ಬ್ಯಾಂಕ್ ಖಾತೆಗೆ ನಾಮಿನಿ ಮಾಡುವ ವಿಚಾರದಲ್ಲಿ ಆಗಿರುವ ಈ ನಿಯಮ ಬದಲಾವಣೆ ನಿಮಗೆ ತಿಳಿದಿರಲಿ

0 0
Read Time:1 Minute, 40 Second

ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ತರಲು ಪ್ರಯತ್ನಿಸುತ್ತಿದೆ. ಇದು ಜಾರಿಗೆ ಬಂದರೆ ನಾಮಿನಿಗಳ ಸಂಖ್ಯೆ ಹೆಚ್ಚಳ ಮಾಡುವ ಮಹತ್ವದ ಬದಲಾವಣೆಯಾಗಲಿದೆ. ಈಗ ಒಬ್ಬರ ಬ್ಯಾಂಕ್ ಖಾತೆಗೆ ಒಬ್ಬರನ್ನು ಮಾತ್ರ ನಾಮಿನಿಯಾಗಿ ಮಾಡಬಹುದಾಗಿದೆ.

ಆದರೆ ಈ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ಒಂದು ಖಾತೆಗೆ ಒಂದಕ್ಕಿಂತ ಹೆಚ್ಚು ಅಂದರೆ ಗರಿಷ್ಠ ನಾಲ್ಕು ಜನರವರೆಗೆ ನಾಮಿನಿಯಾಗಿ ಮಾಡಬಹುದಾಗಿದೆ. ನಾಮಿನಿ ಸಂಖ್ಯೆ ಹೆಚ್ಚಳ, ಅಡಿಟರ್ ಗಳಿಗೆ ಸಂಭಾವನೆ ನಿಗದಿ ಮಾಡುವ ಅನೇಕ ವಿಚಾರಗಳ ಬಗ್ಗೆ ನಿಯಮಗಳು ಬದಲಾಗಲಿವೆ.

ನಾಮಿನಿ ಹೆಚ್ಚಳದಿಂದ ಆಗುವ ಲಾಭಗಳೇನು?
ನಿಮ್ಮ ಬಳಿ ಒಂದು ಬ್ಯಾಂಕ್ ಖಾತೆಯಲ್ಲಿ ಇಂತಿಷ್ಟು ಮೊತ್ತವಿದ್ದು, ನಿಮಗೆ ಎರಡು ಅಥವಾ ಮೂವರು ಮಕ್ಕಳಿದ್ದರೆ ಆ ಎಲ್ಲಾ ಮಕ್ಕಳ ಹೆಸರನ್ನೂ ನಾಮಿನಿಯಾಗಿ ಮಾಡಬಹುದಾಗಿದೆ. ಆದರೆ ಸದ್ಯದ ನಿಯಮದ ಪ್ರಕಾರ ಕೇವಲ ಒಬ್ಬರ ಹೆಸರನ್ನು ಮಾತ್ರ ನಾಮಿನಿಯಾಗಿ ಮಾಡಬಹುದಾಗಿತ್ತು. ಇನ್ನು ಮುಂದೆ ಈ ನಿಯಮ ಬದಲಾಗಲಿದೆ.

ಬ್ಯಾಂಕ್ ಗಳು ನಿಯಮಾವಳಿ ಅನುಸರಿಸಿರುವ ಬಗ್ಗೆ ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರಗಳಂದು ವರದಿ ಸಲ್ಲಿಸಬೇಕಾಗುತ್ತದೆ. ಆದರೆ ತಿದ್ದುಪಡಿ ನಿಯಮಗಳ ಪ್ರಕಾರ ತಿಂಗಳ 15 ನೇ ತಾರೀಖು ಮತ್ತು ಕೊನೆಯ ತಾರೀಖಿನಂದು ವರದಿ ಸಲ್ಲಿಸಬೇಕಾಗುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *