
Read Time:1 Minute, 2 Second
ಕೊಲ್ಲಾಪುರ: 1993ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಅಲಿ ಖಾನ್ರನ್ನು ಕೊಲ್ಲಾಪುರ ಜೈಲಿನಲ್ಲಿ ಶಿರಚ್ಛೇದ ಮಾಡುವ ಮೂಲಕ ಬರ್ಬರವಾಗಿ ಹತ್ಯೆ ಮಾಡಲಾಗಿದೆ.


ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳು ಭಾನುವಾರ ಆರೋಪಿ ಮೊಹಮ್ಮದ್ ಅಲಿಯನ್ನು ಕೊಲೆ ಮಾಡಿದ್ದಾರೆ. ಈ ಐವರು ಆರೋಪಿಗಳು ಮೊಹಮ್ಮದ್ ಅಲಿಯ ಶಿರಚ್ಛೇದ ಮಾಡಿದ ಪರಿಣಾಮ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
1993ರ ಮುಂಬೈ ಸ್ಫೋಟದ ನಾಲ್ವರು ಅಪರಾಧಿಗಳನ್ನು ಕೊಲ್ಲಾಪುರ ಜೈಲಿನಲ್ಲಿ ಬಂಧಿಸಲಾಗಿತ್ತು. ಒಬ್ಬ ಅಪರಾಧಿಯ ಹೆಸರು ಮೊಹಮ್ಮದ್ ಅಲಿ ಖಾನ್. ಇನ್ನೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳ ಪೈಕಿ ಮೊಹಮ್ಮದ್ ಅಲಿ ಖಾನ್ ಎಂಬುವವರ ಬ್ಯಾರಕ್ನಲ್ಲಿ ಇರಿಸಲಾಗಿತ್ತು

