2026ರ ಮಾರ್ಚ್ 21ಕ್ಕೆ ನಕ್ಸಲಿಸಂ ಮುಕ್ತ ಭಾರತ: ಅಮಿತ್ ಶಾ

0 0
Read Time:2 Minute, 39 Second

ನವದೆಹಲಿ: 2026ರ ಮಾರ್ಚ್ 21ರೊಳಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ. ಶುಕ್ರವಾರ ಗೃಹ ಸಚಿವಾಲಯದ ಕಾರ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, “ನಕ್ಸಲಿಸಂ ರಾಜಕೀಯ ವಿಷಯವೆಂದು ಪರಿಗಣಿಸಿದ ಸರಕಾರವಿದ್ದಾಗ ಏನಾಗುತ್ತದೆ, ಭದ್ರತೆ ಮತ್ತು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಿದ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಏನಾಗುತ್ತದೆ” ಎಂಬುದನ್ನು ಗಮನಿಸುವಂತೆ ತಿಳಿಸಿದರು.

ನಕ್ಸಲರ ವಿರುದ್ಧ ಕೇಂದ್ರದ ಹೋರಾಟ
2023ರ ಡಿಸೆಂಬರ್‌ನಲ್ಲಿ ಛತ್ತೀಸ್‌ಗಢದಲ್ಲಿ ಬಿ ಜೆ ಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಒಂದು ವರ್ಷದಲ್ಲಿ 380 ನಕ್ಸಲರು ಹತ್ಯೆಗೀಡಾಗಿದ್ದಾರೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ 30 ನಕ್ಸಲರು ಹತರಾಗಿದ್ದು, ಇದನ್ನು ಹತ್ಯೆಗೀಡಾದವರ ಲೆಕ್ಕಕ್ಕೆ ಸೇರಿಸಿಲ್ಲ. ಇದಲ್ಲದೆ, 1194 ನಕ್ಸಲರನ್ನು ಬಂಧಿಸಲಾಗಿದ್ದು, 1045 ಮಂದಿ ಶರಣಾಗಿದ್ದಾರೆ. ಇದರ ಪರಿಣಾಮ, ಸಕ್ರಿಯ ನಕ್ಸಲರ ಸಂಖ್ಯೆ 2619ಕ್ಕೆ ಕುಸಿದಿದೆ. ಈ ಅವಧಿಯಲ್ಲಿ 26 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.

ಶಾಂತಿ ಒಪ್ಪಂದ ಮತ್ತು ಭಯೋತ್ಪಾದನೆ ನಿಯಂತ್ರಣ
ಈಶಾನ್ಯ ರಾಜ್ಯಗಳಲ್ಲಿ ಪ್ರಮುಖ ಶಾಂತಿ ಒಪ್ಪಂದಗಳನ್ನು ಕೇಂದ್ರ ಸರ್ಕಾರ ಮಾಡಿಕೊಂಡಿದೆ. 2019 ರಿಂದ ಈವರೆಗೆ 12 ಪ್ರಮುಖ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ್ದು, 10,900 ಮಂದಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ. ಬೋಡೋಲ್ಯಾಂಡ್ ನೇರ ವಿಚಾರಣೆಗೆ ತೆರಳಿದಾಗ ಸಹಸ್ರಾರು ಯುವಕರು ಈಗ ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

“ಭಯೋತ್ಪಾದನೆ ವಿರುದ್ದ ಶೂನ್ಯ ಸಹನಶೀಲತೆ”
ಜಮ್ಮು-ಕಾಶ್ಮೀರದ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ ಮತ್ತು ಈಶಾನ್ಯ ರಾಜ್ಯಗಳ ಅಶಾಂತಿ ಭಾರತದ ಪ್ರಮುಖ ಸವಾಲುಗಳಾಗಿವೆ ಎಂದು ಶಾ ಹೇಳಿದರು. ಕಳೆದ ನಾಲ್ಕು ದಶಕಗಳಲ್ಲಿ 92,000 ನಾಗರಿಕರು ಭಯೋತ್ಪಾದನೆಗೆ ಬಲಿಯಾಗಿದ್ದಾರೆ, ಆದರೆ ಕೇಂದ್ರ ಸರ್ಕಾರವು ಇದನ್ನು ಎದುರಿಸಲು ಸಂಘಟಿತ ಪ್ರಯತ್ನವನ್ನು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *