
Read Time:53 Second
ಮಂಗಳೂರು ನಗರದ ತೊಕ್ಕೊಟ್ಟು ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ ತಾಯಿ ಹಾಗೂ ಮಕ್ಕಳಿಬ್ಬರು ನಾಪತ್ತೆಯಾದ ಘಟನೆ ನಡೆದಿದೆ.


ಸ್ಕೈಹೈಟ್ಸ್ ಅಪಾರ್ಟ್‌ಮೆಂಟ್ ನಿವಾಸಿ ಮಂಜುಳಾ (31) ಮತ್ತು ಅವರ ಮಕ್ಕಳಾದ ಕೃಷ್ಣ (8) ಹಾಗೂ ಖುಷಿ (6) ನಾಪತ್ತೆಯಾದವರು. ಮಂಜುಳಾ ಅವರು ಜು. 29ರಂದು ಬೆಳಗ್ಗೆ 10 ಗಂಟೆಗೆ ಫ್ಲ್ಯಾಟ್‌ನಿಂದ ಹೊರಟಿದ್ದು, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದಾರೆ.
ಅವರ ಪತಿ ದ್ಯಾಮಣ್ಣ ಮೇಟಿ ಅವರು ಆ. 3ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾದಲ್ಲಿ ಉಳ್ಳಾಲ ಪೊಲೀಸ್ ಠಾಣೆಯನ್ನು (0824-2466269) ಸಂಪರ್ಕಿಸಲು ಕೋರಲಾಗಿದೆ.

