ಕರ್ನಾಟಕ ರಾಜ್ಯ ಕುಲಾಲ/ಕುಂಬಾರ ಸಮುದಾಯದ ಏಕೈಕ ನೋಂದಾಯಿತ ಸಂಸ್ಥೆಗೆ ನೂತನ ಶಕ್ತಿ

0 0
Read Time:8 Minute, 30 Second

ಮಂಗಳೂರು :ಕರ್ನಾಟಕ ರಾಜ್ಯ ಕುಲಾಲರ /ಕುಂಬಾರರ ಯುವ ವೇದಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ ರಿ. ಮಂಗಳೂರು ಇದರ ರಾಜ್ಯ, ವಿಭಾಗ, ಜಿಲ್ಲೆ ಹಾಗೂ ವಿಧಾನಸಭಾ/ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಆಯ್ಕೆ ಪ್ರಕ್ರಿಯೆಗೆ ಚಾಲನೆ ಕೊಡುವಂತೆ ರಾಜ್ಯ, ವಿಭಾಗ ಹಾಗೂ ಜಿಲ್ಲಾ ನಾಯಕರುಗಳಿಗೆ ನೋಂದಾಯಿತ ಕೇಂದ್ರಸಮಿತಿಯಿಂದ ಅಧಿಕಾರ ಹಸ್ತಾಂತರ

15 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ನೊಂದಾವಣೆ ಗೊಂಡು, 15 ವರ್ಷಗಳಲ್ಲಿ ಮಾಡಿದ ಸಮಾಜ ಮುಖೀ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಮುದಾಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ಸಂಸ್ಥೆಗೆ ನೂತನ ನಿಯೋಜಿತ ರಾಜ್ಯ ಅಧ್ಯಕ್ಷರಾಗಿ ಸುಧಾಕರ್ ಸಾಲ್ಯಾನ್ ಸುರತ್ಕಲ್, ನಿಯೋಜಿತ ರಾಜ್ಯ ಕಾರ್ಯದರ್ಶಿ ಯಾಗಿ ಸತೀಶ್ ಕುಲಾಲ್ ನಡೂರು, ನಿಯೋಜಿತ ರಾಜ್ಯ ಉಪಾಧ್ಯಕ್ಷರಾಗಿ ಹರೀಶ್ ಕಾರಿಂಜ, ಜಯೇಶ್ ಗೋವಿಂದ, ಸಂತೋಷ್ ಕುಲಾಲ್ ಪೆರ್ಡೂರು, ಮಾಧವ ಕುಲಾಲ್
ಬಿ ಸಿ ರೋಡ್, ಆರಿಸಿ ಉಳಿದ ರಾಜ್ಯ ಸಮಿತಿಯನ್ನ ವಿಭಾಗ ಅಧ್ಯಕ್ಷರುಗಳು ಜಿಲ್ಲಾ ಅಧ್ಯಕ್ಷರುಗಳು ಹಾಗು ಉಸ್ತುವಾರಿಗಳಜೊತೆ ಸಮಾಲೋಚಿಸಿ ಆರಿಸಿ ಕೊಳ್ಳಲು ಸೂಚಿಸಲಾಯಿತು,ಜೊತೆಗೆ ಕಾಸರಗೋಡು, ಬೆಂಗಳೂರು, ಮೈಸೂರು, ಮಲೆನಾಡು, ಬೆಳಗಾಂ, ಮುಂಬೈ ಜೊತೆ ಗಡಿನಾಡು ಮತ್ತು ಹೊರನಾಡು ವಿಭಾಗದ ನಾಯಕರುಗಳ ಜೊತೆ ಚರ್ಚಿಸಿ ಅಲ್ಲಿಯ ಪದಾಧಿಕಾರಿಗಳ ಆಯ್ಕೆ ಮಾಡುವಂತೆ ತೀರ್ಮಾನ ಮಾಡಲಾಯಿತು.


ಕರಾವಳಿ ವಿಭಾಗೀಯ ನಿಯೋಜಿತ ಅಧ್ಯಕ್ಷರನ್ನಾಗಿ ಸುಕುಮಾರ್ ಬಂಟ್ವಾಳ ಹಾಗು ನಿಯೋಜಿತ ಕಾರ್ಯದರ್ಶಿಯನ್ನಾಗಿ ಸುರೇಂದ್ರ ಕುಲಾಲ್ ವರಂಗ ಹೆಬ್ರಿ ಅವರನ್ನ ಆರಿಸಿ, ಆ ವಿಭಾಗಕ್ಕೆ ಮಾರ್ಗದರ್ಶಿ ಉಸ್ತುವಾರಿಗಳನ್ನಾಗಿ ಯುವ ವೇದಿಕೆ ಆರಂಭವಾದ ದಿನಗಳಿಂದ ಇಲ್ಲಿಯವರೆಗೂ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡಿದ ತೇಜಸ್ವಿರಾಜ್, ಅಶೋಕ್ ಕುಲಾಲ್ ಕೂಳೂರು, ಜಯಂತ ಸಂಕೋಲಿಗೆ, ಶೇಷಪ್ಪ ಮಾಸ್ತರ್, ಪದ್ಮ ಕುಮಾರ್ ಬೆಳ್ತಂಗಡಿ, ಶಿವಕುಮಾರ್ ಚೌಡ ಸೆಟ್ಟಿ, ಲಕ್ಷ್ಮಣ ಕುಲಾಲ್, ಸೌಂದರ್ಯ ರಮೇಶ್, ಸೌಂದರ್ಯ ಮಂಜಪ್ಪ, ಶಂಕರ ಕುಲಾಲ್ ಜನ್ಯಾಡಿ, ಸದಾನಂದ ಮೂಲ್ಯ, ಸದಾನಂದ ನಾವೂರು, ಅನಿಲ್ ಕೆಂಬಾರ್, ಮಹಾಬಲ ಮಾಸ್ತರ್, ದಿನಕರ ಅಂಚನ್, ಭೋಜ ಅಡ್ಯಾರ್, ಗೋಪಾಲ್ ಕುಲಾಲ್ bsnl, ಆನಂದ ಕುಲಾಲ್ ದುಬೈ, ಸತೀಶ್ ಕಡಿಯಾಳಿ, ಪ್ರಭಾಕರ್ ಕುಲಾಲ್ ಕುಂದಾಪುರ, ರಾಜೇಂದ್ರ ಕುಲಾಲ್ ಅಳಪೆ, ಹೊನ್ನಯ್ಯ ಕಾಟಿಪಳ್ಳ, ಜನಾರ್ಧನ ಸಾಲ್ಯಾನ್ ಕುಳಾಯಿ, ಗಂಗಾದರ ಕೆ, ಕುಳಾಯಿ, ಮೋಹನ್ ಜೋಕಟ್ಟೆ, ಶಂಕರ ಕುಲಾಲ್ ಪಾರಂಪಳ್ಳಿ, ರಾಜೀವ ಕುಲಾಲ್ ಬ್ರಹ್ಮಾವರ , ಸುಧಾಕರ ಕುಲಾಲ್ ಬ್ರಹ್ಮಾವರ, ಮಂಜುನಾಥ್ ಕುಲಾಲ್ ಸಾಲಿಗ್ರಾಮ, ಶಂಕರ ಕುಲಾಲ್
ಐರೊಡಿ , ಬಸವರಾಜ್ ಕುಲಾಲ ಬ್ರಹ್ಮಾವರ , ವಿಶ್ವನಾಥ್ ಕುಲಾಲ್ ಬಿದ್ಕಲ್ ಕಟ್ಟೆ, ಗೋವಿಂದ ಕುಲಾಲ್ ಹೆಂಗುವಳ್ಳಿ, ಪ್ರಥ್ವಿರಾಜ್ ಎಡಪದವು, ಜಯರಾಜ್ ಪ್ರಕಾಶ್, ದಯಾನಂದ ಅಡ್ಯಾರ್, ಸದಾಶಿವ ಬಂಗೇರ ಬಂಟ್ವಾಳ, ಮಚ್ಚೇಂದ್ರ ಬಂಟ್ವಾಳ ಇವರನ್ನ ಆರಿಸಲಾಯಿತು. ಇವರುಗಳ ಉಸ್ತುವಾರಿಯಲ್ಲಿ ನೊಂದಾಯಿತ ಕೇಂದ್ರ ಸಮಿತಿಯಲ್ಲಿ ಇರುವ ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ರತ್ನಾವತಿ ಎಂ ಆರ್, ಶ್ರೀಮತಿ ಸಾವಿತ್ರಿ ಮಹಾಬಲ ಹಂಡ, ಶ್ರೀಮತಿ ಬಬಿತಾ ಕುಲಾಲ್, ಶ್ರೀಮತಿ ಮಮತಾ ಕುಲಾಲ್, ಶ್ರೀಮತಿ ಭಾರತಿ ಟೀಚರ್, ಶ್ರೀಮತಿ ವೇದಾವತಿ ಕುಲಾಲ್ ನಾವೂರು, ಶ್ರೀಮತಿ ರೇಖಾ ಪ್ರಭಾಕರ ಕುಲಾಲ್, ಶ್ರೀಮತಿ ವಿಮಲಾ ಕುಲಾಲ್ ಸಹಕಾರದೊಂದಿಗೆ ಕೇಂದ್ರ ಮಹಿಳಾ ಸಮಿತಿಯನ್ನ ಆರಿಸುವಂತೆ ತೀರ್ಮಾನಿಸಲಾಯಿತು.
ದಕ ಜಿಲ್ಲಾ ನೂತನ ನಿಯೋಜಿತ ಅಧ್ಯಕ್ಷರನ್ನಾಗಿ ಅನಿಲ್ ದಾಸ್ ಹಾಗೂ ನಿಯೋಜಿತ ಕಾರ್ಯದರ್ಶಿ ಯನ್ನಾಗಿ ನವೀನ್ ಕುಲಾಲ್ ಮಜಾಲ್, ನಿಯೋಜಿತ ಉಪಾಧ್ಯಕ್ಷರನ್ನಾಗಿ ಗಣೇಶ್ ಕುಲಾಲ್ ಕುಳಾಯಿ, ಹಾಗೂ ಜಯಗಣೇಶ್ ಕುಲಾಲ್ ಬಂಟ್ವಾಳ ಇವರನ್ನ ಆರಿಸಲಾಯಿತು. ಉಳಿದ ಪದಾಧಿಕಾರಿಗಳನ್ನ ಸೇವಾ ಆದ್ಯತೆಯ ಮೇರೆಗೆ ಆರಿಸಿಕೊಳ್ಳಲು ತೀರ್ಮಾನಿಸಲಾಯಿತು.


ಉಡುಪಿ ಜಿಲ್ಲಾ ನಿಯೋಜಿತ ಅಧ್ಯಕ್ಷರನ್ನಾಗಿ ಮಂಜುನಾಥ್ ಕುಲಾಲ್ ಜನ್ಸಾಲೆ ಹಾಗೂ ನಿಯೋಜಿತ ಕಾರ್ಯದರ್ಶಿಯನ್ನಾಗಿ ಶಂಕರ ಕುಲಾಲ್ ಮೊಳಹಳ್ಳಿ ಯವರ ಆರಿಸಲಾಗಿದ್ದು, ನಿಯೋಜಿತ ಉಪಾಧ್ಯಕ್ಷರನ್ನಾಗಿ ರವೀಂದ್ರ ಕುಲಾಲ ಚೇರ್ಕಾಡಿ , ರಮೇಶ್ ಕುಲಾಲ ಹೆಂಗವಳ್ಳಿ ಅರಿಸಿ ಉಳಿದ ಪದಾಧಿಕಾರಿಗಳನ್ನ ಸೇವಾ ಆದ್ಯತೆಯ ಮೇರೆಗೆ ಆರಿಸಿ ಕೊಳ್ಳಲು ತೀರ್ಮಾನಿಸಲಾಯಿತು.
ಆಯ್ಕೆಯ ಪ್ರಕ್ರಿಯೆಗಳನ್ನ ಸ್ಥಾಪಕ ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ನಿರ್ಗಮನ ರಾಜ್ಯ ಅಧ್ಯಕ್ಷರಾದ ಗಂಗಾಧರ ಬಂಜನ್, ನಿರ್ಗಮನ ಕಾರ್ಯದರ್ಶಿಯಾದ ಜಯೇಶ್ ಗೋವಿಂದ ಉಳಿದ ಪದಾಧಿಕಾರಿಗಳ ಹಾಗು ಹಿರಿಯರ ಜೊತೆ ಚರ್ಚಿಸಿ ಜಂಟಿಯಾಗಿ ನಡೆಸಿಕೊಡಲಾಯಿತು.
ಯುವಜನ ಮತ್ತು ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಕ್ಕಾಗಿ ರಾಜ್ಯ ಮಟ್ಟದಲ್ಲಿ ಇರುವ ಕುಲಾಲ/ಕುಂಬಾರ/ಮೂಲ್ಯ ಸಮುದಾಯದ ಏಕಮಾತ್ರ ಸ್ವತಂತ್ರ ನೋಂದಾಯಿತ ಸಂಸ್ಥೆ ಆಗಿರುವ ಯುವ ವೇದಿಕೆ ರಾಜ್ಯದಲ್ಲಿ ಇರುವ ಎಲ್ಲಾ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ತಾಲೂಕು ಮಟ್ಟದ ಕುಲಾಲ/ಕುಂಬಾರ/ ಮೂಲ್ಯ ಸಂಘ ಸಂಸ್ಥೆಗಳ ಸಹಯೋಗ, ಸಾಂಘಿಕ ಸದಸ್ಯತನ ಪಡೆದು ಯುವಜನ ಮತ್ತು ಮಹಿಳಾ ಕಲ್ಯಾಣಕ್ಕಾಗಿ ಯುವ ವೇದಿಕೆಯ ಸ್ವತಂತ್ರ ಸಂಘಟನೆ ಯ ಮೂಲಕ ಸಾತ್ವಿಕ ಹೋರಾಟ ಮಾಡಲು ತೀರ್ಮಾನಿಸಲಾಯಿತು
ರಾಜ್ಯ, ವಿಭಾಗ ಹಾಗೂ ಉಭಯ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾಡುವರೇ ಸೂಕ್ತ ಮಾರ್ಗದರ್ಶನ ನೀಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಲಾಯಿತು.

ನೋಂದಾಯಿತ ಕೇಂದ್ರ ಸಮಿತಿಯ ಶಾಶ್ವತ ಸದಸ್ಯರುಗಳಾದ,
ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ತೇಜಶ್ವಿರಾಜ್, ಗಂಗಾದರ ಬಂಜನ್, ದಿನಕರ ಅಂಚನ, ಜಯೇಶ್ ಗೋವಿಂದ, ಸುಧಾಕರ ಸಾಲ್ಯಾನ್, ಸತೀಶ್ ಕುಲಾಲ್ ನಡೂರು, ಹರೀಶ್ ಕಾರಿಂಜ, ಸುಕುಮಾರ್ ಬಂಟ್ವಾಳ, ಅನಿಲ್ ದಾಸ್, ಮಹಾಬಲ ಮಾಸ್ಟರ್, ಶೇಷಪ್ಪ ಮಾಸ್ಟರ್, ಭೋಜ ಅಡ್ಯಾರ್, ಅಶೋಕ್ ಕುಲಾಲ್ ಕುಳೂರು, ಪದ್ಮ ಕುಂಬಾರ ಬೆಳ್ತಂಗಡಿ, ಹೊನ್ನಯ್ಯ ಕಾಟಿಪಳ್ಳ, ಜಯಂತ್ ಸಂಕೊಲಿಗೆ, ದಿವಾಕರ ಬಂಗೇರ ಕಾರ್ಕಳ, ರತ್ನಾವತಿ ಎಂ ಆರ್. ಬಬಿತಾ ರವೀಂದ್ರ, ಮಮತಾ ಎ ಕುಲಾಲ್ ಇವರುಗಳ ಸಹಾಯ ಸಹಕಾರ ಮತ್ತು ಮಾರ್ಗದರ್ಶನ ಪಡೆದು ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಸದಸ್ಯತನ ಅಭಿಯಾನಕ್ಕೆ ಚಾಲನೆ ಕೊಡಲಾಯಿತು.

ಕಾನೂನು ಸಲಹೆಗಾರರನ್ನಾಗಿ ನ್ಯಾಯವಾದಿ ರಾಮ್ ಪ್ರಸಾದ್ ಅವರನ್ನೇ ಮುಂದುವರಿಸಲು ತೀರ್ಮಾನಿಸಲಾಯಿತು. ಸಂಸ್ಥೆ ನೊಂದವಣೆ ಗೊಂಡಿದ್ದು ಖಾತೆ ಹಾಗೂ ಪಾನ್ ಕಾರ್ಡ್ ಹೊಂದಿರುವುದರಿಂದ ಎಲ್ಲಾ ಘಟಕಗಳಲ್ಲೂ ಸೇರಿ ಕನಿಷ್ಠ 5000 ಮಂದಿಯನ್ನ ಸದಸ್ಯತನ ಮಾಡಲು ತೀರ್ಮಾನ ಮಾಡಲಾಯಿತು.
ಚುನಾವಣಾ ಪ್ರಕ್ರಿಯೆಗಳ ಕೇಂದ್ರ ಶಾಶ್ವತ ಸಮಿತಿಯ ಸದಸ್ಯರುಗಳ ಪರವಾಗಿ.
ಜಯೇಶ್ ಗೋವಿಂದ
(ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಕುಲಾಲರ -ಕುಂಬಾರರ ಯುವವೇಧಿಕೆಗಳ ಹಾಗು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಮಂಗಳೂರು)

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *