ಒಇಸಿ ಕುಲಾಲ ಪ್ರಮಾಣಪತ್ರ ವ್ಯವಸ್ಥೆ ಮರುಸ್ಥಾಪನೆಗೆ ಸಂಘಟಿತ ಹೋರಾಟ

0 0
Read Time:4 Minute, 13 Second

ಮಂಜೇಶ್ವರ‌ : ಕಾಸರಗೋಡು ಭಾಗದ ಕುಲಾಲ ಸಮುದಾಯದ ಜನರು ಒಇಸಿ ಕುಲಾಲ (Other eligible comunity) ಪ್ರಮಾಣಪತ್ರ ಪಡೆಯಲು ಸಂಘಟಿತ ಹೋರಾಟ ನಡೆಸುವಂತೆ ಕೇರಳ ಮಣ್ ಪಾತ್ರ ನಿರ್ಮಾಣ ಸಮಯದಾಯ ಸಭಾ (ಕೆ.ಎಂ.ಎಸ್.ಎಸ್.) ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪಾಲಂಗಾಟ್ ಹೇಳಿದರು.


ಕುಲಾಲ ವೇದಿಕೆ ಮಂಜೇಶ್ವರ‌ ಆಶ್ರಯದಲ್ಲಿ‌ ಮಜಿಬೈಲು ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ಜರುಗಿದ ಕೆಎಂಎಸ್ಎಸ್ ಮಂಜೇಶ್ವರ‌ ವಲಯ ಸಮಿತಿ ರೂಪೀಕರಣ ಸಭೆ ಹಾಗೂ ತ್ರಿಸ್ತರ ಪಂಚಾಯತ್ ಚುನಾವಣೆ ವಿಜೇತ ಸಮುದಾಯದ ಜನಪ್ರತಿನಿಧಿಗಳ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.


ಕೇರಳದಲ್ಲಿ ಮಣ್ಣಿನ ಪಾತ್ರೆ ತಯಾರಿಸುವ ಸಮುದಾಯದ ಜನರು ಕುಲಾಲನ್, ಕುಶವನ್, ವಾಡನ್, ಕಾಸರಗೋಡು ಭಾಗದಲ್ಲಿ ಕುಲಾಲ ಮುಂತಾದ ಹೆಸರುಗಳಲ್ಲಿ ಕರೆಯಲ್ಪಡುತ್ತಾರೆ. ಕಾಸರಗೋಡು ಭಾಗದ ಸಮುದಾಯದ ಜನರಿಗೆ ಕಳೆದ ವರ್ಷದ ತನಕ ಒಇಸಿ ಕುಲಾಲ ಎಂದು ಪ್ರಮಾಣಪತ್ರ ದೊರೆಯುತ್ತಿತ್ತು. ಈ ವರ್ಷ ಕಂದಾಯ ಪೋರ್ಟಲ್ ನಿಂದ ಕುಲಾಲ ಎನ್ನುವ ಪದವನ್ನು ತೆಗೆದಿರುವ ಕಾರಣ ಈ ಭಾಗದ ಜನರಿಗೆ ಕುಲಾಲ ಒಇಸಿ ಪ್ರಮಾಣಪತ್ರ ಪಡೆಯುವುದು ಕಷ್ಟವಾಗಿದೆ. ಆದ್ದರಿಂದ ಕುಲಾಲ ಸಮುದಾಯವನ್ನು ಕೇರಳ ಸರಕಾರದ ಒಇಸಿ ವಿಭಾಗದಲ್ಲಿ ಮರು ಸೇರ್ಪಡೆಗೊಳಿಸುವ ಮೂಲಕ ಸಮುದಾಯಕ್ಕೆ ಲಭ್ಯವಾಗುತ್ತಿದ್ದ ವಿದ್ಯಾರ್ಥಿ ವೇತನ ಸಹಿತ ವಿವಿಧ ಸೌಲಭ್ಯಗಳನ್ನು ಮರುಸ್ಥಾಪಿಸಬೇಕು ಎನ್ನುವುದು ಸಮುದಾಯದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.


10 ವರ್ಷ ಹಿಂದಿನ ತನಕ ಕೇರಳ ರಾಜ್ಯದಲ್ಲಿ ಸಮುದಾಯದ 30 ಮಂದಿ ವೈದ್ಯರು ಇರಲಿಲ್ಲ. ಆದರೆ ಕಳೆದ 10 ವರ್ಷಗಳಲ್ಲಿ ಸಮುದಾಯದ 300 ಕ್ಕೂ ಅಧಿಕ ಯುವಜನರು ಎಂಬಿಬಿಎಸ್ ಪದವಿ ಪಡೆದಿದ್ದಾರೆ ಅಥವಾ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಪ್ರಮಾಣದಲ್ಲಿ ಇರುವ ಸಮುದಾಯದ ಜನರು ಮೀಸಲಾತಿ ಸೌಲಭ್ಯ ಪಡೆಯಲು ಇರುವ ಅಡ್ಡಿ ನಿವಾರಿಸುವುದು ಅಗತ್ಯ ಎಂದು ಅವರು ಅಭಿಪ್ರಾಯ ಪಟ್ಟರು.


ಕಾಸರಗೋಡು ಭಾಗದ ಎಲ್ಲ ವಿಭಾಗದ ಜನರು ಕರ್ನಾಟಕದ ಜೊತೆ ಮುಂದೆ ಸಾಗಲು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ ನಾವು ಕೇರಳದ ಎಲ್ಲ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದೇವೆ. ವೈದ್ಯಕೀಯ, ಇಂಜಿನಿಯರಿಂಗ್ ಸಹಿತ ಪ್ರಮುಖ ವೃತ್ತಿಪರ ಕೋರ್ಸ್ ಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಂದೆ ಸಾಗಲು ಒಇಸಿ ಪ್ರಮಾಣಪತ್ರ ಪಡೆಯುವುದು ಆವಶ್ಯಕ. ಈ ನಿಟ್ಟಿನಲ್ಲಿ ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯ ಸಭಾ (ಕೆ.ಎಂ.ಎಸ್.ಎಸ್) ಹೋರಾಟ ನಡೆಸುತ್ತಿದೆ. ಸಮುದಾಯದ ಜನರು, ವಿವಿಧ ಸಂಘಟನೆ ಗಳು ಜೊತೆಯಾಗಿ ಸಾಗುವುದು ಮುಖ್ಯ ಎಂದು ಹೇಳಿದರು.


ಕುಲಾಲ ವೇದಿಕೆ ಮಂಜೇಶ್ವರ‌ ಅಧ್ಯಕ್ಷ ರಾಮಚಂದ್ರ ಮಾಸ್ತರ್ ಅಧ್ಯಕ್ಷತೆ ವಹಿಸಿದರು.
ಬಾಯಾರು ಗ್ರಾಮಾಧಿಕಾರಿ ಶಂಕರ ಕುಂಜತ್ತೂರು ಮತ್ತು ಕೆ.ಎಂ.ಎಸ್.ಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ವಿಜಯನ್ ಪೆರಿಯ ಮುಖ್ಯ ಅತಿಥಿಗಳಾಗಿದ್ದರು.


ಕುಲಾಲ ವೇದಿಕೆ ಮಂಜೇಶ್ವರ ಗೌರವ ಸಲಹೆಗಾರ ದಿನೇಶ್ ಕೊಡಂಗೆ ಪ್ರಸ್ತಾವನೆಗೈದರು.
ಇತ್ತೀಚೆಗೆ ಜರುಗಿದ ಚುನಾವಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಚುನಾಯಿತ ಸಮುದಾಯ ಬಾಂಧವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿ ಅನ್ವಿತಾ ಅವರನ್ನು ಗೌರವಿಸಲಾಯಿತು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿತೇಶ್ ಉಪಸ್ಥಿತರಿದ್ದರು. ಈಶ್ವರ ಮಾಸ್ಟರ್ ಸ್ವಾಗತಿಸಿದರು. ಗೌರವ ಸಲಹೆಗಾರ ರಾಮದಾಸ್ ಕಡಂಬಾರ್ ವಂದಿಸಿದರು. ಲಲಿತಾ ಪ್ರಾರ್ಥನಾ ಗೀತೆ ಹಾಡಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *