
ಮಂಗಳೂರು: 2024ಕ್ಕೆ ಗುಡ್‌ಬೈ ಹೇಳಿ 2025 ಅನ್ನು ಸ್ವಾಗತಿಸಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ.


ಆದ್ದರಿಂದ ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಹೋಟೆಲ್, ಪಬ್, ರೆಸಾರ್ಟ್‌ಗಳಲ್ಲಿ ಪಾರ್ಟಿಗಳ ಆಯೋಜನೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.
ಪಾರ್ಟಿ ನಡೆಸಿದರೆ ದಾಳಿ ಮಾಡುವ ಎಚ್ಚರಿಕೆ ನೀಡಿದೆ. ಹೌದು.. ನ್ಯೂ ಇಯರ್ ಪಾರ್ಟಿ ನಡೆಸದಂತೆ ಬಜರಂಗದಳ ಎಚ್ಚರಿಕೆ ನೀಡಿದೆ. ಈಗಾಗಲೇ ಪಾರ್ಟಿಗೆ ಅನುಮತಿ ನೀಡದಂತೆ ಪೊಲೀಸರಿಗೆ ಮನವಿ ಮಾಡಿದೆ. ನಮ್ಮ ಮನವಿಯನ್ನು ಮೀರಿಯೂ ಪಾರ್ಟಿಗೆ ಅನುಮತಿಸಿದಲ್ಲಿ ನಾವೇ ಪಾರ್ಟಿ ನಡೆಯುವಲ್ಲಿಗೆ ಎಂಟ್ರಿ ಕೊಟ್ಟು ನಿಲ್ಲಿಸುತ್ತೇವೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.


ಹೊಸ ವರ್ಷದ ಪಾರ್ಟಿಗೆ ಮಂಗಳೂರಿಗೆ ಡ್ರಗ್ಸ್ ಸಾಗಾಟ ಆಗುತ್ತಿದೆ. ಪಾರ್ಟಿ ಹೆಸರಲ್ಲಿ ಸೆಕ್ಸ್ ಮಾಫಿಯಾ ನಡೆಯುತ್ತದೆ. ಕೇರಳದಿಂದ ಬಂದ ಯುವಕರು ಬಂದು ಮಂಗಳೂರಿನಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿ, ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ.

ಹೀಗಾಗಿ ಹೊಸ ವರ್ಷದ ಕಾರ್ಯಗಳಿಗೆ ಅನುಮತಿ ನೀಡಬಾರದೆಂದು ವಿಶ್ವ ಹಿಂದೂ ಪರಿಷತ್ತು ಆಗ್ರಹಿಸಿದೆ. ಏನೇ ಆದರೂ, ಪ್ರತಿ ವರ್ಷದಂತೆ ಈ ಗ್ರ್ಯಾಂಡ್ ಪಾರ್ಟಿ ನಡೆಯುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಆದರೆ ಈ ರೀತಿಯ ಎಚ್ಚರಿಕೆಯಿಂದ ಪಾರ್ಟಿಗೆ ಆತಂಕ ಎದುರಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.