ಹೊಸ ವರ್ಷಾಚರಣೆ: ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಬಿಡುಗಡೆ

0 0
Read Time:1 Minute, 54 Second

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ಮಾಡುವವರಿಗೆ ಪೊಲೀಸರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. 

1. 2026 ರ ಹೊಸ ವರ್ಷಾಚರಣೆ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಯ ವತಿಯಿಂದ ಮಾರ್ಗ ಸೂಚಿಗಳನ್ನು ಹೊರಡಿಸಲಾಗಿದ್ದು, ಎಲ್ಲಾ ಕಾರ್ಯಕ್ರಮಗಳ ಆಯೋಜಕರು, ಸಾರ್ವಜನಿಕರು ನೀಡಲಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು.

2. ಅನುಮತಿ ಪಡೆಯದೇ ಸಾರ್ವಜನಿಕವಾಗಿ ಯಾವುದೇ ಆಚರಣೆಗಳನ್ನು ಮಾಡಲು ಅವಕಾಶ ಇರುವುದಿಲ್ಲ. 3. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು/ಕಿರುಕುಳ ಆಗದಂತೆ ಜವಾಬ್ದಾರಿತಯತವಾಗಿ ಸಂಭ್ರಮಾಚರಣೆ ನಡೆಸುವಂತೆ ಸೂಚಿಸಲಾಗಿದೆ.

4. ಸಂಭ್ರಮಾಚರಣೆ ಹೆಸರಿನಲ್ಲಿ ಅತೀವೇಗದ ಚಾಲನೆ, ವೀಲಿಂಗ್ ನಡೆಸುವುದು, ಅಸಭ್ಯವರ್ತನೆಯಂತಹ ಸಾರ್ವಜನಿಕ ಕಿರುಕುಳದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು.

5. ನಗರದಾದ್ಯಂತ ಬಂದೋ ಬಸ್ತ್ ಕರ್ತವ್ಯದ ಬಗ್ಗೆ ಪಿಸಿಆರ್ ವಾಹನಗಳು, ಹೈವೇ ಪೆಟ್ರೋಲ್ ವಾಹನಗಳು, ಪಿಕೆಟಿಂಗ್ ಪಾಯಿಂಟ್, ಚೆಕ್ ಪೋಸ್ಟ್ ಮತ್ತು ರೌಂಡ್ಸ್ ಕರ್ತವ್ಯಕ್ಕೆ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿಯಾಗಿ ಸೂಕ್ಷ್ಮ ಸ್ಥಳಗಳಲ್ಲಿ ಕೆ.ಎಸ್.ಆರ್.ಪಿ. ತುಕಡಿಗಳು, ಎಫ್.ಎ.ಎಫ್ ತುಕಡಿ ಹಾಗೂ ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

6. ಸಾರ್ವಜನಿಕರು ಯಾವುದೇ ದೂರುಗಳಿಗೆ 112 ಸಂಖ್ಯೆಗೆ ಕರೆ ಮಾಡುವುದು. 112 ಸಂಖ್ಯೆಯು ಕರೆಗೆ ಲಭ್ಯವಾಗದೇ ಇದ್ದಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 0824-2220800 ಅಥವಾ 9480802321 ಗೆ ಕರೆ ಮಾಡಬಹುದಾಗಿದೆ. 

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *