
Read Time:1 Minute, 15 Second
ಜಾರ್ಖಂಡ್ : 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್ ಪ್ರತ್ಯಕ್ಷವಾಗಿ, ಹಾವಿನ ರೀತಿಯಲ್ಲಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಘಟನೆಯು ಜಾರ್ಖಂಡ್ನಲ್ಲಿ (jharkhand) ನಡೆದಿದೆ. ಕಳೆದ ಮೂರು ತಿಂಗಳಿನಿಂದ ಬಾಲಕಿ ಕಾಣೆಯಾಗಿದ್ದಳು.
ಆದರೆ ಇತ್ತೀಚೆಗೆ ಆಕೆ ರಾಣಿದಿಹ್ ಗುಪ್ತಾ ಧಾಮ್ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಅವಳು ಹಾವಿನಂತೆ ವರ್ತಿಸುತ್ತಿದ್ದಾಳೆ ಎನ್ನಲಾಗಿದೆ. ಆಕೆ ಹಾವಿನಂತೆ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ವಿಡಿಯೋದಲ್ಲಿ ಏನಿದೆ?
ವಿಡಿಯೊದಲ್ಲಿರುವ ಹುಡುಗಿ ಗುಹೆಯ ನೆಲದ ಮೇಲೆ ಹಾವಿನಂತೆ ತೆವಳುತ್ತಾ ತನ್ನ ನಾಲಿಗೆಯನ್ನು ಹಾವಿನಂತೆ ಹೊರಗೆ ಚಾಚುತ್ತಿದ್ದಾಳೆ. ಗುಹೆಯಲ್ಲಿ ಕಂಡುಬರುವ ಈ ಹುಡುಗಿಯ ಈ ರೂಪವನ್ನು ನೋಡಲು ಗ್ರಾಮಸ್ಥರ ಗುಂಪು ಅಲ್ಲಿ ನೆರೆದಿದ್ದು, ಮನೆಯವರು ಆಕೆಗೆ ಪೂಜೆ ಮಾಡಿದ್ದಾರೆ.


