೆಲ್ಲಿಗುಡ್ಡೆ ಸಹಿತ ಮಾಜಿ ಅಧ್ಯಕ್ಷರು,ಹಾಗೂ ಇತರ ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.



ಓಂ ಶ್ರೀ ಗೆಳೆಯರ ಬಳಗವು ಕಳೆದ 20 ವರುಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಅನುಮಪ ಸೇವೆ ಸಲ್ಲಿಸುತ್ತಿದೆ,ಕಳೆದ ಬಾರಿ ಕಿರಣ್ ಅಟ್ಲೂರು ಇವರ ಅದ್ಯಕ್ಷತೆಯಲ್ಲಿ ಸತತವಾಗಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಮಾದರಿ ಸೇವೆ ನೀಡಿದೆ, ಈ ಎಲ್ಲ ಸೇವಾ ಚಟುವಟಿಕೆಗಳನ್ನು ಗುರುತಿಸಿ ದ.ಕ.ಜಿಲ್ಲಾಡಳಿತವು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ

