
ಬೆಂಗಳೂರು : “ರಾಜ್ಯದ ಜನತೆಗೆ ಎಲ್ಲಾ ಉಚಿತವಾಗಿ ಕೊಟ್ಟರೆ ಸರ್ಕಾರ ನಡೆಸುವುದೇ ಕಷ್ಟ. ಇನ್ನು ಮುಂದೆ ಯಾವುದನ್ನೂ ಉಚಿತವಾಗಿ ನೀಡಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ಭವನದಲ್ಲಿ ನಡೆದ ಬಿಬಿಎಂಪಿ, ಬಿಡಿಎ, BWSSB ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದ್ದಾರೆ.


ಮುಂದುವರೆಯುತ್ತಾ ಮಾತನಾಡಿದ ಡಿ.ಕೆ.ಶಿ. “ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಾರೆ, ವಿದ್ಯುತ್ ಫ್ರೀ, ನೀರು ಫ್ರೀ ಅಂದ್ರೆ ಹೇಗೆ ಒಂದು ಪೈಸೆ ಆದ್ರೂ ಬಿಲ್ ಕಟ್ಟಬೇಕಲ್ವ? ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ? ಎಲ್ಲನೂ ಫ್ರೀ ಕೊಟ್ಟರೆ ಸರ್ಕಾರ ನಡೆಸೋದು ಹೇಗೆ? ಇನ್ಮೇಲೆ ಫ್ರೀ ಕೊಡೋಕಾಗೋಲ್ಲ” ಎಂದರು. “2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಇದರಿಂದ ತಿಂಗಳಿಗೆ 85 ಕೋಟಿಯಂತೆ ವರ್ಷಕ್ಕೆ 1 ಸಾವಿರ ಕೋಟಿ ಸಂಸ್ಥೆ ನಷ್ಟ ಎದುರಿಸುತ್ತಿದೆ. ಹೀಗಾಗಿ ನೀರಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶೀಘ್ರವೇ ನೀರಿನ ದರ ಏರಿಕೆ ಮಾಡುತ್ತೇನೆ, ಜಲಮಂಡಳಿ ಉಳಿಬೇಕು ಅಂದ್ರೆ ದರ ಏರಿಕೆ ಅನಿವಾರ್ಯ” ಎಂದು ಹೇಳಿಕೆ ನೀಡಿದ್ದಾರೆ.