
ಓಂ ಶ್ರೀ ಗೆಳೆಯರ ಬಳಗ (ರಿ) ನಾಯಿಲ ನರಿಕೊಂಬು, ಓಂ ಶ್ರೀ ಮಹಿಳಾ ಮಂಡಳಿ, ವಿಜಯಶ್ರೀ ಚಿಕಿತ್ಸಾಲಯ ನರಿ ಕೊಂಬು, ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ, ರೋಟರಿ ಕ್ಲಬ್ ಬೀಸಿ ರೋಡು ಸಿಟಿ, ರೋಟರಿ ಕ್ಲಬ್ ಲೊರೆಟೋ ಹಿಲ್ಸ್, ರೋಟರಿ ಕ್ಲಬ್ ಮೋದಂಕಾಪು ಇದರ ಸಂಯುಕ್ತ ಆಶ್ರಯದಲ್ಲಿ ದಿ| ಯತಿರಾಜ್, ದಿ| ಜಯ ನಾಯಿಲ, ದಿ| ಮೋಹನ್, ದಿ| ಅರುಣ್ ಬೋರು ಗುಡ್ಡೆ ಇವರ ಸ್ಮರಣಾರ್ಥ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರ ಜ್ಯೋತಿ ಜಾರಿ ಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ( ಅಂದತ್ವ ವಿಭಾಗ ) ಮಂಗಳೂರು, ಡಾ ಪಿ ದಯಾನಂದ್ ಪೈ ಮತ್ತು ಶ್ರೀ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್(ರಿ), ಸೆಂಚುರಿ ಗ್ರೂಪ್ಸ್ ಬೆಂಗಳೂರು ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸನ ಮತ್ತು ಚಿಕಿತ್ಸಾ ಶಿಬಿರ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದೊಂದಿಗೆ ಅಂಚೆ ಇಲಾಖೆಯ ಇನ್ಸೂರೆನ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮ ವು ಓಂ ಶ್ರೀ ಗೆಳೆಯರ ಬಳಗ ನಾಯಿಲ ಇದರ ಸಭಾಭವನದ ಕಟ್ಟಡದಲ್ಲಿ ನಡೆಯಿತು.



ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಲಾಯಿತು ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ದಿನೇಶ್ ನೆಲ್ಲಿಗುಡ್ಡೆ ವಹಿಸಿದ್ದರು.
ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಶ್ರೀ ಗುರುಪ್ರಸಾದ್ ರವರು ಅಂಚೆ ಇಲಾಖೆಯವರ ಬೇರೆ ಬೇರೆ ಇನ್ಸೂರೆನ್ಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು, ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಮಂಗಳಾದೇವಿ ಮಂಗಳೂರು ಇದರ ಅಧ್ಯಕ್ಷರು ಲಯನ್ ಸಂತೋಷ್ ಪೂಂಜ ಅವರು ಓಂ ಶ್ರೀ ಗೆಳೆಯರ ಬಳಗದವರು ಮಾಡುವ ಪ್ರತಿಯೊಂದುಉತ್ತಮ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿಯು ಯಾವಾಗಲೂ ಬೆಂಬಲವಾಗಿ ಇರುತ್ತದೆ ಎಂದು ತಿಳಿಸಿದರು.


ಪ್ರಸಾದ್ ನೇತ್ರಾಲಯದ ಡಾಕ್ಟರ್ ಕಣ್ಣಿನ ಬಗ್ಗೆ ಮಾಹಿತಿಯನ್ನು ನೀಡಿದರು , ವೇದಿಕೆಯಲ್ಲಿ ಇದ್ದಂತ ರೊ| ದಿವಾಕರ ಶೆಟ್ಟಿ, ರೊ| ಕೆ ಸತೀಶ್ ಕುಮಾರ್, ರೊ| ಪದ್ಮನಾಭ ರೈ, ರೊ| ವಿಜಯ್, ರೊ| ಇಲಿಯಾಸ್ ಸ್ಯಾoಕ್ವಿಸ್ಟ್, ಮಾತನಾಡಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ಇದರ ಕಾರ್ಯದರ್ಶಿ ಶ್ರೀ ದಿನೇಶ್ ಇದ್ದರು. ಶ್ರೀ ಕಿರಣ್ ಅಟ್ಲುರು ಸ್ವಾಗತಿಸಿ, ಕರುಣಾಕರ್ ಧನ್ಯವಾದವಿತ್ತರು.
ಕುಮಾರಿ ಲಿಖಿತಾ ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮಕ್ಕೆ ದಾಸ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಲಯನ್ ಅನಿಲ್ ದಾಸ್, ವಿಧಾನಪರಿಷತ್ ಸದಸ್ಯರಾದ ಕಿಶೋರ್ ಬಿ ಅರ್ ವಿಜಯಶ್ರೀ ಚಿಕಿತ್ಸಾಲಯದ ಡಾ. ಸುಬ್ರಹ್ಮಣ್ಯ ಟಿ, ರಾಮ್ ಗಣೇಶ್ ಆಟೋ ವರ್ಕ್ಸ್ ನ ಶ್ರೀ ಉಮೇಶ್ ನೆಲ್ಲಿಗುಡ್ಡೆ, ಸಮಾಜ ಸೇವಾ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷರಾದ ಶ್ರೀ ಜನಾರ್ಧನ ಬೊಂಡಲ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ಮೋರ್ಚಾದ ಯಶೋಧರ್ ಕರ್ಬೆಟ್ಟು ಆಗಮಿಸಿ ಶುಭ ಹಾರೈಸಿದರು.