
Read Time:54 Second
ಕನ್ಯಾಕುಮಾರಿಯಲ್ಲಿ ಮೂರು ದಿನಗಳ ಧ್ಯಾನ ವಿರಾಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ತಮಿಳುನಾಡಿನ ವಿವೇಕಾನಂದ ರಾಕ್ ಮೆಮೋರಿಯಲ್ ಗೆ ಆಗಮಿಸಿದರು.


ಪ್ರಧಾನಿ ವಿವೇಕಾನಂದ ರಾಕ್ ನಲ್ಲಿ ಧ್ಯಾನಮಗ್ನರಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಸ್ಮಾರಕವನ್ನು ತಲುಪುವ ಮೊದಲು, ಏಳು ಹಂತಗಳ ಲೋಕಸಭಾ ಚುನಾವಣಾ ಪ್ರಚಾರದ ಮುಕ್ತಾಯದ ನಂತರ ಪ್ರಧಾನಿ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜೂನ್ 1 ರಂದು ನಡೆಯಲಿರುವ ಅಂತಿಮ ಮತದಾನದ ಹಂತಕ್ಕಾಗಿ ಪಂಜಾಬ್ ನ ಹೋಶಿಯಾರ್ಪುರದಲ್ಲಿ ಗುರುವಾರ ಅವರ ಕೊನೆಯ ಚುನಾವಣಾ ಪ್ರಚಾರ ನಡೆಯಿತು.

