
ಸಂಘದ ಅಧ್ಯಕ್ಷ ಹರೀಶ್ ಕಾರಿಂಜರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಪ್ರಮುಖ ನಿರ್ಣಯಗಳು


ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಮಾಸಿಕ ಸಭೆಯು ಹರೀಶ್ ಕಾರಿಂಜ ಅವರ ಅಧ್ಯಕ್ಷತೆಯಲ್ಲಿ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ನಡೆಯಿತು.
ಪ್ರಮುಖ ನಿರ್ಣಯಗಳು
ಜು. 28ರಂದು ಶಾಸಕರಾದ ಹರೀಶ್ ಪೂಂಜ ಇವರ ಉಪಸ್ಥಿತಿಯಲ್ಲಿ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರನ್ನು ಅಭಿನಂದಿಸುವುದು ಮತ್ತು ಪ್ರಸ್ತುತ ವರ್ಷದ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿಯಲ್ಲಿ ಡಿಸ್ಟಿಂಕ್ಷನ್ (85% ಮತ್ತು ಅಧಿಕ ಅಂಕ) ಪಡೆದ ಸ್ವಜಾತಿ ವಿದ್ಯಾರ್ಥಿಗಳನ್ನು ಗೌರವಿಸುವುದು ಹಾಗೂ ಆಟಿಡೊಂಜಿ ಕೂಟ l ಕಾರ್ಯಕ್ರಮವು ಕುಲಾಲ ಮಂದಿರದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ.


ಸಂಘದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸಲಾಯಿತು. ಸಭೆಯಲ್ಲಿ ಲೋಕೇಶ್ ಕುಲಾಲ್ ಕಂಚಿಂಜ, ಜಗನ್ನಾಥ್ ಸಿರಿಮಜಲ್, ತಿಲಕ್ ರಾಜ್ ಕುಲಾಲ್ ಕಂಚಿಂಜ, ಹರೀಶ್ ಮೂಲ್ಯ ನಾರಾವಿ, ಪ್ರವೀಣ್ ಕುಲಾಲ್ ಬರಾಯ, ಮೋಹನ್ ಕುಲಾಲ್ ಕಂಚಿಂಜ, ಹರಿಶ್ಚಂದ್ರ ಕುಲಾಲ್ ಪಾಂಡೇಶ್ವರ, ಸಂಜೀವ ಕುಲಾಲ್ ಬೆಳ್ತಂಗಡಿ, ಗಣೇಶ್ ಕುಲಾಲ್ ಗುರುವಾಯನಕೆರೆ, ದಯಾನಂದ ಕುಲಾಲ್ ಅಂಡಿಂಜೆ, ಸಂಘದ ಮೆನೇಜರ್ ಮುಖೇಶ್ ಕುಲಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲ್ ಸ್ವಾಗತಿಸಿ ಹಿಂದಿನ ಸಭೆಯ ನಡವಳಿ ಓದಿ ಮಂದಿಸಿದರು.
