ಮಂಗಳೂರಿನ ಮೋತಿ ಮಹಲ್ ಹೋಟೆಲ್‌ ಇನ್ನಿಲ್ಲ..!! ಎಪ್ರಿಲ್ ನಂತರ ಬಂದ್

0 0
Read Time:2 Minute, 49 Second

ಮಂಗಳೂರು: ಕಾಲಚಕ್ರದ ತಿರುವಿನಲ್ಲಿ ಮತ್ತೊಂದು ನೆನಪು ಮಾಸುತ್ತಿದೆ. ಆರು ದಶಕಗಳ ಕಾಲ ಮಂಗಳೂರಿನ ಹೃದಯ ಬಡಿತದಂತೆ ಇದ್ದ, ಹಂಪನಕಟ್ಟೆಯ ಹೆಮ್ಮೆಯಾಗಿದ್ದ ಮೋತಿ ಮಹಲ್ ಹೋಟೆಲ್ ತನ್ನ ಬಾಗಿಲು ಮುಚ್ಚುತ್ತಿದೆ ಎಂಬ ಸುದ್ದಿ ಕೇಳಿ ಮಂಗಳೂರಿಗರ ಮನಸ್ಸು ಭಾರವಾಗಿದೆ. ನಗರದ ಅತಿಥಿ ಸತ್ಕಾರದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಈ ಹೋಟೆಲ್‌ ಇನ್ನು ನೆನಪು ಮಾತ್ರವಾಗಲಿದೆ.

ಮೋತಿ ಮಹಲ್ ನ ಹೋಟೆಲಿನ ಮಾಲಕರಿಗೆ ಹಾಗೂ ಅದರ ಜಮೀನಿನ ಮೂಲ ಮಾಲೀಕರಿಗೆ ಕಳೆದ ಹಲವು ದಶಕಗಳಿಂದ ನಡೆಯುತ್ತಿದ್ದ ಸಿವಿಲ್ ವ್ಯಾಜ್ಯದ ತೀರ್ಪು ಸುಪ್ರೀಂ ಕೋರ್ಟ್ನಲ್ಲಿ ಹೊರ ಬಿದ್ದಿದೆ. ತೀರ್ಪಿನ ಪ್ರಕಾರ, ಮೋತಿ ಮಹಲ್ ಅನ್ನು ಏಪ್ರಿಲ್ ಅಂತ್ಯದೊಳಗೆ ಅದರ ಜಮೀನಿನ ಮಾಲೀಕರಿಗೆ ಹಿಂದಿರುಗಿಸಬೇಕಾಗಿದ್ದು, 3 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಬೇಕಾಗಿದೆ. ಈ ಮೂಲಕ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಅಂಕದ ಪರದೆ ಬಿದ್ದಿದೆ.

ಉದ್ಯಮಿ ಎ.ಜೆ. ಶೆಟ್ಟಿಯವರ ದೂರದೃಷ್ಟಿಯ ಫಲವಾಗಿ 1966 ರಲ್ಲಿ ತಲೆ ಎತ್ತಿದ ಈ ಹೋಟೆಲ್, ಅಂದಿನ ಕಾಲಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿತ್ತು. ಜಿಮ್ ಮತ್ತು ಈಜುಕೊಳವನ್ನು ಹೊಂದಿದ ಮೊದಲ ಹೋಟೆಲ್ ಎಂಬ ಹೆಗ್ಗಳಿಕೆ ಇದರದು. ಮಂಗಳ ಮಲ್ಟಿ ಕುಸಿನ್, ಮಧುವನ್ ವೆಜ್, ಮೆಕ್ಸಿಲ್ ಬಾರ್, ತೈಚಿನ್ ಚೈನೀಸ್ ರೆಸ್ಟೋರೆಂಟ್ ಮತ್ತು ಸಿಹಿ ತಿನಿಸುಗಳ ವಿಭಾಗ, ಶೀತಲ್ ಈಜುಕೊಳ… ಇವೆಲ್ಲವೂ ಮಂಗಳೂರಿನ ಮೊದಲ ಐಷಾರಾಮಿ ಮತ್ತು ವಾಣಿಜ್ಯ ಹೋಟೆಲ್ನ ಕೀರ್ತಿಯನ್ನು ಹೆಚ್ಚಿಸಿದ್ದವು.

90 ಸುಸಜ್ಜಿತ ಕೊಠಡಿಗಳು, ಸಾವಿರಾರು ಮಂದಿ ಸೇರುವ ವಿಶಾಲವಾದ ಸಭಾಂಗಣ… ಮೋತಿ ಮಹಲ್ ಕೇವಲ ಒಂದು ಕಟ್ಟಡವಾಗಿರಲಿಲ್ಲ, ಅದು ಮಂಗಳೂರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಒಂದು ಭಾಗವಾಗಿತ್ತು.

ಕುಟುಂಬದ ಹರಟೆಗಳು, ವ್ಯಾಪಾರ ಒಪ್ಪಂದಗಳು, ಮದುವೆ ಸಮಾರಂಭಗಳು, ಸಂಭ್ರಮದ ಕೂಟಗಳು… ಹೀಗೆ ಎಷ್ಟೋ ನೆನಪುಗಳಿಗೆ ಈ ಹೋಟೆಲ್ನ ಗೋಡೆಗಳು ಸಾಕ್ಷಿಯಾಗಿವೆ. ಮೋತಿ ಮಹಲ್ನ ಸಸ್ಯಾಹಾರಿ ಊಟದ ರುಚಿ ಇಂದಿಗೂ ಜನರ ನಾಲಿಗೆಯ ಮೇಲೆ ಹಸಿರಾಗಿದೆ.

ಆದರೆ ಇನ್ನು ಮುಂದೆ ಇದೆಲ್ಲವೂ ಕೇವಲ ಕಥೆಯಾಗಲಿದೆ. ಏಪ್ರಿಲ್ ತಿಂಗಳ ಅಂತ್ಯದೊಂದಿಗೆ ಮೋತಿ ಮಹಲ್ ಕೇವಲ ಒಂದು ಮರೆಯಲಾಗದ ನೆನಪಾಗಿ ಉಳಿಯಲಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *