
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡ ರ ಹುಟ್ಟುಹಬ್ಬದ ಪ್ರಯುಕ್ತ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ದ ವತಿಯಿಂದ ನಗರದ ಸ್ನೇಹ ದೀಪ ಮಕ್ಕಳ (HIV ) ಕೇರ್ ಸೆಂಟರ್ ನಲ್ಲಿ ಮದ್ಯಾಹ್ನ ಅನ್ನದಾನ ಮತ್ತು ಸಿಹಿ ತಿಂಡಿ ವಿತರಣೆ ಮಾಡಿ ಮಕ್ಕಳ ಜೊತೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚಾರಣೆ ಯನ್ನು ಅರ್ಥ ಪೂರ್ಣ ವಾಗಿ ಆಚರಿಸಲಾಯಿತು.




ಜಿಲ್ಲಾ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್, ಪ್ರಧಾನ ಕಾರ್ಯದರ್ಶಿ ಕಿರಣ್ ಅಟ್ಟಲೂರ್, ಉಪಾಧ್ಯಕ್ಷ ಪ್ರಸಾದ್ ತೋಮಸ್, ಆಟೋ ಘಟಕ ಅಧ್ಯಕ್ಷ, ಭರತ್, ಅರುಣ್, ಮಂಜುನಾಥ್, ಝೆರಾಲ್ಡ್, ಮುಂತಾದವರು ಪಾಲ್ಗೊಂಡಿದ್ದರು.

ಸ್ನೇಹ ದೀಪ ಟ್ರಸ್ಟಿನ ನಿರ್ವಾಹಕ ರಾದ ತಬಸುಮ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಜೂನ್ 10 ತಾರೀಕಿಗೆ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರ ಬೆಂಗಳೂರಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಾನಪದ ಕಲಾವಿದರ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಲಿದೆ ಎಂದು ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್ ತಿಳಿಸಿದರು.

