
Read Time:1 Minute, 19 Second
ಉಡುಪಿ : ಕುಂದಾಪುರ ಸಮೀಪ ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದು ದನ ಕಳ್ಳತನ ಮಾಡಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಶಂಕರನಾರಾಯಣ ಸರ್ಕಲ್‌ನಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಹಸುವನ್ನು ಸೋಮವಾರ ಮುಂಜಾನೆ ಹೈ ಎಂಡ್ ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಈ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಮೂರ್ನಾಲ್ಕು ದನಗಳ್ಳರು ಐಷಾರಾಮಿ ಕಾರಿನಲ್ಲಿ ಬಂದು ರಸ್ತೆ ಬದಿ ಮಲಗಿದ್ದ ಹಸುವನ್ನು ಎಳೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತರ ಹಸುಗಳು ಅಡ್ಡಿಪಡಿಸಿದರೂ ದುಷ್ಕರ್ಮಿಗಳು ಬಲವಂತವಾಗಿ ಮತ್ತೊಂದು ಹಸುವನ್ನು ಹಿಡಿಕೊಳ್ಳಲು ಪ್ರಯತ್ನಿಸಿದರು. ಬಸ್ ನಿಲ್ದಾಣದ ಬಳಿಯಿದ್ದ ಬೀಟ್ ಪೊಲೀಸರು ಓಡಿ ಬಂದು ಕಳ್ಳರನ್ನು ಹಿಡಿಯಲು ಯತ್ನಿಸಿದರು. ಕಳ್ಳರು ಪೊಲೀಸರ ಮೇಲೆ ತಮ್ಮ ಕಾರನ್ನು ಚಲಾಯಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದ ಕಾರಣ ಇತರ ಹಸುಗಳು ಬಚಾವಾಗಿವೆ.

