‘ಮುಡಾ’ ಹಗರಣ ಖಂಡಿಸಿ ‘ರಣಕಹಳೆ’ ಮೊಳಗಿಸಿದ ಬಿಜೆಪಿ-ಜೆಡಿಎಸ್ : ‘ಮೈಸೂರು ಚಲೋ’ ಪಾದಯಾತ್ರೆಗೆ ಚಾಲನೆ

0 0
Read Time:2 Minute, 38 Second

ಬೆಂಗಳೂರು : ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಾಗೂ ಜೆಡಿಎಸ್ ಎಂದು ಪಾದಯಾತ್ರೆ ಹಮ್ಮಿಕೊಂಡಿವೆ. ಈ ಕುರಿತು ಇಂದು ಬೆಂಗಳೂರಿನ ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪಾದಯಾತ್ರೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ಈ ಒಂದು ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದ ಗೌಡ, ಬಿಎಸ್ ಯಡಿಯೂರಪ್ಪ, ಸಂಸದರಾದ ಬಸವರಾಜ ಬೊಮ್ಮಾಯಿ, ಯದುವೀರ್ ಒಡೆಯರ್ಬಿ, ಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಎಂಎಲ್ಸಿ ಎಸ್ ಆರ್ ವಿಶ್ವನಾಥ್ ಸರಿದಂತೆ ಎಲ್ಲ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಪಾದಯಾತ್ರೆಗೆ ಚಾಲನೆ ನೀಡಲು ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಮಾತನಾಡಿ, ಜನತೆಯ ಸ್ಪಂದನೆಯೊಂದಿಗೆ ಆರಂಭವಾದ ಪಾದಯಾತ್ರೆ ಇದು. ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಅಷ್ಟೇ ಅಲ್ಲ ಜನತೆಯ ಒಂದು ಸ್ವಪ್ರೇರಣೆಯಿಂದ, ಈ ಸರ್ಕಾರದ ನೀತಿಗಳು ಅಕ್ರಮಗಳ ವಿರುದ್ಧ ಜನತೆ ಇವತ್ತು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಪಾದಯಾತ್ರೆ ಮುಖಾಂತರ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ನನಗೆ ಯಾವ ಒತ್ತಡವು ಇಲ್ಲ. ಕುಮಾರಸ್ವಾಮಿನ ಯಾರು ಒತ್ತಡ ಮಾಡಿ ಇವತ್ತು ಇಂತಹ ಒಂದು ರೀತಿಯಲ್ಲಿ ಕೆಲಸ ಮಾಡುವಂತ ಕೆಲಸ ಮಾಡಿಲ್ಲ. ಈ ಪಾದಯಾತ್ರೆ ಕಾರ್ಯಕ್ರಮ ಜೆಡಿಎಸ್ ಬಿಜೆಪಿಯಿಂದ ನಡೆಯುತ್ತಿದೆ.ಈ ಕಾರ್ಯಕ್ರಮದಲ್ಲಿ ನಾನು ಎಲ್ಲಾ ಪಕ್ಷಗಳನ್ನು ಜೊತೆಗೂಡಿ ಭಾಗವಹಿಸಿ ಇಂತಹ ಒಂದು ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಏನಿದೆ ಈ ಒಂದು ಸರ್ಕಾರವನ್ನು ತೆಗೆಯಲಿಕ್ಕೆ ಎಲ್ಲರಿಗೂ ಒಂದಾಗಿ ಹೋರಾಟ ಮಾಡಬೇಕು ತಿಳಿಸುತ್ತೇನೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *